More

    ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ

    ಶೃಂಗೇರಿ: ತಾಲೂಕಿನ ಕೂತುಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ 2024-25ನೇ ಸಾಲಿನ ಕಾರ್ಮಿಕ ಅಯವ್ಯಯ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದಡಿ ಮನೆ ಮನೆ ಜಾಥಾ ಕಾರ್ಯಕ್ರಮಕ್ಕೆ ಅಧ್ಯಕ್ಷ ಬಿ.ನಾಗೇಶ್ ಗುರುವಾರ ಚಾಲನೆ ನೀಡಿದರು.
    ತಾಪಂ ನರೇಗಾ ಐಇಸಿ ಸಂಯೋಜಕಿ ಸೌಮ್ಯ ಮಾತನಾಡಿ, ನರೇಗಾ ಯೋಜನೆಯಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳಲು ಗ್ರಾಮಸ್ಥರು ಆಸಕ್ತಿ ವಹಿಸಬೇಕು. ಕಾಮಗಾರಿಗಳನ್ನು ಪಡೆಯಲು ಅರ್ಹರಾಗಿದ್ದವರು ಇದುವರೆಗೂ ಸೌಲಭ್ಯಗಳನ್ನು ಪಡೆಯದವರ ಮನೆಗಳಿಗೆ ಭೇಟಿ ನೀಡಿ ಯೋಜನೆ ಕುರಿತು ಮಾಹಿತಿ ನೀಡಿ ವೈಯಕ್ತಿಕ ಕಾಮಗಾರಿ ಬೇಡಿಕೆ ಪಡೆದುಕೊಳ್ಳಲು ಗ್ರಾಪಂ ಅಧಿಕಾರಿಗಳ ಸಹಕಾರ ಪ್ರಾಮುಖ್ಯ ಎಂದರು.
    ಗ್ರಾಮಸ್ಥರಿಗೆ, ರೈತರಿಗೆ ಅನುಕೂಲವಾಗುವ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ಸ್ಥಳದಲ್ಲೇ ಕಾಮಗಾರಿ ಆದೇಶ ಪತ್ರ ಹಾಗೂ ನರೇಗಾ ಕರಪತ್ರಗಳನ್ನು ವಿತರಿಸಿ ಒಬ್ಬ ಲಾನುಭವಿ 2.50ಲಕ್ಷ ರೂ.ವರೆಗೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
    ಸ್ವಚ್ಛವಾಹಿನಿ ವಾಹನದ ಮೂಲಕ ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯ ಕುರಿತು ಪ್ರಚಾರ ಅಂದೋಲನ ಕೈಗೊಳ್ಳಲಾಯಿತು. ಗ್ರಾಪಂ ಅಧ್ಯಕ್ಷ ನಾಗೇಶ್, ಸದಸ್ಯರಾದ ನಯನಾ, ಕುಮಾರ್ ಭಟ್, ರಮೇಶ್, ನಾಗರತ್ನ, ಹೇಮಾವತಿ, ಚಂದ್ರಾವತಿ, ಪಿಡಿಒ ಪರಮೇಶ್ವರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts