More

    ನಾನು ಮನೆಯಲ್ಲೇ ಇರುವೆ ಎಂಬ ಸ್ಲೇಟ್​ ಹಿಡಿಸಿ, ಸಾಮಾಜಿಕ ಜಾಲತಾಣಕ್ಕೆ ಹಾಕಿಸಿ ವಿನೂತನ ಶಿಕ್ಷೆ, ಪೊಲೀಸರ ಪ್ರಯೋಗ

    ಬೆಂಗಳೂರು: ಕರೊನಾ ಪಿಡುಗು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್​ಡೌನ್​ ಘೋಷಿಸಿವೆ. ಲಾಕ್​ಡೌನ್​ ಸಂದರ್ಭದಲ್ಲಿ ಸೆಕ್ಷನ್​ 144 ಜಾರಿಯಲ್ಲಿರುತ್ತದೆ. ಹಾಗಾಗಿ ಜನ ಮತ್ತು ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೇ ಬರುವಂತಿಲ್ಲ. ಆದರೂ ಜನರು ಕುತೂಹಲಕ್ಕೋ ಅಥವಾ ದಿನಸಿ, ಔಷಧ ಖರೀದಿ ನೆಪ ಮಾಡಿಕೊಂಡು ಬೇಕೆಂದೇ ಮನೆಯಿಂದ ಹೊರಬರುತ್ತಿದ್ದಾರೆ.

    ಇದನ್ನು ತಡೆಯಲು ಪೊಲೀಸರು ಆರಂಭದಲ್ಲಿ ಲಾಠಿ ಹಿಡಿದು ಬೆದರಿಸಿದರು. ವಾಹನಗಳನ್ನು ಜಪ್ತಿ ಮಾಡಿದರು. ಬಸ್ಕಿ ಹೊಡೆಸಿದರು. ಆದರೆ ನೀವು ಏನೇ ಮಾಡಿ, ನಾವು ಮಾತ್ರ ಮನೆಯಿಂದ ಹೊರಬಂದೇ ಬರುತ್ತೇವೆ ಎಂದು ಜನರು ಹಠಕ್ಕೆ ಬಿದ್ದು ಮನೆಯಿಂದ ಹೊರಗೆ ಬಂದು ಮುಕ್ತವಾಗಿ ಓಡಾಡುವುದನ್ನು ಮಾಡುತ್ತಿದ್ದಾರೆ.

    ಇದೀಗ ಜನರ ಮುಕ್ತ ಸಂಚಾರವನ್ನು ನಿರ್ಬಂಧಿಸಲು ಕೆ.ಆರ್​. ನಗರ ಪೊಲೀಸರು ವಿನೂತನ ವಿಧಾನ ಕಂಡುಕೊಂಡಿದ್ದಾರೆ. ಹೊರಬರುವ ವ್ಯಕ್ತಿಯ ಕೈಗೆ ಸ್ಲೇಟ್​ ಕೊಟ್ಟು ಅದರ ಮೇಲೆ ನಾನು ಮನೆಯಿಂದ ಹೊರಬಂದಿದ್ದೇನೆ. ನನ್ನನ್ನು ಕ್ಷಮಿಸಿ. ಇನ್ನು ನಾನು ಮನೆಯಲ್ಲೇ ಇರುತ್ತೇನೆ ಎಂದು ಬರೆಯಿಸಿ, ಕೈಯಲ್ಲಿ ಸ್ಲೇಟ್​ ಹಿಡಿಸಿ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.

    ಬಳಿಕ ಆ ಫೋಟೋವನ್ನು ತಪ್ಪು ಮಾಡಿದ ವ್ಯಕ್ತಿಯ ಫೇಸ್​ಬುಕ್​ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಡಿಪಿಯಾಗಿಸುವ ಜತೆಗೆ ಅವುಗಳಲ್ಲಿ ಪೋಸ್ಟ್​ ಮಾಡಿಸುತ್ತಿದ್ದಾರೆ. ಆಗಲಾದರೂ ಪಾಪಪ್ರಜ್ಞೆ ಕಾಡಿ, ಅವಮಾನದಿಂದಾಗಿ ಲಾಕ್​ಡೌನ್​ ಸಂದರ್ಭದಲ್ಲಿ ಜನರು ಮನೆಗಳನ್ನು ಬಿಟ್ಟು ಹೊರಬರುವುದಿಲ್ಲ ಎಂಬುದು ಪೊಲೀಸರ ಆಲೋಚನೆಯಾಗಿದೆ. ಇದು ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿದೆಯಂತೆ!

    ಲಖನೌ ಜನತೆಗೆ 500 ರೂ. ನೋಟುಗಳು ತಂದ ಪೇಚು! ಇಡೀ ರಾತ್ರಿ ಅವರು ನಿದ್ದೆಗೆಟ್ಟಿದ್ದು ಈ ಕಾರಣಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts