More

    ಎಲ್ಲ ಯಜ್ಞಗಳಲ್ಲಿ ಜ್ಞಾನಯಜ್ಞವೇ ಸರ್ವಶ್ರೇಷ್ಠ: ಶ್ರೀಶೈಲ ಜಗದ್ಗುರು

    ವಿಜಯವಾಡ: ವಿಭಿನ್ನ ಭೌತಿಕ ಸಂಕಲ್ಪಗಳ ಪೂರ್ತಿಗಾಗಿ ಕೈಗೊಳ್ಳುವ ಹಲವಾರು ರೀತಿಯ ಯಜ್ಞಗಳಲ್ಲಿ ಜ್ಞಾನಯಜ್ಞವೇ ಸರ್ವಶ್ರೇಷ್ಠವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಸ್ಟೇಡಿಯಮ್​ನಲ್ಲಿ ಆಂಧ್ರಪ್ರದೇಶ ಸರ್ಕಾರದ ಮುಜರಾಯಿ ಇಲಾಖೆಯಿಂದ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಚಂಡಿ, ರುದ್ರ, ರಾಜಶ್ಯಾಮಲ ಮತ್ತು ಸುದರ್ಶನ ಸಹಿತ ಶ್ರೀಲಕ್ಷ್ಮೀ ಮಹಾಯಜ್ಞದಲ್ಲಿ ಅನುಗ್ರಹ ಆಶೀರ್ವಚನ ದಯಪಾಲಿಸುತ್ತ ಈ ವಿಚಾರ ತಿಳಿಸಿದರು.

    ನಮ್ಮ ಅಂತರಂಗದಲ್ಲಿದ್ದು, ದೇಹದ ಎಲ್ಲ ಗತಿವಿಧಿಗಳಿಗೆ ಮೂಲ ಕಾರಣವಾದ ಆತ್ಮದ ಜ್ಯೋತಿಯಲ್ಲಿ ಸಾಂಸಾರಿಕ ಬಂಧನಕ್ಕೆ ಕಾರಣವಾಗಿರುವ ಶಬ್ದ ಸ್ಪರ್ಶ ಮುಂತಾದ ಪಂಚ ವಿಷಯಗಳನ್ನು ಹಾಕುತ್ತ ಅಂತರ್ಮಖಭಾವದಿಂದ ಮಾಡುವ ಅಂತರಂಗದ ಯಜ್ಞವೇ ಜ್ಞಾನಯಜ್ಞವೆಂದು ಕರೆಯಲ್ಪಡುತ್ತದೆ. ಇತರ ಭೌತಿಕ ದ್ರವ್ಯಗಳನ್ನು ಹೋಮಕುಂಡದ ಅಗ್ನಿಯಲ್ಲಿ ಅರ್ಪಿಸಿ ಮಾಡುವ ಯಜ್ಞಗಳಿಂದ ಇಹಲೋಕದ ಭೌತಿಕ ಸುಖ ಮತ್ತು ಸ್ವರ್ಗಾದಿ ಉತ್ತಮ ಲೋಕಗಳು ಪ್ರಾಪ್ತವಾಗುತ್ತವೆ. ಆದರೆ ಜ್ಞಾನಯಜ್ಞದಿಂದ ಆತ್ಮಸಾಕ್ಷಾತ್ಕಾರ ಉಂಟಾಗಿ ಶಿವತ್ವ ಪ್ರಾಪ್ತಿಯಾಗುತ್ತದೆ. ಇಹ ಮತ್ತು ಪರಗಳೆರಡರಲ್ಲೂ ಸುಖ ಬಯಸುವವನು ಈ ಎರಡೂ ಪ್ರಕಾರದ ಯಜ್ಞಗಳನ್ನು ಮಾಡಬೇಕಾಗುತ್ತದೆ ಎಂದರು.

    ಇದನ್ನೂ ಓದಿ: ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ..: ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಮ್ಮನ ಬಳಿಗೆ ತೆರಳಿ ಹೀಗಂದಿದ್ದೇಕೆ?

    ಪ್ರಕೃತಿಯಿಂದ ಏನೆಲ್ಲವನ್ನು ಪಡೆದುಕೊಳ್ಳುವ ಮನುಷ್ಯನು ಆ ಪ್ರಕೃತಿಯನ್ನು ನಿರ್ಮಿಸಿದ ಪರಮಾತ್ಮನಿಗೆ ಒಂದಿಷ್ಟು ಕೃತಜ್ಞತೆಯನ್ನು ಅರ್ಪಿಸದಿದ್ದರೆ ಅದು ಕೂಡ ಒಂದು ತೆರನಾದ ಕಳ್ಳತನ ಎನಿಸಿಕೊಳ್ಳುತ್ತದೆ. ಹೋಮ, ಪೂಜೆ ಪ್ರಾರ್ಥನೆಗಳೆಲ್ಲ ದೇವರನ್ನು ಬೇಡಿಕೊಳ್ಳುವ ಮಾಧ್ಯಮವಾಗಿರದೇ, ಕೃತಜ್ಞತೆಯನ್ನು ಸಲ್ಲಿಸುವ ಸಂಕೇತಗಳಾಗಬೇಕು. ಒಂದು ವೇಳೆ ಬೇಡಿಕೊಳ್ಳುವುದಾದರೂ, ಲೋಕಕಲ್ಯಾಣ ಪರವಾದ ಉದ್ದೇಶ ಇರಿಸಿಕೊಂಡು ಬೇಡಿಕೊಳ್ಳಬೇಕು. ಅದರಿಂದ ಎಲ್ಲರಿಗೂ ಒಳ್ಳೆಯದಾಗುವುದರ ಜೊತೆಗೆ ತನಗೂ ಒಳ್ಳೆಯದಾಗುತ್ತದೆ. ಪ್ರದೇಶದ ಜನತೆಯ ಅಭ್ಯುದಯದ ಉದ್ದೇಶದಿಂದ ಇಂತಹ ಬೃಹತ್ ಧಾರ್ಮಿಕ ಯಜ್ಞವನ್ನು ಸರ್ಕಾರವೇ ಆಯೋಜಿಸಿರುವುದು ಶ್ಲಾಘನೀಯ ಸಂಗತಿ. ಇದರಿಂದ ಜನರಲ್ಲಿ ಧಾರ್ಮಿಕ ಶ್ರದ್ಧೆಯ ಸಂವರ್ಧನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

    ಶ್ರೀಶೈಲದ ಮುಖ್ಯ ಅರ್ಚಕ ಶಿವಶಂಕರ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಮುಜರಾಯಿ ಇಲಾಖೆಯ ಮುಖ್ಯ ಅಧಿಕಾರಿ ಚಂದ್ರಶೇಖರ ಆಝಾದ ಸ್ವಾಗತಿಸಿದರು. ಈ ಬೃಹತ್ ಹೋಮವನ್ನು ಯಶಸ್ವಿಗೊಳಿಸಲು ಸ್ಥಾಪಿಸಲಾದ ಒಂದ ನೂರ ಎಂಟು ಹೋಮ ಕುಂಡಗಳಲ್ಲಿ ಆರು ನೂರಕ್ಕೂ ಹೆಚ್ಚು ವೇದಾಗಮ ವಿದ್ವಾಂಸರು, ಋತ್ವಿಜರು, ವೇದ ಪಂಡಿತರು ಸಂಬಂಧಿಸಿದ ಮಂತ್ರಗಳನ್ನು ಹೇಳುತ್ತ ಶಾಸ್ತ್ರ ಪದ್ಧತಿಗೆ ಅನುಗುಣವಾಗಿ ಪೂಜೆ, ಹೋಮ, ಪಾರಾಯಣಗಳನ್ನು ನೆರವೇರಿಸುತ್ತ ಮಹಾಯಜ್ಞ ನೆರವೇರಿಸಿದರು.

    ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ

    ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಒಕ್ಕಲಿಗ ಸ್ವಾಮೀಜಿಗಳ ಒಕ್ಕೊರಲ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts