More

    ದೇಶದ ಐಕ್ಯತೆಗೆ ಭಾರತ ಜೋಡೋ : ಸಚಿನ್ ಮೇಘಾ ಅಭಿಮತ

    ಮುಧೋಳ : ಭಾರತ ಜೋಡೋ ಐಕ್ಯತಾ ಪಾದಯಾತ್ರೆಯಲ್ಲಿ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಹಾಕಬೇಕಿದೆ ಎಂದು ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸಚೀನ್ ಮೇಘಾ ಹೇಳಿದರು.
    ನಗರದ ದಿ. ಪಾರ್ಕ್ ಸಭಾಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ದೇಶದ ಐಕ್ಯತೆ, ರೈತರ, ಯುವಕರ, ಕಾರ್ಮಿಕರ, ಬಡವರ, ಜನಸಾಮಾನ್ಯರ ಸಮಸ್ಯೆ ಅರಿಯಲು ದೇಶಾದ್ಯಂತ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಪಾದಯಾತ್ರೆ ನಡೆಯುತ್ತಿದೆ. ಅ. 14 ರಂದು ಮೊಳಕಾಲ್ಮೂರಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಕಿಸಾನ್ ಸೆಲ್ ಪದಾಧಿಕಾರಿಗಳು, ರೈತರು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

    ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ನಂದಕುಮಾರ ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲ ಕಿಸಾನ ಸೆಲ್ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ರೈತರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿಯವರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

    ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಾತನಾಡಿದರು. ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ, ಉಪಾಧ್ಯಕ್ಷ ಗೋವಿಂದಪ್ಪ ಗುಜ್ಜನ್ನವರ, ಮೈಹಿಬೂಬ್ ತಾಂಬೋಳಿ, ದಸ್ತಗೀರ ಪರಮಾನಂದವಾಡಿ, ಕಾರ್ಯಾಧ್ಯಕ್ಷ ಗಿರೀಶ ಅಂಕಲಗಿ, ರಾಜ್ಯ ಸಂಯೋಜಕ ಗೋವಿಂದಗೌಡ ಪಾಟೀಲ, ಸಂಚಾಲಕ ಡಾ. ಪದ್ಮಜೀತ ನಾಡಗೌಡಪಾಟೀಲ, ವಿಜಯಪುರ ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ಬಾಪುಗೌಡ ಪಾಟೀಲ, ರಾಜುಗೌಡ ಪಾಟೀಲ, ಬ್ಲಾಕ್ ಕಿಸಾನ್ ಸೆಲ್ ಅಧ್ಯಕ್ಷ ಆನಂದ ಬದನೂರ, ಲೋಕಾಪುರ ಬ್ಲಾಕ್ ಅಧ್ಯಕ್ಷ ವೆಂಕಣ್ಣ ಅಂಕಲಗಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜು ಗದಿಗೆಪ್ಪಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts