More

    21ರಂದು ಖಂಡಗ್ರಾಸ ಸೂರ್ಯಗ್ರಹಣ: ಎಲ್ಲೆಲ್ಲಿ ಕಾಣುತ್ತೆ, ಏನಿದರ ಪರಿಣಾಮ?

    ಉಡುಪಿ: ದೇಶ ಆರು ತಿಂಗಳ ಬಳಿಕ ಮತ್ತೊಂದು ಸೂರ್ಯಗ್ರಹಣಕ್ಕೆ ಸಾಕ್ಷಿಯಾಗುತ್ತಿದೆ. ಡಿ. 26ರ ಕಂಕಣ ಸೂರ್ಯಗ್ರಹಣದ ನಂತರ 2020ರ ಮೊದಲ ಸೂರ್ಯಗ್ರಹಣ ಜೂ. 21ರಂದು ಗೋಚರಿಸಲಿದೆ.

    ಆಫ್ರಿಕಾ ಖಂಡದ ಕಾಂಗೋ, ದಕ್ಷಿಣ ಸುಡಾನ್ ದೇಶಗಳಲ್ಲಿ ಕಂಕಣ ಸೂರ್ಯಗ್ರಹಣವಾಗಿ ಕಾಣಿಸಿಕೊಳ್ಳುತ್ತದೆ. ಏಷ್ಯಾದ ಒಮಾನ್, ಯೆಮೆನ್, ಪಾಕಿಸ್ತಾನ, ಭಾರತ, ಚೀನಾ ದೇಶಗಳ ಬಳಿಕ ಗುವಾಮ್ ದ್ವೀಪಗಳಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಿ ಕೊನೆಗೊಳ್ಳುತ್ತದೆ. ಸಿರ್ಸಾ, ಕುರುಕ್ಷೇತ್ರ, ಡೆಹ್ರಾಡೂನ್, ಟೆಹ್ರಿ ಮತ್ತು ಹಿಮಾಲಯ ಪರ್ವತಗಳಂತಹ ಸ್ಥಳಗಳಲ್ಲಿ ಶೇ.98.2 ಸೂರ್ಯನನ್ನು ಚಂದ್ರ ಆವರಿಸಿಕೊಂಡು ಬಹಳ ತೆಳುವಾದ ಬಳೆಯಾಕಾರ ಕಾಣಸಿಗುತ್ತದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ವಿಭಾಗ ಉಪನ್ಯಾಸಕಿ ವೇದಶ್ರೀ ಉಪಾಧ್ಯ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ

    ಉಡುಪಿಯಲ್ಲಿ ಸೂರ್ಯನ ಶೇ.40.38 ಭಾಗವನ್ನು ಚಂದ್ರನು ಆವರಿಸುವುದರಿಂದ ಖಂಡಗ್ರಾಸ ಸೂರ್ಯಗ್ರಹಣ ಕಾಣಿಸುತ್ತದೆ. ಬೆಳಗ್ಗೆ 10.04ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1:22ಕ್ಕೆ ಕೊನೆಗೊಳ್ಳಲಿದ್ದು, ಬೆಳಗ್ಗೆ 11:37ಕ್ಕೆ ಗರಿಷ್ಠ ಗ್ರಹಣ ಸಮಯವಾಗಿದೆ. ಮಂಗಳೂರಿನಲ್ಲಿ ಚಂದ್ರನು ಶೇ.38.71 ಸೂರ್ಯನನ್ನು ಆವರಿಸುತ್ತಾನೆ. ಮಧ್ಯಾಹ್ನ 1:21ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣವು ಪ್ರಾರಂಭದಿಂದ ಕೊನೆಯವರೆಗೆ 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ.

    ಅಮಾವಾಸ್ಯೆ ದಿನ ಚಂದ್ರನು ಸೂರ್ಯ ಮತ್ತು ಭೂಮಿ ನಡುವೆ ನಿಖರವಾಗಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ. ಏಕೆಂದರೆ ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವೆ ಎಲ್ಲ ಅಮಾವಾಸ್ಯೆಯ ದಿನಗಳಲ್ಲಿ ನಿಖರವಾಗಿ ಇರುವುದಿಲ್ಲ. ಏಕೆಂದರೆ ಚಂದ್ರನ ಮಾರ್ಗ ಸೂರ್ಯನ ಮಾರ್ಗದಿಂದ 5 ಡಿಗ್ರಿಗಳಷ್ಟು ಓರೆಯಾಗಿದೆ. ಸೂರ್ಯ ಮತ್ತು ಚಂದ್ರನ ಗಾತ್ರ ವ್ಯತ್ಯಾಸ, ಭೂಮಿ-ಸೂರ್ಯ ಹಾಗೂ ಭೂಮಿ-ಚಂದ್ರನ ನಡುವಿನ ಅಂತರದಿಂದಾಗಿ ಭೂಮಿಯಿಂದ ಗಮನಿಸಿದಾಗ ಸೂರ್ಯ ಮತ್ತು ಚಂದ್ರನ ಗಾತ್ರ ಒಂದೇ ಆಗಿರುತ್ತದೆ. ಇದರಿಂದಾಗಿಯೇ ಗ್ರಹಣದ ಸೌಂದರ್ಯ ಗೋಚರಿಸುವುದು.

    ಇದನ್ನೂ ಓದಿ ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ

    ಬರಿಗಣ್ಣಿನಿಂದ ನೇರವಾಗಿ ಗ್ರಹಣ ವೀಕ್ಷಿಸಬಾರದು. ಬೆಳಕಿನ ಕೊರತೆಯಿಂದಾಗಿ ಆವರಿಸಿರುವ ಸೂರ್ಯನ ರೂಪ ಮತ್ತು ದೃಷ್ಟಿಯನ್ನು ಕೇಂದ್ರೀಕರಿಸಲು ಪ್ರಯತ್ನಿಸುವುದರಿಂದ ನೇರಳಾತೀತ ಕಿರಣಗಳು ಮತ್ತು ದೃಷ್ಟಿಗೆ ಹಾನಿ ಮಾಡಬಹುದು. ಸೌರ ಫಿಲ್ಟರ್‌ಗಳನ್ನು ಹೊಂದಿರುವ ಕನ್ನಡಕಗಳ ಮೂಲಕ ಮಾತ್ರ ಗ್ರಹಣವನ್ನು ನೇರವಾಗಿ ವೀಕ್ಷಿಸಬಹುದು. ಸೂರ್ಯನನ್ನು ನೋಡಿದ ನಂತರ, ಕೂಡಲೇ ಕನ್ನಡಕಗಳನ್ನು ತೆಗೆಯದೆ ನೆಲದ ಕಡೆಗೆ ತಿರುಗಿ ಕನ್ನಡಕ, ಫಿಲ್ಟರ್‌ಗಳನ್ನು ತೆಗೆಯಬೇಕು. ಕ್ಯಾಮರಾ, ಬೈನಾಕ್ಯುಲರ್‌ಗಳು ಅಥವಾ ದೂರದರ್ಶಕಗಳನ್ನು ಬಳಸಿ ಫಿಲ್ಟರ್ ಇಲ್ಲದೆ ಗ್ರಹಣ ನೋಡಬಾರದು.

    ‘‘ಗ್ರಹಣ ವೀಕ್ಷಿಸಲು ಸುರಕ್ಷಿತ ವಿಧಾನವೆಂದರೆ ತೆಳುವಾದ ಕಾರ್ಡ್‌ಬೋರ್ಡ್ ಹಾಳೆಯಲ್ಲಿ ಸಣ್ಣ ರಂಧ್ರವನ್ನು ಮಾಡಿ ಅದನ್ನು ಗೋಡೆಯ ಬಳಿ ಅಥವಾ ಬಿಳಿ ಕಾಗದದ ಮೇಲೆ ಹಿಡಿದು ಸೂರ್ಯನನ್ನು ನೋಡುವುದು. ಪಿನ್ ಹೋಲ್ ಉಪಕರಣಗಳನ್ನು ನಿರ್ಮಿಸಿ, ಸುರಕ್ಷಿತವಾಗಿ ಗ್ರಹಣ ವೀಕ್ಷಿಸಬೇಕು’’ ಎನ್ನುತ್ತಾರೆ ವೇದಶ್ರೀ ಉಪಾಧ್ಯ.

    ಡಿಸ್ಕೌಂಟ್ ಬೇಕೆ ಡಿಸ್ಕೌಂಟ್? ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts