More

    ನನ್ನನ್ನು ಮೈ ಲಾರ್ಡ್​ ಎಂದು ಸಂಬೋಧಿಸಬೇಡಿ ಎಂದ ನ್ಯಾಯಮೂರ್ತಿ

    ಚಂಡೀಗಢ್​: ಸಾಮಾನ್ಯವಾಗಿ ನ್ಯಾಯಾಲಯ ಎಂದಾಕ್ಷಣ ನಮ್ಮ ಕಣ್ಣೆದುರು ಬರುವುದು ನ್ಯಾಯಮೂರ್ತಿಗಳು, ವಕೀಲರು, ಕಟಕಟೆ. ಮೈ ಲಾರ್ಡ್​ ಎಂದು ಹೇಳುತ್ತಾ ವಕೀಲರು ವಾದ ಮಂಡಿಸುವುದನ್ನು ನೈಜವಾಗಿ ಅಥವಾ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಲ್ಲೊಬ್ಬ ನ್ಯಾಯಮೂರ್ತಿಗಳು ನನ್ನನ್ನು ಮೈ ಲಾರ್ಡ್​ ಎಂದು ಕರೆಯಬೇಡಿ ಎಂದು ವಕೀಲರಲ್ಲಿ ಮನವಿ ಮಾಡಿದ್ದಾರೆ.

    ದೆಹಲಿ ಹೈ ಕೋರ್ಟ್​ನಿಂದ ಪಂಜಾಬ್​ ಮತ್ತು ಹರಿಯಾಣ ಹೈ ಕೋರ್ಟ್​ಗೆ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ಎಸ್​ ಮುರುಳೀಧರ್​ ಅಲ್ಲಿನ ಬಾರ್​ ಅಸೋಸಿಯೇಷನ್​ಗೆ ಒಂದು ಮನವಿ ಮಾಡಿದ್ದಾರೆ. ನ್ಯಾಯಮೂರ್ತಿಗಳನ್ನು ಮೈ ಲಾರ್ಡ್​ ಎಂದಾಗಲೀ ಅಥವಾ ಮೈ ಲಾರ್ಡ್​ಶಿಪ್​ ಎಂದಾಗಲೀ ಸಂಬೋಧಿಸುವುದು ತಪ್ಪು. ಹಾಗಾಗಿ ಇನ್ನು ಮುಂದೆ ನನ್ನನ್ನು ಆ ರೀತಿಯಲ್ಲಿ ಕರೆಯಬೇಡಿ ಎಂದು ಅವರು ತಿಳಿಸಿದ್ದಾರೆ.

    ಕೆಲ ವರ್ಷಗಳ ಹಿಂದೆಯೇ ಚಂಡೀಗಢ್​ ಹೈ ಕೋರ್ಟ್​ನ ಬಾರ್​ ಅಸೋಸಿಯೇಷನ್​ ತಮ್ಮ ಸದಸದ್ಯರಿಗೆ ನ್ಯಾಯಾಮೂರ್ತಿಗಳನ್ನು ಮೈ ಲಾರ್ಡ್​ ಎಂದು ಸಂಬೋಧಿಸಬೇಡಿ ಬದಲಾಗಿ ಮೈ ಹಾನರ್​ ಅಥವಾ ಸರ್​ ಎಂದು ಸಂಬೋಧಿಸಿ ಎಂದು ಹೇಳಿತ್ತು. ಆದರೆ ಕೆಲ ವಕೀಲರು ಇದುವರೆಗೂ ಮೈ ಲಾರ್ಡ್​ ಎನ್ನುವ ಪದ್ಧತಿಯನ್ನೇ ಮುಂದುವರೆಸಿಕೊಂಡು ಬಂದಿದ್ದು ಇದೀಗ ಅದನ್ನು ನಿಲ್ಲಿಸುವಂತೆ ನ್ಯಾಯಮೂರ್ತಿಗಳೇ ತಿಳಿಸಿದ್ದಾರೆ.

    ನ್ಯಾಯಮೂರ್ತಿ ಮುರುಳೀಧರ್​ (58) ಅವರು ಮಾರ್ಚ್ 6ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್​)

    ಕರೊನಾ ವದಂತಿಗಳದ್ದೇ ಕಾರುಬಾರು; ಇದಕ್ಕೆಲ್ಲ ಕಿವಿಗೊಡಲೇಬೇಡಿ

    ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪಾನಮತ್ತನಿಗೆ ಡಿಢೀರ್​ ನಶೆ ಇಳಿಸಿದ ಘಟನೆ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts