More

    ಕೆ-ಸೆಟ್, ಪಿಎಸ್‌ಐ ಕೀ ಉತ್ತರ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್ ಕೀ ಉತ್ತರ ಮತ್ತು ಪಿಎಸ್‌ಐ ಮರು ಪರೀಕ್ಷೆ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿದೆ.

    ಜ.13ರಂದು ಕೆ-ಸೆಟ್ ಮತ್ತು ಜ.23ರಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಕೆಇಎ ವೆಬ್‌ಸೈಟ್‌ನಲ್ಲಿರುವ ಲಿಂಕ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
    ಕೆ ಸೆಟ್ ಪರೀಕ್ಷೆಗೆ ಕುರಿತಂತೆ ಪ್ರತಿ ಆಕ್ಷೇಪಣೆಗೆ 300 ರೂ.ಗಳಂತೆ ಜ.31ರಿಂದ ಫೆ.7ರ ಅವಧಿಯಲ್ಲಿ ಶುಲ್ಕ ಪಾವತಿಸಿ ಆಕ್ಷೇಪಣೆಗಳನ್ನು ಫೆ.7ರ ಸಂಜೆ 5 ರೊಳಗೆ ಸಲ್ಲಿಸಬಹುದು.

    ಪಿಎಸ್‌ಐ ಪರೀಕ್ಷೆಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಅರ್ಜಿ ಸಂಖ್ಯೆ, ಹೆಸರು, ಜನ್ಮ ದಿನಾಂಕವನ್ನು ನಮೂದಿಸಬೇಕು. ಪೂರಕ ದಾಖಲೆಗಳೊಂದಿಗೆ ಫೆ.5ರ ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕವೇ ಸಲ್ಲಿಸಬೇಕು. ಪತ್ರ ಮತ್ತು ಇ- ಮೇಲ್‌ನಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts