More

    ಇಲ್ಲವಾದರೆ ಈ ಸಲ ತಪ್ಪು ನಮ್ಮದೇ ಎಂದ ಆರೋಗ್ಯ ಸಚಿವ ಕೆ. ಸುಧಾಕರ್​..!

    ಬೆಂಗಳೂರು: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಹೆಚ್ಚಾಗಿದ್ದು, ದಿನೇದಿನೆ ಸೋಂಕಿತ ಪ್ರಕರಣಗಳ ಜತೆಗೆ ಸಾವಿನ ಸಂಖ್ಯೆಯು ಏರುಗತಿಯಲ್ಲಿ ಇರುವುದರಿಂದ ಸರ್ಕಾರ ಕಠಿಣ ತೆಗೆದುಕೊಳ್ಳುವ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ.

    ಮತ್ತೊಮ್ಮೆ ಲಾಕ್​ಡೌನ್​ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಲಾಕ್​ಡೌನ್​ನಿಂದ ಸಾಕಷ್ಟು ಮಂದಿ ನೊಂದಿರುವುದರಿಂದ ಸರ್ಕಾರ ಕರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಲಾಕ್​ಡೌನ್​ ಹೇರುವ ಪ್ರಮೇಯವೇ ಬರುವುದಿಲ್ಲ ಎಂದಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್​ ಜನರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿರಿ: ಕೆಲ್ಸ ಮುಗಿಸಿ ಬೆಳಗ್ಗೆ ಮನೆಗೆ ಬಂದವನು ಪತ್ನಿ, ಮಕ್ಕಳ ಸ್ಥಿತಿ ಕಂಡು ಕುಸಿದುಬಿದ್ದ: ನಡೆದಿತ್ತು ಘೋರ ದುರಂತ!

    ಮಾಸ್ಕ್​ ಧರಿಸುವುದು, ಭೌತಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಕೈಗಳನ್ನು ಶುಚಿಗೊಳಿಸುವ ಈ ಮೂರು ನಿಯಮಗಳನ್ನು ಚಾಚೂ ತಪ್ಪದೇ ಅನುಸರಿಸಿದರೆ, ಕರೊನಾ ವಿರುದ್ಧ ಜಯ ನಮ್ಮದೆ. ಒಂದು ವೇಳೆ ನಿರ್ಲಕ್ಷಿಸಿದರೆ, ಈ ಸಲ ತಪ್ಪು ನಮ್ಮದೆ. ಹೀಗಾಗಿ ಶಿಸ್ತು, ಸಂಯಮ ಹಾಗೂ ಸ್ವಯಂ ನಿಯಂತ್ರಣ ಪಾಲಿಸೋಣ ಮತ್ತು ಕೊರೊನಾ ಎರಡನೇ ಅಲೆಯನ್ನು ಹಿಮ್ಮೆಟ್ಟಿಸೋಣ ಎಂದಿದ್ದಾರೆ.

    ಯುಗಾದಿ ಹೊಸ ವರ್ಷದಂದು ಸಾಮಾಜಿಕ ಜಾಲತಾಣ ಲೋಕಕ್ಕೆ ಅದ್ಧೂರಿ ಎಂಟ್ರಿ ಕೊಟ್ಟ ಕ್ರೇಜಿಸ್ಟಾರ್!

    ಯುಗಾದಿ ಹಬ್ಬದಂದೇ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

    ಅಂಗನವಾಡಿಯಲ್ಲಿದೆ 90 ಕಾರ್ಯಕರ್ತೆ, ಸಹಾಯಕಿ ಹುದ್ದೆಗಳು- 4ನೇ ತರಗತಿಯವರಿಗೂ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts