More

    ಫೆ.1ರಂದು ಅರ್ಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

    ಕೆ.ಆರ್.ನಗರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಹಳೆ ಎಡತೊರೆಯ ಅರ್ಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಫೆ.1ರಂದು ವಿಜೃಂಭಣೆಯಿಂದ ನಡೆಯಲಿದೆ.

    ಅಂದು ಬೆಳಗ್ಗೆ 11.30 ರಿಂದ 12.30 ರವರೆಗೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ರಥೋತ್ಸ ವ ಶೈವಾಗಮ ಸಂಪ್ರದಾಯದಂತೆ ನಡೆಯಲಿದೆ. ಶಾಸಕ ಸಾ.ರಾ.ಮಹೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದು, ಸಂಸದೆ ಸುಮಲತಾ ಅಂಬರೀಷ್ ಭಾಗವಹಿಸಲಿದ್ದಾರೆ.

    ಈಗಾಗಲೇ ತಾಲೂಕು ಆಡಳಿತ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ದೇವಸ್ಥಾನದ ಸುತ್ತ ಸ್ವಚ್ಛತಾ ಕಾರ್ಯ, ತೇರು ಸಿದ್ಧಪಡಿಸುವುದು, ಜಾತ್ರೆಗೆ ಅಂಗಡಿ ಕಟ್ಟುವ ಕೆಲಸ ಭರದಿಂದ ಸಾಗಿದೆ.

    ಧಾರ್ಮಿಕ ಕಾರ್ಯಗಳು: ಜ.30ರಂದು ಹಗಲು ರುದ್ರಾಭಿಷೇಕ, ಸಂಜೆ ಕಾಶಿಯಾತ್ರೆ ಮತ್ತು ಕಲ್ಯಾಣೋತ್ಸವ, 31ರಂದು ಹಗಲು ರುದ್ರಾಭಿಷೇಕ, ಮಂಟಪೋತ್ಸವ, ಸಂಜೆ ವೃಷಭಾರೋಹಣೋತ್ಸವ, ಫೆ.1ರಂದು ಹಗಲು ರುದ್ರಾಭಿಷೇಕ, 7 ಗಂಟೆಗೆ ಸೂರ್ಯಮಂಡ ಲೋತ್ಸವ, 8.30ಕ್ಕೆ ಅರ್ಕಮುಡಿ ಮುಕುಟಧಾರಣೆ, 9.30ಕ್ಕೆ ಯಾತ್ರದಾನೋತ್ಸವ 11.30 ರಿಂದ 12.30 ರೊಳಗೆ ಬ್ರಹ್ಮ ರಥೋತ್ಸವ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ ಮಂಟಪೋತ್ಸವ, ಶಾಂತೋತ್ಸವ, ಡೋಲೋತ್ಸವ ಹಾಗೂ ಕೀರ್ತನಾ ಸೇವೆ ನಡೆಯಲಿದೆ.

    ಫೆ.2ರಂದು ಹಗಲು ರುದ್ರಾಭಿಷೇಕ, ಸಂಜೆ ಅಶ್ವಾರೋಹಣೋತ್ಸವ, ಸಂಧಾನ ಸೇವೆ, 3ರಂದು ಹಗಲು ರುದ್ರಾಭಿಷೇಕ, ಅಂಗವಿಕಲ ರಿಗೆ ಅನ್ನದಾನ ಹಾಗೂ ಸಂಜೆ ತೆಪ್ಪೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts