ಸಿನಿಮಾ

2023ರ ಜೆಇಇ ಮೇನ್ಸ್: ಪೇಪರ್-2 ಫಲಿತಾಂಶ ಪ್ರಕಟ

ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) 2023ರ ಜೆಇಇ ಮೇನ್ಸ್ 2ನೇ ಸೆಷನ್​ನ 2ನೇ ಪೇಪರ್​ನ ಫಲಿತಾಂಶಗಳನ್ನು ಇಂದು ಪ್ರಕಟಿಸಿದೆ. ಈ ಪರೀಕ್ಷೆಗಳು ಕಳೆದ ಏಪ್ರೀಲ್​ ತಿಂಗಳಿನಲ್ಲಿ ನಡೆದಿದ್ದು, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಮತ್ತು ಬಿ.ಪ್ಲಾನಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಪ್ರಕರಣ; ಎನ್​ಐಎ ಅಧಿಕಾರಿಗಳಿಂದ ಎಫ್​​ಐಆರ್​​​ ದಾಖಲು

ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

ಪರೀಕ್ಷಾರ್ಥಿಗಳು ತಮ್ಮ ಫಲಿತಾಂಶವನ್ನು ಜೆಇಇಯ ಅಧಿಕೃತ ವೆಬ್‌ಸೈಟ್‌ jeemain.nta.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಜೆಇಇಯ ಅಧಿಕೃತ ವೆಬ್‌ಸೈಟ್​​ಗೆ ಭೇಟಿ ನೀಡಿ, ಫಲಿತಾಂಶದ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮಾಹಿತಿಯನ್ನು ನಮೂದಿಸಿ, ಸಬಮಿಟ್ ಬಟನ್​ ಮೇಲೆ ಕ್ಲಿಕ್​ ಮಾಡಿದರೆ ಫಲಿತಾಂಶ ಪರದೆಯ ಮೇಲೆ ಪ್ರಕಟವಾಗುತ್ತದೆ. (ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್