More

    ರನ್ನನ ನಾಡು ಈಗ ಅಭಿವೃದ್ಧಿಯ ಬೀಡು; ಮುಧೋಳದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ಜಾರಿ

    ಸುಶ್ಮಿತಾ.ಎಂ ಬಾಗಲಕೋಟೆ
    ರತ್ನತ್ರೇಯರಲ್ಲಿ ಒಬ್ಬರಾದ ಕವಿ ರನ್ನ. ಎಲ್ಲರಿಗೂ ತಿಳಿದಿರುವಂತೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕನ್ನು ‘ರನ್ನನ ನಾಡು‘ ಎಂದೂ ಕರೆಯುವ ವಾಡಿಕೆಯಿದೆ. ಸದ್ಯ ಮುಧೋಳ ಅಭಿವೃದ್ಧಿಯತ್ತ ಮುಖಮಾಡಿದೆ. ಮುಧೋಳ ಎಂದೊಡನೆ ಪ್ರತಿಯೊಬ್ಬರಿಗೂ ನೆನಪಾಗುವುದು ಬೇಟೆ ನಾಯಿಗಳು. ಆದರೀಗ ಮುಧೋಳ ಬೇಟೆ ನಾಯಿಗಳಿಗೆ ಮಾತ್ರವಲ್ಲ, ಮಿನಿ ವಿಧಾನಸೌಧ, ಬೈ ಪಾಸ್ ರಸ್ತೆ, ಬಾಗಲಕೋಟೆ-ಕುಡುಚಿ ರೈಲ್ವೆ ಮಾರ್ಗ, ರನ್ನ ವೈಭವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಜನಪ್ರಿಯತೆ ಪಡೆದಿದೆ.

    ಮಿನಿ ವಿಧಾನಸೌಧ

    ಇತ್ತೀಚಿಗೆ ಮುಧೋಳದಲ್ಲಿ ನೂತನ ತಾಲೂಕಾಡಳಿತ ಭವನವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಇದರಿಂದ ಗ್ರಾಮೀಣ ಹಾಗೂ ನಗರದ ಜನರಿಗೆ ಸರಕಾರಿ ಸೌಲಭ್ಯಗಳು ಒಂದೇ ಕಡೆ ಸಿಗಲಿ ಎಂಬ ಉದ್ದೇಶದೊಂದಿಗೆ ನಿರ್ಮಿಸಲಾಗಿದೆ. ನಗರದ ಲೋಕಾಪುರ ರಸ್ತೆಯ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಟ್ಟಡವನ್ನು ಕಟ್ಟಲಾಗಿದೆ. ಈ ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ, ಉಪಖಜಾನ ಕಚೇರಿ, ಕಂದಾಯ, ಅಬಕಾರಿ, ಬಿಸಿಎಂ, ಸಣ್ಣ ನೀರಾವರಿ, ಜಿಎಲ್​ಬಿಸಿ, ಸಮಾಜ ಕಲ್ಯಾಣ, ಸಿಡಿಪಿಓ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತೋಟಗಾರಿಕೆ ಇತರ ಮಹತ್ವದ ಇಲಾಖೆಯನ್ನು ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ನೆಲಮಹಡಿ, ಎರಡು ಮಹಡಿಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ.

    ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಯಲ್ಲಿ ಇನ್ನೂ ನಿಂತಿಲ್ಲ ಬಯಲು ಶೌಚ!

    ಬಾಗಲಕೋಟೆ-ಕುಡುಚಿ ರೈಲ್ವೆ ಮಾರ್ಗ

    ಬಾಗಲಕೋಟೆ-ಕುಡುಚಿ ಹೊಸ ರೈಲ್ವೆ ಮಾರ್ಗದ ಕಾಮಗಾರಿ ನವೆಂಬರ್ ತಿಂಗಳು ಮುಗಿಯುವುದರೊಳಗೆ ಪೂರ್ಣಗೊಳ್ಳಲಿದೆ. ನಿರ್ಮಾಣದ ಹಂತದಲ್ಲಿರುವ ಲೋಕಾಪುರ ರೈಲ್ವೆ ಸ್ಟೇಷನ್, ರಸ್ತೆ ಮತ್ತು ರೈಲು ಸಂಚಾರವನ್ನು ಸುರಕ್ಷಿತಗೊಳಿಸುವುದಕ್ಕಾಗಿ ಖಜ್ಜಿಡೋಣಿ-ಲೋಕಾಪುರ ವಿಭಾಗದ ನಡುವೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

    ಉತ್ತಮ ವಾಯುಗುಣಮಟ್ಟ

    ಭಾರತದಲ್ಲಿ ಉತ್ತಮ ವಾಯು ಗುಣಮಟ್ಟ ಹೊಂದಿರುವ 20 ನಗರಗಳಲ್ಲಿ 8ನೇ ಸ್ಥಾನವನ್ನು ಬಾಗಲಕೋಟೆ ಹೊಂದಿದೆ.

    ತೆರೆಯ ಮೇಲೆ ಬರಲಿದೆ ಹಲಗಲಿ ಚಿತ್ರ

    ಮುಧೋಳ ತಾಲೂಕಿನ ಹಲಗಲಿಯಲ್ಲಿ 1857ರಲ್ಲಿ ನಡೆದ ಹಲಗಲಿ ಬಂಡಾಯದ ಇತಿಹಾಸದ ಕುರಿತು ಐತಿಹಾಸಿಕ ಕಥೆ ತೆರೆಯ ಮೇಲೆ ಕಾಣಲಿದೆ. ಈ ಚಿತ್ರದಲ್ಲಿ ನಾಯಕರಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಲಿದ್ದಾರೆ.

    ಮಹಿಳಾಭಿವೃದ್ಧಿ ಯೋಜನೆಗಳು

    ಸಾಮಾಜಿಕ ಆಕ್ಷ್ಯನ್ ಫಾರ್ ರೂರಲ್ ಡೆವಲಪ್‌ಮೆಂಟ್ ಅಸೋಸಿಯೇಷನ್ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ 1996ರ ಅಡಿಯಲ್ಲಿ ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದೆ ಮತ್ತು 1997ರಿಂದ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಬದ್ಧವಾಗಿ ಮಹಿಳೆಯರಿಗೆ ಸಾಥ್ ಆಗಿದೆ. ಇದು ಇಂದಿಗೂ ಹಿಂದುಳಿದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯಲ್ಲಿ ಸರ್ಕಾರ ಈ ಕಾರ್ಯ ಚಟುವಟಿಕೆಯನ್ನು ಮಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts