More

    ನನ್ನನ್ನು ಚೈನೀಸ್ ಎನ್ನುತ್ತಾರೆ, ಜ್ವಾಲಾ ಗುಟ್ಟಾ ಜನಾಂಗೀಯ ನಿಂದನೆ ಆರೋಪ

    ಹೈದರಾಬಾದ್: ಅಮೆರಿಕದಲ್ಲಿ ಜನಾಂಗೀಯ ಕಲಹ ಭುಗಿಲೆದ್ದ ಬೆನ್ನಲ್ಲೇ ಕ್ರೀಡಾ ಜಗತ್ತಿನಲ್ಲೂ ಜನಾಂಗೀಯ ನಿಂದನೆಗಳ ಬಗ್ಗೆ ಆರೋಪಗಳು ಶುರುವಾಗಿವೆ. ಈಗಾಗಲೆ ಫುಟ್‌ಬಾಲ್, ಕ್ರಿಕೆಟ್‌ನಲ್ಲಿ ಕೆಲ ಆಟಗಾರರು ವೃತ್ತಿಜೀವನದಲ್ಲಿ ಎದುರಾದ ಜನಾಂಗೀಯ ನಿಂದನೆಗಳ ಬಗ್ಗೆ ಮೆಲುಕು ಹಾಕುತ್ತಿದ್ದಾರೆ. ಇದೀಗ ಭಾರತದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕೂಡ ಇಂಥದ್ದೇ ಆರೋಪ ಮಾಡಿದ್ದು, ತಮ್ಮನ್ನು ‘ಚೈನೀಸ್’ ಎಂದು ಕರೆಯುತ್ತಾರೆ ಎಂದು ದೂರಿದ್ದಾರೆ.

    ಇದನ್ನೂ ಓದಿ: ಇಶಾಂತ್ ಶರ್ಮಗೆ ಸಂಕಷ್ಟ ತಂದ 6 ವರ್ಷ ಹಿಂದಿನ ಇನ್‌ಸ್ಟಾಗ್ರಾಂ ಪೋಸ್ಟ್!

    ಮಾಜಿ ಆಟಗಾರ್ತಿ ಜ್ವಾಲಾ ಗುಟ್ಟಾ ಅವರ ಅಮ್ಮ ಚೀನಾ ಮೂಲದವರು. ಹೀಗಾಗಿ ಅವರ ಲುಕ್‌ನಲ್ಲೂ ಸ್ವಲ್ಪ ಮಟ್ಟಿಗೆ ಚೀನಾದವರ ಹೋಲಿಕೆ ಇದೆ. ಇದೀಗ ಚೀನಾ ಮೂಲದ ಕರೊನಾ ವೈರಸ್ ಹಾವಳಿ ಮಾಡುತ್ತಿರುವ ಸಮಯದಲ್ಲಿ ಜ್ವಾಲಾ ಗುಟ್ಟಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳಿಗೆ ಗುರಿಯಾಗುತ್ತಿದ್ದಾರೆ. ‘ನನ್ನನ್ನು ಚೈನೀಸ್ ಎಂದು ಕರೆಯುವ ಮೂಲಕ ಜನರು ತಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಅಂಥವರನ್ನು ಕಡೆಗಣಿಸುವುದೇ ಉತ್ತಮ. ವಾಕ್‌ಸ್ವಾತಂತ್ರ್ಯ ಇರುವ ದೇಶದಲ್ಲಿ ನಾನು ಬೆಳೆದಿದ್ದೇನೆ. ನಾನು ಭಿನ್ನವಾಗಿ ಕಾಣುತ್ತೇನೆ ಎಂಬುದನ್ನು ನಾನು ಮೆಚ್ಚುಗೆಯಾಗಿ ಸ್ವೀಕರಿಸುತ್ತೇನೆ’ ಎಂದು 36 ವರ್ಷದ ಜ್ವಾಲಾ ಗುಟ್ಟಾ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮನ್ನು ‘ಹಾಫ್​ ಕರೊನಾ’, ‘ಚೀನಾ ಕಾ ಮಾಲ್’, ‘ಚಿಂಕಿ’ ಎಂದು ಕರೆಯುತ್ತಾರೆ ಎಂದೂ ಜ್ವಾಲಾ ಇತ್ತೀಚೆಗೆ ದೂರಿದ್ದರು.

    ಇದನ್ನೂ ಓದಿ: ಧೋನಿ ನಿನ್ನ ಕ್ರಿಕೆಟ್ ಜೀವನವನ್ನೇ ಕೊನೆಗೊಳಿಸುತ್ತಾರೆ ಎಂದು ಶ್ರೀಶಾಂತ್ ಹೆದರಿಸಿದ್ದು ಯಾರಿಗೆ?

    ಗೋಪಿಚಂದ್ ವಿರುದ್ಧ ಮತ್ತೆ ಕಿಡಿ

    ನನ್ನನ್ನು ಚೈನೀಸ್ ಎನ್ನುತ್ತಾರೆ, ಜ್ವಾಲಾ ಗುಟ್ಟಾ ಜನಾಂಗೀಯ ನಿಂದನೆ ಆರೋಪ
    ವೃತ್ತಿಜೀವನದಲ್ಲಿ ತಾವು ಅವಕಾಶಗಳಿಂದ ವಂಚಿತರಾದುದಕ್ಕೆ ಮಾಜಿ ಆಟಗಾರ ಹಾಗೂ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಕಾರಣ ಎಂದು ಕಾಮನ್ವಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆ ಜ್ವಾಲಾ ಮತ್ತೊಮ್ಮೆ ದೂರಿದ್ದಾರೆ. ‘ಗೋಪಿಚಂದ್ ಆಡುತ್ತಿದ್ದ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಉತ್ತಮ ಆಟಗಾರರಿರುತ್ತಿದ್ದರು. ಆದರೆ ಕಳೆದ 10-12 ವರ್ಷಗಳಿಂದ ಕೇವಲ ಹೈದರಾಬಾದ್ ಅಥವಾ ತೆಲುಗು ಭಾಷೆಯ ಆಟಗಾರರು ಮಾತ್ರ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಒಂದು ನಿರ್ದಿಷ್ಟ ಅಕಾಡೆಮಿಯ ಆಟಗಾರರು ಮಾತ್ರ ಅವಕಾಶ ಪಡೆಯುತ್ತಿದ್ದಾರೆ. ಭಾರತ ಪದಕ ಗೆದ್ದರೆ ಅದಕ್ಕೆ ಗೋಪಿಚಂದ್ ಕಾರಣ ಎನ್ನಲಾಗುತ್ತದೆ. ಅದೇ ಪದಕ ಗೆಲ್ಲದಿದ್ದರೆ ವ್ಯವಸ್ಥೆಯನ್ನು ದೂರಲಾಗುತ್ತದೆ’ ಎಂದು ಜ್ವಾಲಾ ದೂರಿದ್ದಾರೆ. ಕಿಡಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧು ಯಶಸ್ಸಿಗೆ ವಿದೇಶಿ ಕೋಚ್‌ಗಳೂ ಕಾರಣರಾಗಿದ್ದಾರೆ. ಆದರೆ ಭಾರತೀಯ ಬ್ಯಾಡ್ಮಿಂಟನ್‌ನ ಆಂತರಿಕ ರಾಜಕೀಯದಿಂದಾಗಿ ಅವರು ತಮ್ಮ ಅವಧಿಯನ್ನೂ ಪೂರ್ತಿಗೊಳಿಸದೆ ನಿರ್ಗಮಿಸಿದ್ದಾರೆ ಎಂದು ಜ್ವಾಲಾ ಆರೋಪಿಸಿದ್ದಾರೆ.

    ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts