More

    Job Opportunity: SSCಯಿಂದ 1324 JE ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬೆಂಗಳೂರು: ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಜೂನಿಯರ್ ಇಂಜಿನಿಯರ್ (ಜೆಇ) ಹುದ್ದೆಗಳನ್ನು ಭರ್ತಿ ಮಾಡಲು ಸಿಬ್ಬಂದಿ ಆಯ್ಕೆ ಆಯೋಗವು (ಎಸ್​​ಎಸ್​​​​ಸಿ) ಜುಲೈ 26 ರಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

    ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಜುಲೈ 26 ರಿಂದ ಆಗಸ್ಟ್ 16 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಗಸ್ಟ್ 17 ಮತ್ತು 18 ರಂದು ಅರ್ಜಿಗಳನ್ನು ಮಾರ್ಪಡು ಮಾಡಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೆ ವಯೋಮಿತಿಯನ್ನು ಹುದ್ದೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ವೇತನವು ತಿಂಗಳಿಗೆ ರೂ.35,400 ರಿಂದ ರೂ.1,12,400 ಆಗಿರುತ್ತದೆ.

    ಖಾಲಿ ಹುದ್ದೆಗಳ ಸಂಖ್ಯೆ: 1324

    ವಿಭಾಗಗಳು: ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್

    ಅರ್ಹತೆ: 16.08.2023 ಕ್ಕೆ ಇಂಜಿನಿಯರಿಂಗ್ ಪದವಿ ಅಥವಾ ಮೂರು ವರ್ಷಗಳ ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿರಬೇಕು. ಡಿಪ್ಲೊಮಾ ಅಭ್ಯರ್ಥಿಗಳಿಗೆ 2-3 ವರ್ಷಗಳ ಅನುಭವ ಕಡ್ಡಾಯವಾಗಿದೆ. ಆದರೂ ಕೆಲವು ವಿಭಾಗಗಳಲ್ಲಿನ ಹುದ್ದೆಗಳಿಗೆ ಮಾತ್ರ ಅನುಭವವನ್ನು ಪರಿಗಣಿಸಲಾಗುತ್ತದೆ.

    ವಯಸ್ಸಿನ ಮಿತಿ: ಅಭ್ಯರ್ಥಿಗಳ ವಯಸ್ಸಿನ ಮಿತಿಯನ್ನು ಇಲಾಖೆಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ವಯಸ್ಸಿನ ಮಿತಿಯನ್ನು 01.08.2023 ರಂತೆ ಪರಿಗಣಿಸಲಾಗುತ್ತದೆ. ವಯೋಸಡಿಲಿಕೆ ಅನ್ವಯವಾಗಲಿದೆ.

    ಪರೀಕ್ಷಾ ಶುಲ್ಕ: 100 ರೂ. ಶುಲ್ಕವನ್ನು ಆನ್​​​​ಲೈನ್ ಮೂಲಕ ಪಾವತಿಸಬಹುದು. ಮಹಿಳಾ ಅಭ್ಯರ್ಥಿಗಳು, SC, ST, ಅಂಗವಿಕಲರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

    ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ. ಈಗಾಗಲೇ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಹೊಂದಿರುವವರು ನೇರವಾಗಿ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆಯ ನಂತರ ಅರ್ಜಿ ಸಲ್ಲಿಸಬೇಕಾಗಿಲ್ಲ.

    ಆಯ್ಕೆ ಪ್ರಕ್ರಿಯೆ: ಪೇಪರ್-1, ಪೇಪರ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು.

    ಪರೀಕ್ಷಾ ವಿಧಾನ
    *ಜೂನಿಯರ್ ಇಂಜಿನಿಯರ್ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು.
    *ಒಟ್ಟು 500 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದು ಎರಡು ಪತ್ರಿಕೆಗಳನ್ನು ಒಳಗೊಂಡಿದೆ (ಪೇಪರ್-1, ಪೇಪರ್-2). ‘ಪೇಪರ್-1’ 200 ಅಂಕಗಳನ್ನು ಮತ್ತು ‘ಪೇಪರ್-2’ 300 ಅಂಕಗಳನ್ನು ಹೊಂದಿರುತ್ತದೆ.
    *ಎಲ್ಲಾ ಪ್ರಶ್ನೆಗಳು ಆಬ್ಜೆಕ್ಟಿವ್ ಟೈಪ್​​ನಲ್ಲಿ ಇರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕ. ಪರೀಕ್ಷೆಯ ಅವಧಿಯು 2 ಗಂಟೆಗಳು. ಪರೀಕ್ಷೆಯಲ್ಲಿ ನಕಾರಾತ್ಮಕ ಅಂಕಗಳೂ ಇರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಳೆಯಲಾಗುತ್ತದೆ. ಪೇಪರ್-1 ರಲ್ಲಿ ಅರ್ಹತೆ ಪಡೆದವರಿಗೆ ಪೇಪರ್-2 ಪರೀಕ್ಷೆಯನ್ನು ನಡೆಸಲಾಗುತ್ತದೆ.

    ಕರ್ನಾಟಕ ರಾಜ್ಯಗಳಲ್ಲಿ ಪರೀಕ್ಷಾ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ

    ವೇತನ: ರೂ.35,400-ರೂ.1,12,400.

    ಪ್ರಮುಖ ದಿನಾಂಕಗಳು
    *ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಪ್ರಾರಂಭ: 26.07.2023.
    *ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 16.08.2023.
    *ಅರ್ಜಿಗಳ ತಿದ್ದುಪಡಿಗೆ ಅವಕಾಶ: 17.08.2023 – 18.08.2023
    *ಪೇಪರ್-1 ಪರೀಕ್ಷೆ (CBT) ದಿನಾಂಕ: ಅಕ್ಟೋಬರ್, 2023.

    ಅಧಿಸೂಚನೆಗೆ: https://wii.gov.in/images//images/documents/recruitments/research_personnel_july_2023a.pdf

    Job Opportunity: ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts