More

    ‘ಜೋಗಿ’ ಪ್ರೇಮ್​ ಬಿಡುಗಡೆ ಮಾಡಿದರು ‘ಕಾಕ್ಟೇಲ್​’ ಚಿತ್ರದ ಪೋಸ್ಟರ್​ …

    ಬೆಂಗಳೂರು: ಕನ್ನಡದಲ್ಲಿ ಸದ್ದಿಲ್ಲದೆ ಹಲವು ಸಸ್ಪೆನ್ಸ್​ ಥ್ರಿಲ್ಲರ್​​ ಮತ್ತು ಮರ್ಡರ್​ ಮಿಸ್ಟ್ರಿ ಚಿತ್ರಗಳು ತಯಾರುಗುತ್ತಿದ್ದು, ಈ ಪೈಕಿ ‘ಕಾಕ್ಟೇಲ್​’ ಸಹ ಇಂದು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಮೇನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ದ್ವಿಪಾತ್ರಗಳು ಶುರುವಾಗಿದ್ದೇ ಡಾ. ರಾಜ್ ಚಿತ್ರಗಳಿಂದ…

    ಅದಕ್ಕೂ ಮುನ್ನ ಇತ್ತೀಚೆಗೆ ಈ ಚಿತ್ರದ ಥೀಮ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್‌ನ್ನು ನಟ-ನಿರ್ದೇಶಕ ಮತ್ತು ‘ಜೋಗಿ’ ಖ್ಯಾತಿಯ ಪ್ರೇಮ್​ ಬಿಡುಗಡೆ ಮಾಡಿದ್ದಾರೆ. ಚಿತ್ರದ ವಿಭಿನ್ನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರುವ ಅವರು, ಚಿತ್ರತಂಡದ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.‘

    ವಿಜಯಲಕ್ಷೀ ಕಂಬೈನ್ಸ್ ಬ್ಯಾನರ್‌ನಲ್ಲಿ ಡಾ.ಶಿವಪ್ಪ ನಿರ್ಮಾಣದ ’ಕಾಕ್ಟೈಲ್’ ಚಿತ್ರವು ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಇನ್ನು, ಶ್ರೀರಾಮ್​ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಒಂದೇ ಹೆಸರಿನ ಮತ್ತು ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ.

    ಹೊಸ ಪ್ರತಿಭೆಗಳಾದ ವಿರೇನ್ ಕೇಶವ್ ಹಾಗೂ ಚರೀಷ್ಮಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅನುಪಮ್‌ಖೇರ್ ಅವರ ಸಂಸ್ಥೆಯಲ್ಲಿ ನಟನೆಯ ಪಾಠಗಳನ್ನು ವೀರೇನ್‌ಕೇಶವ್ ಕಲಿತು ಬಂದಿದ್ದಾರೆ. ಚರಿಷ್ಮಾ ಅವರಿಗೆ ಚಿತ್ರತಂಡವೇ ವರ್ಕ್‌ಶಾಪ್ ಮಾಡಿದೆ. ಇವರೊಂದಿಗೆ ಶೋಭರಾಜ್, ಮಹಾಂತೇಶ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ರಮೇಶ್‌ ಪಂಡಿತ್ ಮುಂತಾದವರ ತಾರಗಣವಿದೆ.

    ಇದನ್ನೂ ಓದಿ: ಮತ್ತೆ ಬಿಡುಗಡೆ ಆಗಲಿದೆ ಅಪ್ಪು ಅಭಿನಯದ ಕೊನೇ ಚಿತ್ರ ಜೇಮ್ಸ್​; ಕಾರಣವಿದು…

    ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ಸಂಯೋಜಸಿದ್ದು, ರವಿವರ್ಮ(ಗಂಗು) ಛಾಯಾಗ್ರಹಣ ಮಾಡಿದ್ದಾರೆ. ಸದ್ಯದಲ್ಲೆ ಟ್ರೇಲರ್ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.

    ಜೇಮ್ಸ್‌ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts