More

    ಜೆಎನ್‌ಎನ್‌ಸಿಇ ಎಂಬಿಎ ವಿಭಾಗಕ್ಕೆ ಎನ್‌ಬಿಎ ಮಾನ್ಯತೆ

    ಶಿವಮೊಗ್ಗ: ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗಕ್ಕೆ ಎನ್‌ಬಿಎ (ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ಲಭಿಸಿದೆ. ಸೆ.2ರಿಂದ ಮೂರು ದಿನ ವಿಭಾಗಕ್ಕೆ ಭೇಟಿ ನೀಡಿ ಮಂಡಳಿ ನೀಡಿದ್ದ ವರದಿ ಆಧಾರದಲ್ಲಿ 2025ರವರೆಗೆ ಮಾನ್ಯತೆ ನೀಡಿ ಸೋಮವಾರ ಸಂಜೆ ಅಧಿಕೃತವಾಗಿ ಘೋಷಿಸಲಾಗಿದೆ.
    ಈಗಾಗಲೇ ಕಾಲೇಜಿನ ಏಳು (ಬಿಇ ಇಂಜಿನಿಯರಿಂಗ್) ವಿಭಾಗಗಳು ಎನ್‌ಬಿಎ ಮಾನ್ಯತೆ ಪಡೆದಿವೆ. ಇದರಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಕಾಲೇಜಿನ ಪ್ರತಿಯೊಂದು ಹಂತಗಳಲ್ಲಿ ಉತ್ತೇಜಿಸಲು ಸಹಕಾರಿಯಾಗಲಿದೆ. ಕಂಪನಿಗಳು ತಮ್ಮ ಸಂದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಿವೆ.
    ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಂಶೋಧನಾ ಪ್ರಕ್ರಿಯೆಗಳಿಗೆ ಕೇಂದ್ರದ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನಗಳನ್ನು ಪಡೆಯಲು ಅನುವು ಮಾಡಿಕೊಡಲಿದೆ. ನಿರಂತರ ಕಲಿಕೆ, ಗುಣಮಟ್ಟದ ಸುಧಾರಣೆ, ಹೊಸ ಯೋಚನೆಗಳ ಮೂಲಕ ಸಾರ್ವಜನಿಕವಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts