More

    ಅಮೆರಿಕ ಅಧ್ಯಕ್ಷರಿಗೆ ಇದೆಯಾ ಮಾರಕ ಕಾಯಿಲೆ: ಈ ಬಗ್ಗೆ ಅವರೇ ಹೇಳಿಕೊಂಡಿರುವುದೇನು?

    ವಾಷಿಂಗ್ಟನ್​: ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕ ಅಧ್ಯಕ್ಷರ ಬಗ್ಗೆಯೇ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಧ್ಯಕ್ಷ ಜೋ ಬೈಡನ್​ ಅವರ ಆರೋಗ್ಯದ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ. ಇದಕ್ಕೆ ಕಾರಣ ಬೈಡನ್​​ ಅವರ ಹೇಳಿಕೆಯೇ ಆಗಿದೆ ಎಂಬುದು ವಿಶೇಷ.

    ಹೌದು.. ಭಾಷಣದ ವೇಳೆ ಅಧ್ಯಕ್ಷ ಜೋ ಬೈಡನ್​ ತಾನು ಮಾರಕ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಹೇಳಿಕೆಯಿಂದ ಅಮೆರಿಕ ರಾಜಕೀಯದಲ್ಲಿ ತಲ್ಲಣವೇ ಸೃಷ್ಟಿಯಾಗಿದೆ.

    ಒಂದು ವೇಳೆ ಅಧ್ಯಕ್ಷರ ಮಾತು ನಿಜವಾಗಿದ್ದರೆ ಅವರು ಕೂಡಲೇ ರಾಜೀನಾಮೆಯನ್ನೂ ಕೂಡ ನೀಡಲಿ ಎಂದು ಹಲವರು ಒತ್ತಾಯಿಸಿದ್ದಾರೆ. ಅಂದಹಾಗೆ ತಮ್ಮ ಸ್ಥಾನಕ್ಕೆ ಕುತ್ತು ತರುವಂತಹ ರಹಸ್ಯವನ್ನು ಬೈಡನ್​ ಹೇಳಿಕೊಂಡಿದ್ದು ಏಕೆ ಎಂದು ಕೆಲವರು ತಮ್ಮಲ್ಲೇ ಚರ್ಚೆಯಲ್ಲಿ ತೊಡಗಿದ್ದಾರೆ.

    ಅದೇನೆ ಇದ್ದರೂ ಬೈಡನ್​ ಅವರಿಗೆ ಕಾಡುತ್ತಿರುವ ಮಾರಕ ಕಾಯಿಲೆ ಯಾವುದು ಎಂಬುದುಕ್ಕೆ ಇಲ್ಲಿದೆ ಉತ್ತರ. ಕಲ್ಲಿದ್ದಲು ಗಣಿಗೆ ಭೇಟಿ ನೀಡಿದ್ದ ವೇಳೆ ಬೈಡನ್​ ಅವರು ಹವಾಮಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾಗ ತಮಗೂ ಕ್ಯಾನರ್​ ಇದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಳಿಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜನವರಿಯಲ್ಲಿ ಅಧಿಕಾರಿ ಪಡೆಯುವುದಕ್ಕೂ ಮುನ್ನ ಅವರು ಪಡೆದುಕೊಳ್ಳುತ್ತಿದ್ದ ಚಿಕಿತ್ಸೆ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವೈಟ್​ ಹೌಸ್​ ಸ್ಪಷ್ಟನೆ ನೀಡಿದೆ. (ಏಜೆನ್ಸೀಸ್​)

    ನಾನು ಇಂದಿರಾ ಗಾಂಧಿಯವರ ಸೊಸೆ…ಯಾರಿಗೂ ಹೆದರಲ್ಲ ಎಂದಿದ್ದ ಸೋನಿಯಾ ಗಾಂಧಿಯವರ ಹಳೆ ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts