More

    ಅಗತ್ಯ ಇರುವವರಿಗೆಲ್ಲ ಜಾಬ್ ಕಾರ್ಡ್

    ಹುಬ್ಬಳ್ಳಿ: ಬೇಡಿಕೆ ಇರುವ ಎಲ್ಲರಿಗೂ ಎಂಜಿಎನ್​ಆರ್​ಇಜಿ ನಿಯಮಗಳಂತೆ ಜಾಬ್ ಕಾರ್ಡ್ ನೀಡಿ, ರೈತರ ಜಮೀನುಗಳಲ್ಲಿ ಬದು ಹಾಗೂ ಕೃಷಿ ಹೊಂಡಗಳ ನಿಮಾಣಕ್ಕೆ ಆದ್ಯತೆ ನೀಡುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚಾಯತ್ ರಾಜ್ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

    ಕೃಷಿಗೆ ಫಲವತ್ತಾದ ಭೂಮಿ ಮತ್ತು ನೀರು ಅಗತ್ಯ. ನರೇಗಾದಲ್ಲಿ ರೈತರಿಗೆ ಅಗತ್ಯ ಉದೊ್ಯೕಗ ಕಲ್ಪಿಸುವುದರೊಂದಿಗೆ ಜಮೀನುಗಳಲ್ಲಿ ಕೃಷಿ ಬದು ಹಾಗೂ ಕೃಷಿ ಹೊಂಡ ನಿರ್ವಿುಸುವ ಮೂಲಕ ಅಂತರ್ಜಲ ಹೆಚ್ಚಿಸಬೇಕು ಎಂದು ತಿಳಿಸಿದರು.

    ಶುದ್ಧ ನೀರಿನ ಘಟಕ ನಿರ್ವಹಣೆಯ ಕಾರ್ಯ ಸರಿಯಾಗಿ ನಡೆಯುತ್ತಿಲ್ಲವೆಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಘಟಕಗಳ ಪರಿಶೀ ಲನೆ ನಡೆಸುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿ 1,38,880 ಉದೊ್ಯೕಗ ಚೀಟಿ ವಿತರಿಸಲಾಗಿದ್ದು, 3,49,764 ಕಾರ್ವಿುಕರಿದ್ದಾರೆ. ಒಟ್ಟು 38,461 ಕೃಷಿ ಬದು ಹಾಗೂ 489 ಕೃಷಿ ಹೊಂಡ ನಿರ್ವಿುಸಲಾಗಿದೆ ಎಂದು ತಿಳಿಸಿದರು. ಶಾಸಕಿ ಕುಸುಮಾವತಿ ಶಿವಳ್ಳಿ, ಜಿಪಂ ಉಪಾಧ್ಯಕ ಶಿವಾನಂದ ಕರಿಗಾರ, ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಜಿಪಂ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಕೃಷಿ ಇಲಾಖೆ ಜಂಟಿನಿರ್ದೇಶಕ ರಾಜಶೇಖರ ಐ.ಬಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ರಾಮಚಂದ್ರ ಕೆ.ಎಂ., ಇತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts