More

    ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ 32ನೇ ಮಾಸಿಕ ಕಾರ್ಯಕ್ರಮ!ಶಿವಶರಣರ ವಚನ ಬದುಕಿನ ದಾರಿದೀಪ: ಪ್ರೊ. ಸುಧಾ ಹುಚ್ಚಣ್ಣವರ

    ಗದಗ: ಶಿವಶರಣರು ರಚಿಸಿದ ವಚನಗಳು ಮಾನವನ ಬದುಕಿನ ದಾರಿದೀಪಗಳಾಗಿದ್ದು ಅಲ್ಲದೆ ಸಮಾಜವನ್ನು ಆದರ್ಶದೆಡೆಗೆ ತಂದು ನಿಲ್ಲಿಸುವ ಶಕ್ತಿ ಹೊಂದಿವೆ. ಎಂದು ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು.

    ವಿವೇಕಾನಂದ ನಗರದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಜೀವನ ದರ್ಶನ ೩೨ನೇ ಮಾಸಿಕ ಕಾರ್ಯಕ್ರಮದ ಉಪನ್ಯಾಸದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಏಕೈಕ ರಾಷ್ಟ್ರ. ನಾವು ಉಸಿರಾಡುವ ಗಾಳಿ, ಜಲ, ನೆಲ, ಆಹಾರ ಹೇಗೆ ಒಂದಾಗಿದೆಯೋ ಹಾಗೆಯೇ ನಮ್ಮ ಭಾಷೆ, ವೇಷ-ಭೂಷಣ, ಕಲೆ, ಬೇರೆಯಾಗಿದ್ದರು ಭಾವನೆಗಳು ಒಂದೇ ಆಗಿವೆ. ದೇಶದಲ್ಲಿ ಅನೇಕ ಜಾತಿ, ಭಾಷೆ ಇದ್ದರೂ ದೇಶ ಒಂದೇ ಆಗಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿದಲ್ಲಿ ವಿಶ್ವಕ್ಕೆ ಭಾರತ ಗುರುವಾಗಲಿದೆ. ಇದೇ ಇಂದಿನ ಯುವ ಜನಾಂಗದ ಮುಂದೆ ಇರುವ ಗುರಿಯಾಗಿದೆ. ಅದಕ್ಕಾಗಿ ಇಂಥ ಕಾರ್ಯಕ್ರಮಗಳಲ್ಲಿ ಯುವಜನರು ಒಂದಾಗುವ ಸಂಕಲ್ಪ ಮಾಡುವಂತೆ ಕರೆ ನೀಡಿದರು.

    ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಪ್ರೊ. ಎಂ ಎನ್ ಕಾಮನಹಳ್ಳಿ ಅವರು ಮಾತನಾಡಿ ದೇಶ ನಮಗೇನು ಮಾಡಿದೆ ಅನ್ನುವದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ. ಇದನ್ನು ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕಿದೆ. ಅದರಂತೆ ರಾಷ್ಟ್ರೀಯ ಭಾವೈಕ್ಯತೆ, ಏಕತೆ, ಸಹೋದರತ್ವದಿಂದ ಎಲ್ಲವನ್ನೂ ಸಾಧಿಸಬಹುದು. ಶಿಕ್ಷಣ ಎಂಬುದು ನಿಜವಾದ ಅಸ್ತ್ರವಾಗಿದೆ ಇದರಿಂದ ಇಡೀ ಜಗತ್ತನ್ನು ಅಭಿವೃದ್ದಿಯತ್ತ ಬದಲಾಯಿಸಬಹುದು ಎಂದರು.

    ನಂತರ ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ವಿ. ವಾಯ್. ಮಕ್ಕಣ್ಣವರ ಮಾತನಾಡಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯು ಸದ್ಭಾವನಾ ಸಮಿತಿ ಆಗಿದೆ. ಈ ಸಮಿತಿ ೨೫ ವರ್ಷಗಳನ್ನು ಪೂರೈಸಿ  ಜನರ ಮನಸ್ಸು ಕಟ್ಟುವ ಕಾರ್ಯ ಮಾಡುತ್ತಿದೆ ಇನ್ನೂ ಹಲವಾರು ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬರಲಿ ಎಂದು ಶುಭ ಹಾರೈಸಿದರು.

     ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ಬಿ.ಎಸ್.ಎಫ್. ಅಸಿಸ್ಟೆಂಟ್ ಕಮಾಂಡರ್ ಅಕ್ಷಯಕುಮಾರ ತಡಹಾಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಯುವ ಪೀಳಿಗೆ ತಯಾರಿ ಮಾಡಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ವಿ. ವಾಯ್. ಮಕ್ಕಣ್ಣವರ ಅಕ್ಷಯಕುಮಾರ ತಡಹಾಳ ರವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಂಗೀತ ವಿದ್ವಾನ್ ಮಣಕವಾಡ ಗುರುಗಳಿಂದ ಹಾಗೂ ಎಸ್ ಆಯ ಅಣ್ಣಿಗೇರಿ ಗುರುಗಳಿಂದ ಸಂಗೀತ ಭಕ್ತಿ ಸೇವೆ ಜರುಗಿತು.

    ನಾಡ ಗೀತೆ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ ಸ್ವಾಗತ ಹಾಗೂ ಪರಿಚಯ ಭಾಷಣ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು  ಸಮಿತಿಯ ಕಾರ್ಯದರ್ಶಿಗಳಾದ ಕೆ.ಆಯ್. ಕುರುಗೋಡ ನಿರೂಪಣೆ ಮಾಡಿದರು. ಶ್ರೀಮತಿ ಕಸ್ತೂರಿಬಾಯಿ ಕಮ್ಮಾರ ಮಂಗಳಾರತಿ ಹಾಡಿದರು.ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಬಸವರಾಜ ಸುಂಕದ,ಸಹ ಕಾರ್ಯದರ್ಶಿ ಎಂ. ಕೆ. ಲಕ್ಕುಂಡಿ, ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ್, ಸಹಕೋಶಾಧ್ಯಕ್ಷರಾದ ಆರ್.ಬಿ.ಒಡೆಯರ, ನಿರ್ದೇಶಕರಾದ ವಿ. ಆರ್. ಕುಲಕರ್ಣಿ, ಅಮರೇಶ್ ಹಾದಿ, ಕಾರ್ತಿಕ್ ಮಡಿವಾಳರ್ ಮಹಾದೇವಿ ಗೋಗೇರಿ, ರಾಧಿಕಾ ಬಂದಂ, ಬಸವರಾಜ ಹಿರೇಮಠ,ಪ್ರಭಯಸ್ವಾಮಿ ಹಿರೇಮಠ ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts