More

    ಮುಂಡಗೋಡ ತಾಲೂಕಾಸ್ಪತ್ರೆ ಅವ್ಯವಸ್ಥೆ ಕಂಡು ನ್ಯಾಯಾಧೀಶೆ ಕೆಂಡಾಮಂಡಲ

    ಮುಂಡಗೋಡ: ಇಲ್ಲಿಯ ತಾಲೂಕು ಆಸ್ಪತ್ರೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ ಅವರು, ಅವ್ಯವಸ್ಥೆ ಕಂಡು ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.


    ಶುಕ್ರವಾರ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದ ವೇಳೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಗಮನಕ್ಕೆ ಬಂದಿತು.

    ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ವೀಕ್ಷಿಸುತ್ತಿದ್ದ ವೇಳೆ ಆಸ್ಪತ್ರೆಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ಕಸದ ತೊಟ್ಟಿಗಳ ಮೇಲೆ ದುರ್ನಾತ ಬರುತ್ತಿತ್ತು. ನೊಣಗಳು ಹಾರಾಡುತ್ತಿದ್ದವು. ಹೊರಾಂಗಣದಲ್ಲಿ ಅಲ್ಲಲ್ಲಿ ನೀರು ನಿಂತಿರುವುದನ್ನು ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು.


    ವೈದ್ಯರ ಕೊಠಡಿಯ ಬಳಿ ನ್ಯಾಯಾಧೀಶರು ಬರುತ್ತಿದ್ದಂತೆ, ಮಕ್ಕಳ ತಜ್ಞ ಸರಿಯಾದ ಸಮಯಕ್ಕೆ ಬರುವುದಿಲ್ಲ. ತಡವಾಗಿ ಬರುತ್ತಾರೆ. ಚೀಟಿ ಮಾಡಿಸಿಕೊಂಡು ಕಾದು ಕಾದು ಹೋಗುತ್ತೇವೆ ಎಂದು ಪಾಲಕರು ತಿಳಿಸಿದರು. ಸರಿಯಾದ ಚಿಕಿತ್ಸೆ ಮತ್ತು ಸೌಕರ್ಯ ಒದಗಿಸಿಲ್ಲವೆಂದರ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಧೀಶೆ ಧನವತಿ ಅವರಿಗೆ ತಿಳಿಸಿದರು.

    ವೈದ್ಯಾಧಿಕಾರಿ ಶಿವಕುಮಾರ ಎಸ್., ಮತ್ತು ಮಕ್ಕಳ ತಜ್ಞ ಶ್ರೀಶೈಲ ಅವರು ಗೈರು ಆಗಿದ್ದರು. ಆಸ್ಪತ್ರೆಯ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿರುವ ನ್ಯಾಯಾಧೀಶೆ, ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ವರದಿ ಕಳುಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts