More

    ಕೆ.ಎಚ್.ಮುನಿಯಪ್ಪಉಚ್ಛಾಟನೆ ಮಾಡಿ, ಪಕ್ಷ ವಿರೋಧ ಚಟುವಟಿಕೆ ಆರೋಪ ಮಾಡಿದ ವರ್ತೂರ್ ಪ್ರಕಾಶ್

    ಕೋಲಾರ: ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತ ಬಂದಿರುವ ಕೆ.ಎಚ್.ಮುನಿಯಪ್ಪ ಅವರನ್ನು ಉಚ್ಛಾಟಿಸದಿದ್ದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಇನ್ನಷ್ಟು ಕುಗ್ಗುವುದು ಖಚಿತ ಎಂದು ಮಾಜಿ ಸಚಿವ ವರ್ತೂರು ಆರ್. ಪ್ರಕಾಶ್ ತಿಳಿಸಿದರು.

    ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎಚ್.ಮುನಿಯಪ್ಪ ತಮ್ಮ ಉನ್ನತಿಗಾಗಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ವಿಧಾನಸಭೆ, ಇನ್ನಿತರ ಚುನಾವಣೆಗಳಲ್ಲಿ ಜೆಡಿಎಸ್, ಬಿಜೆಪಿ ಜತೆ ಕೈಜೋಡಿಸಿ ಪಕ್ಷಕ್ಕೆ ನಷ್ಟ ಉಂಟು ವಾಡಿದ್ದಾರೆಂದು ಆರೋಪಿಸಿದರು.

    ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ವಾಡಿಕೊಂಡಿದ್ದರಿಂದ ಬೇಸತ್ತ ಮಾಜಿ ಸಿಎಂ ಸಿದ್ದರಾಮಯ್ಯ ಇನ್ನು ಮುಂದೆ ಯಾವುದೇ ಚುನಾವಣೆಗೆ ಜೆಡಿಎಸ್ ಜತೆ ಮೈತ್ರಿ ವಾಡಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದರು. ಆದರೆ ಕೆ.ಎಚ್.ಮುನಿಯಪ್ಪ ಅರಹಳ್ಳಿ ರೇಷ್ಮೆ ಬೆಳೆಗಾರರ ಸಹಕಾರ ಸಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿಷ್ಠರಾಗಿರುವ ನನ್ನ ಬೆಂಬಲಿಗರನ್ನು ಸೋಲಿಸಲು ಜೆಡಿಎಸ್, ಬಿಜೆಪಿ ಜತೆ ಹೊಂದಾಣಿಕೆ ವಾಡಿಕೊಂಡು ದ್ರೋಹ ಎಸಗಿದ್ದಾರೆ. ಇವರನ್ನು ಉಚ್ಛಾಟನೆ ವಾಡದಿದ್ದರೆ ಬರಲಿರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಎಚ್ಚರಿಸಿದರು.

    ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ, ಶಾಸಕ ಕೆ.ಆರ್.ರಮೇಶ್‌ಕುವಾರ್, ಶಿಡ್ಲಟ್ಟದ ವಿ.ಮುನಿಯಪ್ಪ ಸೇರಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಯಾರ ಪರವಾಗಿ ಕೆಲಸ ವಾಡಿದ್ದಾರೆಂಬುದು ಗೊತ್ತಿದೆ. ಕೆ.ಎಚ್.ರಿಂದ ನೊಂದಿರುವವರು ಶಿಸ್ತು ಕ್ರಮಕ್ಕೆ ವರಿಷ್ಠರನ್ನು ಒತ್ತಾಯಿಸದಿದ್ರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದರು.

    ಮುನಿಯಪ್ಪ ಸ್ಪಷ್ಟಪಡಿಸಲಿ: ಕೆ.ಎಚ್.ಮುನಿಯಪ್ಪ ತಾವು ಮೊದಲು ಕಾಂಗ್ರೆಸ್ಸೋ ಅಥವಾ ಜೆಡಿಎಸ್ಸೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ವರ್ತೂರು, ಪಕ್ಷದ ಶಾಸಕರನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್ ಕುವಾರ್, ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್, ಊರುಬಾಗಿಲು ಶ್ರೀನಿವಾಸ್, ಎಲ್.ಎ.ಮಂಜುನಾಥ್ ಇನ್ನಿತರರು ಪ್ರಯತ್ನಿಸುತ್ತಿದ್ದಾರೆ. ಆದರೆ ಕೆ.ಎಚ್. ಇವರಿಗೆ ಟಿಕೆಟ್ ಕೊಡಿಸುವುದಕ್ಕೆ ಪ್ರಯತ್ನಿಸುವುದಿಲ್ಲ. ಏಕೆಂದರೆ ಈಗಾಗಲೇ ಪಕ್ಷದ ಮುಖಂಡ ಬೆಂಗಳೂರಿನ ಗೋವಿಂದರಾಜು ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಜತೆ ವಾತುಕತೆ ನಡೆಸಿದ್ದಾರೆ ಎಂದರು.

    ನಾನೇನು ಕಾಂಗ್ರೆಸ್ ಸೇರಬೇಕೆಂದು ಅರ್ಜಿ ಹಾಕ್ತಿಲ್ಲ. ನಾನು ಹುಟ್ಟಿನಿಂದ ಕಾಂಗ್ರೆಸ್ಸಿಗ. ಕೆ.ಎಚ್. ತಾಲೂಕು ಬೋರ್ಡ್ ಚುನಾವಣೆಗೆ ಜನತಾದಳದಿಂದ ನಿಂತಿದ್ದವರು ಎಂದು ಟಾಂಗ್ ನೀಡಿದರು.

    ಸಂಸದ ಮುನಿಸ್ವಾಮಿ ಪರ ಬ್ಯಾಟಿಂಗ್: ಮುನಿಯಪ್ಪಗಿಂತ ಸಂಸದ ಎಸ್.ಮುನಿಸ್ವಾಮಿ ನೂರು ಪಾಲು ಮೇಲು. ಪಕ್ಷ ವಿರೋಧಿ ಚಟುವಟಿಕೆ ವಾಡಲ್ಲ. 24 ಗಂಟೆ ಅಭಿವದ್ಧಿ ಕೆಲಸ ವಾಡುತ್ತಿದ್ದಾರೆ. ಮುನಿಸ್ವಾಮಿ ನನ್ನ ಶಿಷ್ಯ. ನನ್ನ ಪರವಾಗಿ ಹಿಂದೆ ವರ್ತೂರು ಕ್ಷೇತ್ರದಲ್ಲಿ ಬೈಕ್ ರ‌್ಯಾಲಿ ವಾಡಿದ್ದರು. ಸ್ನೇಹ, ವಿಶ್ವಾಸವೇ ಬೇರೆ, ರಾಜಕೀಯವೇ ಬೇರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಕೆ.ಎಚ್.ಮುನಿಯಪ್ಪ ಅವರನ್ನೇ ಬೆಂಬಲಿಸಿದ್ದೆ. ಆದರೆ ಕಾಂಗ್ರೆಸ್ ಸೇರಲು ನನಗೆ ಅಡ್ಡಿಯಾಗಿದ್ದಾರೆ ಎಂದು ವರ್ತೂರು ಹೇಳಿದರು.

    ಬರಲಿರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ನನ್ನ ಶಕ್ತಿ ತೋರಿಸುವೆ, ಕೆ.ಎಚ್.ಮುನಿಯಪ್ಪ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದಲ್ಲಿ ನಾನು ಮುಂದೆಂದೂ ಕಾಂಗ್ರೆಸ್ ಟಿಕೆಟ್ ಕೇಳುವುದಿಲ್ಲ ಎಂದು ಸವಾಲು ಹಾಕಿದರು.
    ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಜಿಪಂ ಸಾವಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ಪ್ರಸಾದ್, ಮುಖಂಡರಾದ ಬಂಕ್ ಮಂಜು, ತಂಬಿಹಳ್ಳಿ ಮುನಿಯಪ್ಪ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts