More

    ಭರ್ತಿಯಾಗುತ್ತಿದೆ ಕಬಿನಿ ಒಡಲು

    ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಆರು ದಿನಗಳಲ್ಲಿ 16 ಅಡಿ ನೀರು ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು, ಜಲಾಶಯದ ಒಡಲು ಭರ್ತಿಯಾಗುತ್ತಿದೆ.


    2,284 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯ ಯಾವಾಗಲೂ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲೇ ಭರ್ತಿಯಾಗುತ್ತದೆ. ಅತಿಹೆಚ್ಚು ಸಮಯ ಜೂನ್ ಅಂತ್ಯದಲ್ಲೇ ಭರ್ತಿಯಾಗಿ ಜುಲೈ ಆರಂಭದಲ್ಲೇ ಬಾಗಿನ ಸ್ವೀಕರಿಸಿದೆ.

    ಕಳೆದ ಮೂರು ವರ್ಷವೂ ಆರಂಭದಲ್ಲಿ ಕೇರಳದ ವೈನಾಡು ಪ್ರಾಂತ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದೆ ನಿಗದಿತ ಸಮಯದಲ್ಲಿ ಡ್ಯಾಂ ಭರ್ತಿಯಾಗಲಿಲ್ಲ. ಆದರೂ, ಆಗಸ್ಟ್ ವೇಳೆಗೆ ಭರ್ತಿಯಾಗಿ ತಮಿಳುನಾಡಿಗೂ ನೀರು ಹರಿಸಲಾಗಿತ್ತು. ಈ ಬಾರಿ ಜುಲೈ ಮೊದಲ ವಾರದಲ್ಲಿ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಆರು ದಿನಗಳಲ್ಲೇ ಜಲಾಶಯಕ್ಕೆ 5 ಟಿಎಂಸಿ ನೀರು ಹರಿದು ಬಂದಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಜುಲೈ ಅಂತ್ಯಕ್ಕೆ ಜಲಾಶಯ ಭರ್ತಿಯಾಗುವ ಆಶಾಭಾವ ಮೂಡಿದೆ.


    ಜು.3 ರಂದು ಬೆಳಗ್ಗೆ 2,252.26 ಅಡಿಗಳಷ್ಟಿದ್ದ ಜಲಾಶಯದ ಕನಿಷ್ಠ ನೀರಿನ ಮಟ್ಟ ಸದ್ಯ 2268.57 ಅಡಿಗಳಿಗೆ ಏರಿಕೆಯಾಗಿದೆ. ಜತೆಗೆ, 1,174 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಭಾನುವಾರ 13,453 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರಿದರೆ ಜುಲೈ ಅಂತ್ಯದ ವೇಳೆಗೆ ಜಲಾಶಯ ಭರ್ತಿಯಾಗಲಿದೆ. ಸದ್ಯ 500 ಕ್ಯೂಸೆಕ್ ಹೊರಹರಿವು ಇದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 9.99 ಟಿಎಂಸಿ ನೀರು ಸಂಗ್ರಹವಾಗಿದೆ.

    ಪ್ರತಿವರ್ಷ ಮುಂಗಾರು ಮಳೆಯ ಆರಂಭದಲ್ಲೇ ಭರ್ತಿಯಾಗುತ್ತಿದ್ದ ಕಬಿನ ಜಲಾಶಯ 2016ರಲ್ಲಿ 2275 ಅಡಿ ದಾಟಲೇ ಇಲ್ಲ. ಇನ್ನು ಕೇರಳ ಮತ್ತು ಕರ್ನಾಟಕದಲ್ಲಿ ಹೆಚ್ಚು ಮಳೆಯಾಗದ ಕಾರಣ 2006ರಲ್ಲಿ ಜಲಾಶಯದಲ್ಲಿ 2271 ಅಡಿಗಳಷ್ಟು ಮಾತ್ರ ನೀರು ಸಂಗ್ರಹವಾಗಿತ್ತು. ಇವುಗಳನ್ನು ಬಿಟ್ಟರೆ ಬಹುತೇಕ ಎಲ್ಲ ವರ್ಷಗಳಲ್ಲೂ ಜಲಾಶಯ ಭರ್ತಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts