More

    ಜುಲೈ ಮೊದಲ ವಾರದಲ್ಲಿ ಅವಧಿ ಪೂರೈಸುವ 20 ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕ

    ಬಿಡದಿ: ಜುಲೈ ಮೊದಲ ವಾರದಲ್ಲಿ ತಾಲೂಕಿನ 20 ಗ್ರಾಪಂಗಳ ಅವಧಿ ಮುಕ್ತಾಯವಾಗಲಿದ್ದು, ಆಡಳಿತಾಧಿಕಾರಿ ನೇಮಕ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

    5 ವರ್ಷಗಳ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಯಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿರುವ ಸರ್ಕಾರ, ಈಗ 1993ರ ಪ್ರಕರಣ 41 ಮತ್ತು 42ರಂತೆ ಅವಧಿ ಪೂರ್ಣಗೊಂಡಿರುವ ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿದೆ.

    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ 8 (1)(ಬಿ)(11)ರಡಿ ಕಲಂ 321ರಂತೆ ಆಡಳಿತಾಧಿಕಾರಿ ನೇಮಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಜೂ.17ರಂದು ಆದೇಶ ಹೊರಡಿಸಿದ್ದಾರೆ.

    ಗ್ರಾಪಂಗಳಲ್ಲಿ ಆಡಳಿತಾಧಿಕಾರಿಯು (1)ನೇ ಉಪ ಪ್ರಕರಣ ಮೇರೆಗೆ ಅಧಿಸೂಚನೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದಿಷ್ಟಪಡಿಸಬಹುದಾದಂತೆ ಆರು ತಿಂಗಳು ಮೀರದಂತ ಅವಧಿಗೆ ಹುದ್ದೆಯ ಧಾರಣ ಮಾಡತಕ್ಕದ್ದು ಎಂದು ತಿಳಿಸಿದೆ. ಗ್ರಾಪಂನಲ್ಲಿ ಅಧ್ಯಕ್ಷರು ವಹಿಸುತ್ತಿದ್ದ ಎಲ್ಲ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಅಧಿಕಾರ ಸಹ ಆಡಳಿತಾಧಿಕಾರಿಗೆ ಇರುತ್ತದೆ.

    ಅವಧಿ ಅಂತ್ಯಗೊಳ್ಳುವ ಪಂಚಾಯಿತಿಗಳು:
    ಜೂ.30: ಶ್ಯಾನುಭೋಗನಹಳ್ಳಿ, ಮಂಚನಾಯ್ಕನಹಳ್ಳಿ
    ಜು. 1: ಬನ್ನಿಕುಪ್ಪೆ (ಬಿ), ಲಕ್ಷ್ಮೀಪುರ, ಸುಗ್ಗನಹಳ್ಳಿ
    ಜು. 2: ಹರೀಸಂದ್ರ, ಬೈರಮಂಗಲ, ಕಂಚುಗಾರನಹಳ್ಳಿ, ಗೋಪಳ್ಳಿ, ಅಕ್ಕೂರು, ದೊಡ್ಡಗಂಗವಾಡಿ, ಕೂಟಗಲ್, ಕೈಲಾಂಚ
    ಜು. 3: ಹುಣಸನಹಳ್ಳಿ, ಮಾಯಗಾನಹಳ್ಳಿ, ವಿಭೂತಿಕೆರೆ
    ಜು. 4: ಬನ್ನಿಕುಪ್ಪೆ (ಕೈ)
    ಜು. 6: ಜಾಲಮಂಗಲ
    ಜು. 7: ಹುಲಿಕೆರೆ-ಗುನ್ನೂರು
    ಜು. 10: ಬಿಳಗುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts