More

    ಡಾಲಿ ಧನಂಜಯ ಅಲ್ಲ ಕೋಟಿ ಧನಂಜಯ ! ಕನ್ನಡಕ್ಕೆ ಬಂತು ಜಿಯೋ ಸ್ಟುಡಿಯೋಸ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಈಗಾಗಲೇ ಬಾಲಿವುಡ್​ನಲ್ಲಿ “ಆರ್ಟಿಕಲ್​ 370′, “ಶೈತಾನ್​’, “ಲಾಪತಾ ಲೇಡೀಸ್​’ ಸೇರಿ ಕೆಲವು ಸಿನಿಮಾಗಳನ್ನು ನಿರ್ಮಿಸಿರುವ ಜಿಯೋ ಸ್ಟುಡಿಯೋಸ್​ ಸಂಸ್ಥೆ, “ಕೋಟಿ’ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದೆ. ಡಾಲಿ ಧನಂಜಯ ನಾಯಕನಾಗಿರುವ ಈ ಡ್ರಾಮಾ ಥ್ರಿಲ್ಲರ್​ ಚಿತ್ರಕ್ಕೆ ಪರಮ್​ ಆ್ಯಕ್ಷನ್​&ಕಟ್​ ಹೇಳುತ್ತಿದ್ದು, ಇತ್ತೀಚೆಗಷ್ಟೆ ಟೀಸರ್​ ಬಿಡುಗಡೆ ಮಾಡಲಾಯಿತು. ನಾಯಕ ಧನಂಜಯ, “ಒಂದು ಕೋಟಿ ರೂಪಾಯಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋಕ್ಕಾದರೆ ಸೆಟಲ್​ ಆಗಿಬಿಡಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಮ್ಮ ಕೋಟಿನೂ ಅಷ್ಟೇ. ಎಲ್ಲ ಮನೆಗಳಲ್ಲೂ ಈ ಕೋಟಿಯಂತಹ ಅಣ್ಣ, ತಮ್ಮ, ಮಗ ನಿಮಗೆ ಸಿಗುತ್ತಾರೆ. ಕಷ್ಟಪಟ್ಟು ದುಡಿದು ಎಲ್ಲ ಸರಿ ಮಾಡಿಕೊಳ್ಳಬಹುದು ಅಂದುಕೊಳ್ಳುತ್ತಿರುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ.

    ಡಾಲಿ ಧನಂಜಯ ಅಲ್ಲ ಕೋಟಿ ಧನಂಜಯ ! ಕನ್ನಡಕ್ಕೆ ಬಂತು ಜಿಯೋ ಸ್ಟುಡಿಯೋಸ್​

    ಈ ಹಿಂದೆ ಟಿವಿ ರಿಯಾಲಿಟಿ ಶೋಗಳು ಮತ್ತು ಧಾರಾವಾಹಿಗಳನ್ನು ರೂಪಿಸಿ ಅನುಭವವಿರುವ, ಜಿಯೋ ಸ್ಟುಡಿಯೋಸ್​ನ ಕನ್ನಡ ಭಾಷೆಯ ಮುಖ್ಯಸ್ಥರೂ ಆಗಿರುವ ಪರಮ್​, ಚೊಚ್ಚಲ ನಿರ್ದೇಶನದ ಬಗ್ಗೆ, “ನನ್ನ ಕನಸು ಈ ಸಿನಿಮಾ ಮೂಲಕ ನಿಜವಾಗಿದೆ. ಇದು ಸಾಧ್ಯವಾಗಿದ್ದು ಜಿಯೋ ಸ್ಟುಡಿಯೋಸ್​ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲಿಟ್ಟ ನಂಬಿಕೆಯಿಂದ. ಒಳ್ಳೆ ಕಥೆಗಳನ್ನು ಹೇಳಬೇಕು, ಬೇರೆ ಕಥೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಎಂಬುದು ಜಿಯೋ ಸ್ಟುಡಿಯೋಸ್​ ಮೂಲ ಉದ್ದೇಶ’ ಎಂದು ಹೇಳಿಕೊಳ್ಳುತ್ತಾರೆ.

    ಡಾಲಿ ಧನಂಜಯ ಅಲ್ಲ ಕೋಟಿ ಧನಂಜಯ ! ಕನ್ನಡಕ್ಕೆ ಬಂತು ಜಿಯೋ ಸ್ಟುಡಿಯೋಸ್​

    ಚಿತ್ರದಲ್ಲಿ ಧನಂಜಯಗೆ ಮೋಕ್ಷಾ ಕುಶಾಲ್​ ನಾಯಕಿಯಾಗಿದ್ದಾರೆ. “ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಖ್ಯಾತಿಯ ರಮೇಶ್​ ಇಂದಿರಾ ವಿಲನ್​ ಆಗಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ್​ ಸತ್ಯ, ತನುಜಾ ವೆಂಕಟೇಶ್​ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭ್​ ಸಂಗೀತ, ನೊಬಿನ್​ ಪೌಲ್​ ಹಿನ್ನೆಲೆ ಸಂಗೀತ, ಪ್ರತಿಕ್​ ಶೆಟ್ಟಿ ಸಂಕಲನ, ಅರುಣ್​ ಬ್ರಹ್ಮನ್​ ಛಾಯಾಗ್ರಹಣ ಇರಲಿದೆ. ಇದೇ ಜೂ. 14ರಂದು “ಕೋಟಿ’ ರಾಜ್ಯಾದ್ಯಂತ ರಿಲೀಸ್​ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts