More

    ಇಂದು ಯುಐ ಟೀಸರ್; ಸುದೀಪ್, ಶಿವಣ್ಣ, ಅಲ್ಲು ಅರವಿಂದ್, ಡಾಲಿ ಸಾಥ್

    ಬೆಂಗಳೂರು: ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಯುಐ’ ಚಿತ್ರದ ಟೀಸರ್ ಇಂದು ರಿಲೀಸ್ ಆಗುತ್ತಿದೆ. ಈಗಾಗಲೇ ವಿಭಿನ್ನ ಶೀರ್ಷಿಕೆ, ಪೋಸ್ಟರ್‌ಗಳಿಂದ ಗಮನ ಸೆಳೆದಿದ್ದು, ಈ ಹಿಂದೆ ದೃಶ್ಯಗಳೇ ಇಲ್ಲದ ವಿಭಿನ್ನ ಟೀಸರ್ ರಿಲೀಸ್ ಮಾಡಲಾಗಿತ್ತು. ಆದರೆ, ಇಂದು ಇನ್ನೇನು ಹೊಸ ಬಗೆಯ ಪ್ರಯತ್ನವಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗಿದೆ.

    ಇಂದು ಬೆಳಗ್ಗೆ 11 ಗಂಟೆಗೆ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಶಿವರಾಜಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ ಹಾಗೂ ತೆಲುಗಿನ ಖ್ಯಾತ ನಿರ್ಮಾಪಕ, ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇತ್ತೀಚೆಗೆ ವಿಶೇಷ ವಿಡಿಯೊ ರಿಲೀಸ್ ಮಾಡಿದ್ದ ಚಿತ್ರತಂಡ ಚಿತ್ರದ ಸ್ಟ್ ಲುಕ್ ಟೀಸರ್ ದಿನಾಂಕವನ್ನು ಡೀಕೋಡ್ ಮಾಡಿ ಎಂದು ಅಭಿಮಾನಿಗಳಿಗೆ ಸವಾಲು ನೀಡಿತ್ತು. ಆ ವಿಡಿಯೊದಲ್ಲಿ ಕುದುರೆ ಓಡುವ ಶಬ್ದ ಕೇಳಿಸಿದ್ದು ಬಿಟ್ಟರೆ ಬೇರೇನೂ ಇರಲಿಲ್ಲ. ಡೀಕೋಡ್ ಮಾಡಿದ ಮೊದಲ 50 ಅಭಿಮಾನಿಗಳಿಗೆ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಪಾಸ್ ನೀಡುವುದಾಗಿ ೋಷಣೆ ಮಾಡಿದ್ದು, ವಿಜೇತರ ಪಟ್ಟಿಯನ್ನು ಚಿತ್ರತಂಡ ೋಷಣೆ ಮಾಡಿದೆ.

    ಚಿತ್ರದಲ್ಲಿ ಉಪೇಂದ್ರಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿ ಫಿಲಂಸ್‌ನ ಮನೋಹರನ್ ಮತ್ತು ವೀನಸ್ ಎಂಟರ್‌ಟೇನರ್ಸ್‌ನ ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts