More

    ಹಳ್ಳಿಯ ಪ್ರತಿಭೆಗಳಿಂದ ಕ್ರೀಡೆಯಲ್ಲಿ ಛಾಪು

    ಸಂಡೂರು: ಕ್ರೀಡೆ ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಹಾಗಾಗಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ ಎಂದು ಜೆಎಸ್‌ಡಬ್ಲುೃ ಸಿಎಸ್‌ಆರ್ ಹಿರಿಯ ಉಪಾಧ್ಯಕ್ಷ ರಾಲ್ ಸುನೀಲ್ ಹೇಳಿದರು.

    ಕ್ರೀಡೆ ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಳ

    ಪಟ್ಟಣದ ಎಸ್‌ಆರ್‌ಎಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುವ ಭಾರತೀಯ ಕ್ರೀಡಾಪಟು ಶೇ.90 ರಷ್ಟು ಹಳ್ಳಿಗಳಿಂದ ಬಂದವರಾಗಿದ್ದಾರೆ. ಜಿಂದಾಲ್‌ನಲ್ಲಿದ್ದ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಣ ಗೆಲ್ಲುವ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಎಂದರು.

    ಇದನ್ನೂ ಓದಿ: B Dayananda, Bengaluru City Police Commissioner: ಸೈಬರ್ ಕ್ರೈಂ, ಫೇಕ್ ನ್ಯೂಸ್ ಹೇಗೆ ನಿಯಂತ್ರಣ ಮಾಡ್ತೀರಿ?

    ತಾಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಯಶವಂತನಗರದ ಎಸ್‌ಯುಜೆಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

    ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ.ಹಿರೇಮಠ್, ಟಿಪಿಒ ನೂರ್‌ಅಹ್ಮದ್ ಮಾತನಾಡಿದರು. ಜಿಂದಾಲ್ ಅಧಿಕಾರಿ ಪೆದ್ದಣ್ಣ ಬಿಡಾಲ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚೌಕಳಿ ಪರಶುರಾಮಪ್ಪ, ಬಸವರಾಜ್, ಸಿಆರ್‌ಪಿ ಶೇಖರ್ ಪಾಟೀಲ್, ಬಿಆರ್‌ಪಿ ಮಂಜುನಾಥ್ ಆದಿಮನಿ, ಕೃಷ್ಣಾನಗರ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಅನಿತಾ, ಪಾಲಾಕ್ಷಪ್ಪ, ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ರಾಮಕೃಷ್ಣ ಶಾಲೆ ಮುಖ್ಯಸ್ಥರಾದ ಮಹಂತೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts