More

    ಟೆಲಿಕಾಂ ಆಯ್ತು ಇದೀಗ ಇ-ಕಾಮರ್ಸ್​ಗೂ ಲಗ್ಗೆ ಇಟ್ಟ ಜಿಯೋ: ರಿಲಯನ್ಸ್​ ಕಂಪನಿಯಿಂದ ಗ್ರಾಹಕರಿಗೆ ಗುಡ್​ನ್ಯೂಸ್​!

    ನವದೆಹಲಿ: ಜಿಯೋ ಕಂಪನಿ ಆರಂಭಿಸಿ ಕೆಲವೇ ತಿಂಗಳುಗಳಲ್ಲಿ ಅನೇಕ ಗ್ರಾಹಕರನ್ನು ತನ್ನತ್ತ ಸೆಳೆದು ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​(ಆರ್​ಐಎಲ್​) ಇದೀಗ ತನ್ನ ಗಮನವನ್ನು ಇ-ಕಾಮರ್ಸ್​ ಕಡೆ ನೆಟ್ಟಿದ್ದು, ಅಮೆಜಾನ್​ ಮತ್ತು ಫ್ಲಿಫ್​ಕಾರ್ಟ್​ನಂತಹ ದೈತ್ಯ ಕಂಪನಿಗಳಿಗೆ ಸವಾಲೆಸೆಯಲು ಸಜ್ಜಾಗಿದೆ.

    ಜಿಯೋಮಾರ್ಟ್​ ಹೆಸರಿನ ಇ-ಕಾಮರ್ಸ್​ ಉದ್ಯಮವನ್ನು ದೇಶಾದ್ಯಂತ ತೆರೆಯಲು ರಿಲಯನ್ಸ್​ ಕಂಪನಿ ಎಲ್ಲ ತಯಾರಿ ನಡೆಸಿಕೊಂಡಿದೆ. ರಿಲಯನ್ಸ್​ ರಿಟೈಲ್​, ಜಿಯೋಮಾರ್ಟ್​ ಆಪರೇಟ್​ ಮಾಡಲಿದ್ದು, ಇದು ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ನ ಚಿಲ್ಲರೆ ಅಂಗವಾಗಿದೆ.

    ಪ್ರಾರಂಭದಲ್ಲಿ ಪರೀಕ್ಷಾರ್ಥವಾಗಿ ಜಿಯೋಮಾರ್ಟ್​ ಉದ್ಘಾಟಿಸಲಾಗಿದ್ದು, ನವಿ ಮುಂಬೈ, ಥಾಣೆ ಮತ್ತು ಕಲ್ಯಾಣ್​ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಳಿಕ ಇದನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

    ಆರ್​ಐಎಲ್​ ಮುಖ್ಯಸ್ಥ ಹಾಗೂ ಭಾರತದ ಬಿಲಿಯನೇರ್ ಮುಖೇಶ್​ ಅಂಬಾನಿ ಕಳೆದ ವರ್ಷವೇ ಈ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದರು. ಜಿಯೋಮಾರ್ಟ್​ಗೆ ಪೂರ್ವ ನೋಂದಣಿಗಳನ್ನು ಮಾಡಿಸುವ ಮೂಲಕ ಕಂಪನಿ ಉದ್ಯಮವನ್ನು ಆರಂಭಿಸಿದೆ. 50 ಸಾವಿರಕ್ಕಿಂತ ಹೆಚ್ಚಿನ ಉತ್ಪನ್ನಗಳ ಮೂಲಕ ಜನರನ್ನು ಪ್ರಚೋದಿಸಲು ಹಲವಾರು ಆಫರ್​ಗಳನ್ನು ನೀಡಲಾಗುತ್ತದೆ.

    ಕನಿಷ್ಠ ಆರ್ಡರ್​ಗೂ ಉಚಿತ ಹೋಮ್​ ಡೆಲಿವರಿ, ಉತ್ಪನ್ನ ಹಿಂದಿರುಗಿಸಲು ಯಾವುದೇ ಪ್ರಶ್ನೆಯನ್ನು ಕೇಳದಿರುವುದು, ವೇಗದ ಡೆಲಿವರಿ ಭರವಸೆ ಸೇರಿದಂತೆ ಅನೇಕ ಆಫರ್​ಗಳನ್ನು ಜಿಯೋಮಾರ್ಟ್​ ಅಧಿಕೃತ ವೆಬ್​ಸೈಟ್​ನಲ್ಲಿ ಹೈಲೈಟ್ಸ್​ ಮಾಡಲಾಗಿದೆ. ಅಲ್ಲದೆ, ಇದು ದೇಶದ ಹೊಸ ಅಂಗಡಿ ಎಂದು ಹೇಳುವ ಮೂಲಕ ಅಮೆಜಾನ್​ ಮತ್ತು ಫ್ಲಿಫ್​ಕಾರ್ಟ್​ ಗ್ರಾಹಕರನ್ನು ತನ್ನತ್ತ ಸೆಳೆಯುವ ಅನೇಕ ಪ್ರಯತ್ನಗಳಿಗೆ ಕಂಪನಿ ಕೈಹಾಕಿದೆ.

    ಜಿಯೋಮಾರ್ಟ್​ಗೆ ನೋಂದಣಿ ಮಾಡಿಕೊಂಡಲ್ಲಿ ಆಕರ್ಷಕ ಡಿಸ್ಕೌಂಟ್​ ಸಿಗಲಿದೆ ಎಂದು ಜಿಯೋ ಬಳಕೆದಾರರಿಗೆ ಈಗಾಗಲೇ ಕಂಪನಿ ಆಹ್ವಾನ ಸಂದೇಶವನ್ನು ಕಳುಹಿಸಿದೆ. ಇದರ ಪ್ರಕಾರ ಮೊದಲೇ ನೋಂದಣಿ ಮಾಡಿಕೊಂಡವರಿಗೆ 3,000 ರೂ.ವರೆಗೂ ವಿನಾಯಿತಿ ಸಿಗಲಿದೆ. ವಿಶೇಷವೆಂದರೆ ಜಿಯೋಮಾರ್ಟ್​ ಅನ್ನು ಆನ್​ಲೈನ್​ ಮತ್ತು ಆಫ್​ಲೈನ್​ ಎರಡರಲ್ಲೂ ತರಲು ಕಂಪನಿ ನಿರ್ಧರಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts