More

    ಕಬ್ಬಡಿ ಪಂದ್ಯಾವಳಿಗೆ ಶಾಸಕ ಕದಲೂರು ಉದಯ್ ಚಾಲನೆ

    ಕೆ.ಎಂ.ದೊಡ್ಡಿ: ಸಮೀಪದ ಕಾರ್ಕಹಳ್ಳಿಯಲ್ಲಿ ಇತ್ತೀಚೆಗೆ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಗೆ ಶಾಸಕ ಕದಲೂರು ಉದಯ್ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಸೋಲು ಗೆಲುವು ಸಹಜ. ಸೋಲಿನಿಂದ ದೃತಿಗೆಡದೆ, ಸೋಲೆ ಗೆಲುವಿನ ಮೆಟ್ಟಿಲು ಎಂದು ಮುನ್ನುಗಬೇಕು. ಆಗ ಮಾತ್ರ ಗೆಲುವು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ಯುವಕರು ಕ್ರಿಕೆಟ್‌ಗಿಂತ ಕಬ್ಬಡಿ ಸೇರಿದಂತೆ ಇತರ ದೇಶಿ ಕ್ರೀಡೆಗಳತ್ತ ಮುಖ ಮಾಡಬೇಕು. ಕಬ್ಬಡಿ ಆಟಕ್ಕೆ ಉತ್ತೇಜನ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

    ದೇಶಿ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುತ್ತಿರುವುದು ಸಂತಷದ ವಿಷಯ. ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿರುವ ಕಬ್ಬಡಿಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಮಣ್ಣಿನ ಅಂಕಣದಲ್ಲಿ ಬರಿಗಾಲಲ್ಲಿ ಆಡುತ್ತಿದ್ದ ಕ್ರೀಡಾಪಟುಗಳು ಇದೀಗ ಮ್ಯಾಟ್ ಮೇಲೆ ಶೂಗಳನ್ನು ಧರಿಸಿ ಆಟವಾಡಲಾರಂಭಿಸಿದ್ದಾರೆ ಎಂದರು.

    ಪ್ರಥಮ ಬಹುಮಾನ ಮುಟ್ಟನಹಳ್ಳಿ ತಂಡ, ದ್ವೀತಿಯ ಬಹುಮಾನ ಕಾರ್ಕಹಳ್ಳಿ ಬಸವೇಶ್ವರ ಯುವಕರ ಬಳಗ, ತೃತೀಯ ಬಹುಮಾನ ನಗುವನಹಳ್ಳಿ ಬಾಯ್ಸ ತಂಡ ಪಡೆಯಿತು. ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಖಂಡರಾದ ಸಚಿನ್, ಬಾಲು, ಕೆ.ಬಿ.ನಂದನ್, ಸಂಜಯ್. ಕೆ.ಟಿ.ಸಿದ್ದು ಪಟೇಲ್, ಪ್ರದೀಪ್, ಶ್ರೀಧರ್, ಮಹೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts