More

    ‘ಐರಾವನ್’ ಮೂಲಕ ಮತ್ತೆ ಬಂದ ಜೆಕೆ …

    ಬೆಂಗಳೂರು: ಲಾಕ್​ಡೌನ್​ ಮುಗಿದ ನಂತರ ಹಲವು ಕನ್ನಡ ಚಿತ್ರಗಳು ಪ್ರಾರಂಭವಾಗಿದ್ದು, ಇದೀಗ ‘ಐರಾವನ್​’ ಎಂಬ ಹೊಸ ಚಿತ್ರ ಸಹ ಸೇರ್ಪಡೆಯಾಗಿದೆ. ಏನಿದು ‘ಐರಾವನ್​’? ಗೊತ್ತಿಲ್ಲ. ಆದರೆ, ‘ಐರಾವನ್​’ ಆಗಿ ಜೆಕೆ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ‘ಸೋಜುಗದ ಕಸ್ತೂರಿ ಕನ್ನಡ’ …

    ಕಳೆದೊಂದು ವರ್ಷದಲ್ಲಿ ಜೆಕೆ ಅಭಿನಯದ ಯಾವೊಂದು ಚಿತ್ರ ಸಹ ಸೆಟ್ಟೇರಿರಲಿಲ್ಲ. ಹೊಸಹೊಸ ಚಿತ್ರಗಳ ಅವಕಾಶಗಳ ನಿರೀಕ್ಷೆಯಲ್ಲಿದ್ದ ಜೆಕೆ, ಇದೀಗ ‘ಐರಾವನ್​’ ಎಂಬ ಹೊಸ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಗವಿಪುರಂನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ನಡೆದು, ಚಿತ್ರೀಕರಣ ಪ್ರಾರಂಭವಾಗಿದೆ.

    ‘ಐರಾವನ್​’ ಚಿತ್ರವನ್ನು ನಿರಂತರ ಗಣೇಶ್, ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ಇನ್ನು ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗ, ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಈಗಾಗಲೇ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

    ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ ಪಾಸಿಟಿವ್​

    ಜೆಕೆ ಜತೆಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸುತ್ತಿದ್ದು, ಮಿಕ್ಕಂತೆ ವಿವೇಕ್, ಅವಿನಾಶ್, ಕೃಷ್ಣ ಹೆಬ್ಬಾರ್ ಮುಂತಾದವರು ನಟಿಸುತ್ತಿದ್ದಾರೆ. ಎಸ್.ಪ್ರದೀಪ್ ವರ್ಮ ಸಂಗೀತ ನಿರ್ದೇಶಿಸುತ್ತಿದ್ದು, ದೇವೇಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ.

    ‘ಶುಗರ್ ಫ್ಯಾಕ್ಟರಿ’ಗೆ ಜತೆಯಾದ ಸೋನಲ್​ ಮಾಂಟೆರೊ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts