More

    ಇಷ್ಟವಿದ್ದರೆ ಕೆಲಸ ಮಾಡಲಿ, ಇಲ್ಲದಿದ್ದರೆ ಅವರ ದಾರಿ ನೋಡಿಕೊಳ್ಳಲಿ: ಸಚಿವ ಸುಧಾಕರ್​

    ಬೆಂಗಳೂರು: ಮೈಸೂರಿನಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಆಕ್ರೋಶ ಹೊರಹಾಕಿ, ಪ್ರತಿಭಟನೆ ಮಾಡುವವರು ಇಷ್ಟವಿದ್ದರೆ ಕೆಲಸ ಮಾಡಲಿ, ಇಲ್ಲದಿದ್ದರೆ ಅವರ ದಾರಿ ನೋಡಿಕೊಳ್ಳಲಿ ಎಂದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡುವವರು ಸರ್ಕಾರದಲ್ಲಿರಬೇಕು. ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಮಾಡಲಿ ಎಂದರು ಗರಂ ಆದರು.

    ಇದನ್ನೂ ಓದಿ: ಅಪ್ರಾಪ್ತೆ ಮೇಲೆ 30 ಯುವಕರಿಂದ ರೇಪ್​: ಇಸ್ರೇಲ್​ನಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಯ ಅಚ್ಚರಿ ಹೇಳಿಕೆ!

    ಪ್ರತಿಭಟನೆ ಕರೆ ಕೊಟ್ಟವರಿಗೆ ಗಣೇಶ ಹಬ್ಬದ ದಿನ ಆ ದೇವರು ಸದ್ಬುದ್ಧಿ ಕೊಡಲೆಂದು ಆಶಿಸುತ್ತೇನೆ. ಯಾವ ಕಾರಣಕ್ಕೆ ಪ್ರತಿಭಟನೆಗೆ ಪ್ರೇರಣೆ ಕೊಡ್ತಿದ್ದಾರೋ ನಂಗೆ ಗೊತ್ತಿಲ್ಲ. ಆದರೆ, ಆ ಕುಟುಂಬದ ಹೆಣ್ಣುಮಗಳು ಸರ್ಕಾರದ ತೀರ್ಮಾನಗಳಿಗೆ ಒಪ್ಪಿದ್ದಾರೆ. ಅವರ ಸ್ವಂತ ಮಾವಂದಿರು ಸಹ ಸರ್ಕಾರದ ಕ್ರಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ನಡುವೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಅಮಾಯಕ ವೈದ್ಯರನ್ನು ಕೂರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಯಾರಿಗೂ ಕೂಡ ಶೋಭೆ ತರುವಂತಹದ್ದಲ್ಲ ಎಂದು ಟೀಕಿಸಿದರು.

    ಇದೇ ವೇಳೆ ಸಿಇಒ ಅಮಾನತ್ತು ಬೇಡಿಕೆಯನ್ನು ತಳ್ಳಿಹಾಕಿದ ಸುಧಾಕರ್, ಯಾರನ್ನು ಯಾವ ಕಾರಣಕ್ಕೆ ಅಮಾನತು ಮಾಡಬೇಕೆಂದು ನನಗೆ ಗೊತ್ತಿದೆ. ನಾನೇ ಮಂತ್ರಿಯಾಗಿ ಇಷ್ಟು ಪರೀಕ್ಷೆ ಮಾಡಿ ಎಂದು ಡಿಸಿ ಹಾಗೂ ಸಿಇಒಗೆ ಟಾರ್ಗೆಟ್ ಕೊಡುತ್ತೇನೆ. ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡುವವರು ಸರ್ಕಾರದಲ್ಲಿರಲಿ. ಇಲ್ಲವಾದರೆ ಅವರು ಸ್ವತಂತ್ರರಿದ್ದಾರೆ. ಬೇಕಾದರೆ ಖಾಸಗಿಯಲ್ಲಿ ಕೆಲಸ ಮಾಡಲಿ ಎಂದು ನಿಷ್ಠುರವಾಗಿ ಹೇಳಿದರು.

    ಮೃತ ನಾಗೇಂದ್ರ ಹೆಂಡತಿ ಈ ಬಗ್ಗೆ ವಿರೋಧಿಸಲಿ ಅಥವಾ ಮಾತನಾಡಲಿ ಆಗ ನಾನು ಒಪ್ಪುತ್ತೇನೆ. ಅದು‌ ಬಿಟ್ಟು ಯಾವನೋ ದಾರಿಯಲಿ ಹೋಗುವವನು ಮಾತನಾಡಿದರೆ ಹೆದರಲ್ಲ. ಅಲ್ಲಿ ಪ್ರತಿಭಟನೆಗೆ ಕುಳಿತಿರುವುದು ಯಾರೆಂದು ನನಗೆ ಗೊತ್ತಿದೆ. ಎಂಎಲ್​ಸಿಗೆ ನಿಂತು ಸೋತಿರುವವನು ಎಲ್ಲರನ್ನು ಎತ್ತಿಕಟ್ಟಿದ್ದಾರೆಂದು ಪರೋಕ್ಷವಾಗಿ ರವೀಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು.

    ಇದನ್ನೂ ಓದಿ: ವಿರೋಧದ ನಡುವೆಯೂ ಮದ್ವೆ ಮಾಡಿಕೊಂಡ ಪ್ರೇಮಿಗಳ ಪರದಾಟ: ರಕ್ಷಣೆಗಾಗಿ ಸರ್ಕಾರಕ್ಕೆ ಮನವಿ

    ಘಟನೆ ಹಿನ್ನೆಲೆ ಏನು?
    ನಂಜನಗೂಡು ಟಿಎಚ್‌ಒ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ​ ವಿರುದ್ಧ ಕೆಲಸದ ಒತ್ತಡವೇರಿ ಸಾವಿಗೆ ಕಾರಣವಾಗಿರುವ ಆರೋಪ ಎದುರಾಗಿದೆ. ಹೀಗಾಗಿ ಮಿಶ್ರಾ ಅವರ ಅಮಾನತ್ತಿಗಾಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದರೂ ಅಮಾನತ್ತಿಗಾಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ದಿನದಿಂದ ದಿನಕ್ಕೆ ಉಬ್ಬಿದ ಹೊಟ್ಟೆ: ಭಾರಿ ನೋವೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts