More

    VIDEO| ಕಾರು, ಬೈಕ್​ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಬೃಹತ್ ಟ್ರಕ್​: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

    ಶ್ರೀನಗರ: ಈರುಳ್ಳಿ ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಬೃಹತ್​ ಟ್ರಕ್​ ಒಂದು ಎದುರಿಗೆ ಬರುತ್ತಿದ್ದ ಕಾರು ಮತ್ತು ಬೈಕ್​ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಘಟನೆ ಜಮ್ಮ ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೂಲಗಳ ಪ್ರಕಾರ ಸಾಂಬಾ ಜಿಲ್ಲೆಯಲ್ಲಿ ಫೆ. 23ರಂದು ಈ ಅವಘಡ ಸಂಭವಿಸಿದೆ. ಜಮ್ಮು-ಪಠಾಣ್​ಕೋಟ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್,​ ಕಾರು ಮತ್ತು ಬೈಕ್​ಗೆ ಡಿಕ್ಕಿ ಹೊಡೆದು ಒಂದು ಬದಿಗೆ ಉರುಳಿ ಬಿದ್ದಿದೆ.

    ಈ ಭಯಾನಕ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನಲ್ಲಿದ್ದ ಏರ್​ ಬ್ಯಾಗ್​ ತೆರೆದುಕೊಂಡಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಾಹನಗಳೆರಡರ ಚಾಲಕರನ್ನು ರಕ್ಷಿಸಿದ್ದಾರೆ. ಈ ವೇಳೆ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತಷ್ಟೆ. ಆದರೆ, ವಿಡಿಯೋದಲ್ಲಿ ಅಪಘಾತದ ತೀವ್ರತೆ ಭಯ ಹುಟ್ಟಿಸುವಂತಿದೆ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts