More

    ಹೆಚ್ಚಿನ ಬಡ್ಡಿಯಾಸೆಗೆ ಇರಿಸಿದ ಚಿನ್ನ, ನಗದು ಧೋಖಾ!: 92 ಲಕ್ಷ ರೂ. ವಂಚನೆ

    ಕುಂದಾಪುರ: ಇಲ್ಲಿನ ಜುವೆಲ್ಲರಿಯೊಂದರಲ್ಲಿ ಹೆಚ್ಚಿನ ಬಡ್ಡಿ ನೆಪದಲ್ಲಿ ಸಾರ್ವಜನಿಕರಿಂದ ಚಿನ್ನ ಮತ್ತು ನಗದು ಠೇವಣಿ ಸಂಗ್ರಹಿಸಿದ್ದು, ಹೂಡಿಕೆ ಮಾಡಿದ ಚಿನ್ನ ಮತ್ತು ನಗದು ಹಿಂದುರುಗಿಸದೆ ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

    ಮೊಹಮ್ಮದ್ ಇಪ್ತಿಕಾರ್ ಕಂಡ್ಲೂರು, ಮೋಮಿನ್ ಯೂಸೆಫ್ ಆಲಿ ಭಟ್ಕಳ, ಗಣೇಶ್ ಶೆಟ್ಟಿ ಮೊಳಹಳ್ಳಿ, ಖತೀಬ್ ಅಬ್ದುಲ್ ರೆಹಮಾನ್ ಭಟ್ಕಳ, ಬಿ.ಎಂ.ಜಾಫರ್, ಫರಾಜ್, ಆಸಿಫ್, ನಜೀರ್ ಅಹಮ್ಮದ್, ಮೊಹಮ್ಮದ್ ಮುಶ್ರಫ್, ಮೊಹಮ್ಮದ್ ಆಸೀಫ್, ಮೊಹಮ್ಮದ್ ನೂರೈಸ್, ಎಸ್.ಜೀವನ್, ಬೆಟ್ಟಿ ಬಾಷಾ, ಬೆಟ್ಟಿ ಅಕ್ಬರ್, ಬಶೀರ್ ಅಹ್ಮದ್, ಕೆ.ಮುನೀರ್, ಅರ್ಫಾದ್ ಮೊಹಮ್ಮದ್, ಮೊಹಮ್ಮದ್ ಪಾಮೀಝಾ, ಸರ್ದಾರ್ ಸವೀದ್ ಅಕ್ಬರ್, ನೌಶಾದ್, ಮೊಹಮ್ಮದ್ ಫಾರೀಸ್, ಬಿ.ಭಾನು, ನಾಸಿಯಾ, ವಾಹಿದಾ ಆಪಾದಿತರು. ಕುಂದಾಪುರ ನಿವಾಸಿ ಇರ್ಷಾದ್ ಗುಲ್ಜಾರ್ ಸೇರಿ 24 ಜನ ಗ್ರಾಹಕರು ಚಿನ್ನ ಹಾಗೂ ನಗದು ಕಳೆದುಕೊಂಡವರು.

    ಕುಂದಾಪುರ ಮುಖ್ಯರಸ್ತೆಯಲ್ಲಿ 2000 ಇಸವಿಯಲ್ಲಿ ಆರಂಭವಾದ ಜುವೆಲ್ಲರಿಯಲ್ಲಿ ಗ್ರಾಹಕರು ಹೆಚ್ಚಿನ ಬಡ್ಡಿಯಾಸೆಗೆ ಚಿನ್ನ ಹಾಗೂ ನಗದು ಠೇವಣಿ ಇಟ್ಟಿದ್ದರು. ಲಕ್ಷ ರೂಪಾಯಿ ಮೌಲ್ಯಕ್ಕೆ ತಿಂಗಳಿಗೆ 2,500 ರೂಪಾಯಿಯಂತೆ ಬಡ್ಡಿ ನೀಡಲಾಗುತ್ತಿತ್ತು. ಗ್ರಾಹಕರಿಗೆ ಬಡ್ಡಿ ಮಾತ್ರ ನೀಡುತ್ತಿದ್ದು, ಹೂಡಿಕೆ ಮಾಡಿದ ಬಂಡವಾಳ ಮಾತ್ರ ಹಿಂದಕ್ಕೆ ನೀಡಿರಲಿಲ್ಲ.

    24 ಮಂದಿ 56.76 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 35.88 ಲಕ್ಷ ರೂ. ನಗದು ಸೇರಿ ಒಟ್ಟು 92.64 ಲಕ್ಷ ರೂ. ಹೂಡಿಕೆ ಮಾಡಿದ್ದರು. ಪ್ರಸ್ತುತ ಜುವೆಲ್ಲರಿ ಶಾಪ್ ಮುಚ್ಚಿದ್ದರಿಂದ ಗ್ರಾಹಕರಿಗೆ ಮೋಸ ಹೋಗಿರುವುದು ಗೊತ್ತಾಗಿದೆ.

    ಕುಂದಾಪುರ ಕಸಬಾ ನಿವಾಸಿ ಇರ್ಷಾದ್ ಗುಲ್ಜಾರ್ ಎಂಬುವರು ದೂರು ನೀಡಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಡಿಎಸ್ಪಿ ಶ್ರೀಕಾಂತ್ ಮಾರ್ಗದಶನದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಸುದರ್ಶನ್ ನಿರ್ದೇಶನದಲ್ಲಿ ಎಸ್‌ಐ ಸದಾಶಿವ ಗೌರೊಜಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts