More

    ದ ಹಂಡ್ರೆಡ್ ಕ್ರಿಕೆಟ್ ಟೂರ್ನಿಗೆ ಭಾರತದ ಮತ್ತೋರ್ವ ಕ್ರಿಕೆಟ್ ಆಟಗಾರ್ತಿ

    ಮುಂಬೈ: ಭಾರತದ ಯುವ ಬ್ಯಾಟುಗಾರ್ತಿ ಜೆಮೀಮಾ ರೋಡ್ರಿಗಸ್, ಜುಲೈ 21 ರಿಂದ ಬ್ರಿಟನ್‌ನಲ್ಲಿ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ದ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ನಾರ್ಥರ್ನ್ ಸೂಪರ್ ಚಾರ್ಜರ್ಸ್‌ ಪರ ಕಣಕ್ಕಿಳಿಯಲಿದ್ದಾರೆ. ಇದರಿಂದ ಟೂರ್ನಿಯಲ್ಲಿ ಆಡುತ್ತಿರುವ ಭಾರತದ ಆಟಗಾರ್ತಿಯರ ಸಂಖ್ಯೆ 5ಕ್ಕೇರಿದೆ.

    ಇದನ್ನೂ ಓದಿ: ಪತ್ನಿ ನತಾಶಾ ಈಜುಡುಗೆ ಫೋಟೋಗೆ ಪಾಂಡ್ಯ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?, 

    ಟಿ20 ತಂಡದ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಉಪನಾಯಕಿ ಸ್ಮತಿ ಮಂದನಾ, ಆರಂಭಿಕ ಬ್ಯಾಟುಗಾರ್ತಿ ಶೆಫಾಲಿ ವರ್ಮ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮ ವಿವಿಧ ತಂಡಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ‘ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಉತ್ಸುಕಳಾಗಿದ್ದೇನೆ. ಇದೊಂದು ಹೊಸ ಬಗೆಯ ಟೂರ್ನಿ. ಇದಕ್ಕೂ ಮೊದಲು ಯಾರ್ಕ್‌ಷೈರ್ ಡೈಮಂಡ್ಸ್ ಪರ ಆಡಿರುವೆ. ಹೀಗಾಗಿ ತಂಡದಲ್ಲಿ ಕೆಲ ಆಟಗಾರ್ತಿಯರ ಪರಿಚಯವಿದೆ’ ಎಂದು 20 ವರ್ಷದ ರೋಡ್ರಿಗಸ್ ತಿಳಿಸಿದ್ದಾರೆ.

    ಇದನ್ನೂ ಓದಿ: ಅಭಿಮಾನಿಗಳು ಇಲ್ಲದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲ್ಲ ಎಂದು ಜೋಕೋ ಹೇಳಿದ್ಯಾಕೆ..?, 

    ರೋಡ್ರಿಗಸ್ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಸದ್ಯ ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಏಕೈಕ ಟೆಸ್ಟ್ ಹಾಗೂ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿದೆ.

    VIDEO: ಫುಟ್‌ಬಾಲ್ ಆಟಗಾರನ ಸಾಮಾಜಿಕ ಕಾರ್ಯಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಶ್ಲಾಘನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts