More

    ನಿಖಿಲ್​ ಕುಮಾರಸ್ವಾಮಿಗೆ ಸ್ವಪಕ್ಷದವರಿಂದಲೇ ಬೈಗುಳ! ಜೆಡಿಎಸ್​ ಯುವರಾಜನ ಸಮಜಾಯಿಷಿಗೂ ಕರಗಲಿಲ್ಲ ಕಾರ್ಯಕರ್ತರ ಆಕ್ರೋಶ

    ಬೆಂಗಳೂರು: ಜೆಡಿಎಸ್​ನ ಯುವರಾಜ ನಿಖಿಲ್​ ಕುಮಾರಸ್ವಾಮಿಗೆ ಪಕ್ಷದ ಕಾರ್ಯಕರ್ತರೇ ಬಹಿರಂಗವಾಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಯುವಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದಲೇ ಹೊರಡಿ, ರಾಜಕೀಯದತ್ತ ಮತ್ತೆ ಸುಳಿಯಬೇಡಿ. ನೀವು ಸಿನಿಮಾ ಮಾಡ್ಕೊಂಡು ಆರಾಮಾಗಿರಿ… ಎಂದೆಲ್ಲ ವಾರ್ನಿಂಗ್​ ಮಾಡಿದ್ದರು. ಪಕ್ಷದ ಕಾರ್ಯಕರ್ತರು ತಮ್ಮ ವಿರುದ್ಧ ಗರಂ ಆಗಿದ್ದನ್ನ ಅರಿತ ನಿಖಿಲ್​ ಸಮಜಾಯಿಷಿ ಕೊಟ್ಟಿದ್ದಾರೆ.

    ಹೌದು, ಮೊನ್ನೆ(ಗುರುವಾರ) ವಿ.ಮುನಿರತ್ನ ಜತೆಗಿರುವ ಪೋಟೋವೊಂದನ್ನು ಫೇಸ್​ಬುಕ್​ನಲ್ಲಿ ಅಪ್ಲೋಡ್​ ಮಾಡಿದ್ದ ನಿಖಿಲ್​, ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದರು. ಇದನ್ನು ಆಕ್ಷೇಪಿಸಿದ ಜೆಡಿಎಸ್​ ಕಾರ್ಯಕರ್ತರು, ‘ನಾವು ಯಾವತ್ತಿದ್ದರೂ ಕುಮಾರಣ್ಣ ಮತ್ತು ದೇವೇಗೌಡರ ಅಭಿಮಾನಿಗಳು. ರಾಜಕೀಯ ನಿಮಗೆ(ನಿಖಿಲ್​) ಆಗಿ ಬರಲ್ಲ‌‌. ಯುವ ಅಧ್ಯಕ್ಷ ಸ್ಥಾನವನ್ನ ಗ್ರೌಂಡ್ ಕೆಲಸ ಮಾಡೋರಿಗೆ ಕೊಡಿ, ಇಲ್ಲಾಂದ್ರೆ ಪಕ್ಷ ಹಾಳಾಗುತ್ತೆ..’ ಎಂದು ಸಾಮಾಜಿಕ ಜಾಲತಾಣದಲ್ಲೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದರ ಗಂಭೀರತೆ ಅರಿತ ನಿಖಿಲ್​, ‘ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನಾನು ಶುಭಕೋರಬಾರದಿತ್ತು‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ’ ಎಂದಿದ್ದಾರೆ. ಅಲ್ಲದೆ ಮುನಿರತ್ನಗೆ ವಿಶ್​ ಮಾಡಿದ್ದಕ್ಕೆ ಕಾರಣ ಏನೆಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿರಿ ಎಚ್​ಡಿಕೆ- ಡಿಕೆಶಿ ಇಬ್ಬರೂ ನಿವೃತ್ತ ಕುದುರೆಗಳು: ಸಿ.ಪಿ.ಯೋಗೇಶ್ವರ್

    ”ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. ‘ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನಾನು ಶುಭಕೋರಬಾರದಿತ್ತು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೆ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ” ಎಂದು ನಿಖಿಲ್​ ಕುಮಾರಸ್ವಾಮಿ ಇಂದು(ಶನಿವಾರ) ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

    ”ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ ಅವರು ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ”.

    ”ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ” ಎಂದು ನಿಖಿಲ್​ ಬರೆದುಕೊಂಡಿದ್ದಾರೆ.

    ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. 'ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ…

    Posted by Nikhil Gowda on Friday, July 24, 2020

    ಈ ಫೋಸ್ಟ್​ಗೆ ಕೆಲವರು ಜೈ ಎನ್ನುತ್ತಿದ್ದರಾದರೂ ಬಹುತೇಕ ಕಾರ್ಯಕರ್ತರ ಕೋಪ ಕಡಿಮೆ ಆಗಿಯೇ ಇಲ್ಲ. ಮುನಿರತ್ನಗೆ ಶುಭ ಕೋರುವ ಅಗತ್ಯ ಇರಲಿಲ್ಲ… ಮೈತ್ರಿ ಸರ್ಕಾರಕ್ಕೆ ಬಗೆದ ದ್ರೋಹವನ್ನು ನಮ್ಮಿಂದ ಸಹಿಸಲು ಸಾಧ್ಯವಿಲ್ಲ, ನೀವು ಮರೆಯಬಹುದು ಆದ್ರೆ ನಾವು ಮರೆಯಲ್ಲ… ನಿಮ್ಮ ಸಮರ್ಥನೆ ಏನೇ ಇರಬಹುದು. ಆದರೆ, ನಾವು ಪ್ರಾದೇಶಿಕ ಪಕ್ಷದ ಅದರಲ್ಲೂ ಕುಮಾರಣ್ಣನ ಕಟ್ಟಾ ಅಭಿಮಾನಿಗಳು. ಕುಮಾರಣ್ಣನಿಗೆ ದ್ರೋಹ ಬಗೆದವರಲ್ಲಿ ಮುನಿರತ್ನ ಕೂಡ ಒಬ್ಬ. ಆದ್ದರಿಂದ ನಾವು ಖಂಡಿಸುತ್ತೇವೆ. ಕುಮಾರಣ್ಣನಿಗೆ ಮೋಸ ಮಾಡಿದ ಪ್ರತಿಯೊಬ್ಬರನ್ನೂ ಬದ್ಧ ವೈರಿಗಳಂತೆ ಕಾಣುತ್ತೆವೆಯೇ ವರೆತು ಮಿತ್ರರಂತೆ ಎಂದಿಗೂ ಕಾಣುವುದಿಲ್ಲ… ನೀನು(ನಿಖಿಲ್) ಸಿನಿಮಾ ಮಾಡಿಕೊಂಡೇ ಇದ್ದುಬಿಡು, ಯುವ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು ಎಂದು ಮತ್ತೊಮ್ಮೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts