More

    ಸರ್ಕಾರದ ಗಮನಕ್ಕೆ ನೀರು ಪೂರೈಕೆ ಸಮಸ್ಯೆ ; ಜೆಡಿಎಸ್ ನಾಯಕರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ

    ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಕಾಮಗಾರಿ ನಿಧಾನಗತಿ ಮತ್ತು ಭೈರಗೊಂಡ್ಲು ಜಲಾಶಯದ ಸಾಮರ್ಥ್ಯ ಇಳಿಸುವ ಪರ್ಯಾಯ ಪ್ರಸ್ತಾವನೆಯಿಂದ ಉಂಟಾಗುವ ನೀರು ಪೂರೈಕೆ ಸಮಸ್ಯೆ ಬಗ್ಗೆ ಅವಿಭಜಿತ ಜಿಲ್ಲೆಯ ದಳಪತಿಗಳು ಸರ್ಕಾರದ ಗಮನ ಸೆಳೆದಿದ್ದಾರೆ.

    ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಎರಡು ಜಿಲ್ಲೆಯ ಜೆಡಿಎಸ್ ನಾಯಕರು ಮನವಿ ಸಲ್ಲಿಸಿ, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾ ಜಿಲ್ಲೆಗಳಿಗೆ ಪ್ರಮುಖವಾಗಿ ಕುಡಿಯುವ ನೀರು ಪೂರೈಸುವ ಮತ್ತು ಕೆರೆಗಳನ್ನು ತುಂಬಿಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ 2012ರಿಂದ ಆರಂಭವಾಗಿದೆ. ಭೈರಗೊಂಡ್ಲು ಜಲಾಶಯದವರೆಗೆ ಕೆಲಸವೂ ಪ್ರಗತಿಯಲ್ಲಿದ್ದು, ಅಣೆಕಟ್ಟೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎಂದು ಅಸವಾಧಾನ ವ್ಯಕ್ತಪಡಿಸಿದ್ದಾರೆ.

    ಮೊದಲು ಎತ್ತಿನಹೊಳೆಯ ಮೂಲ ಸ್ಥಳದಲ್ಲಿ ನಿಶ್ಚಿತ ನೀರಿನ ಹರಿವಿನ ಕೊರತೆಯಿಂದ ದೇವರಾಯನದುರ್ಗದ ಬಳಿ 10 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸಿ ವಿವಿಧ ಜಿಲ್ಲೆಗಳಿಗೆ ನೀರು ಪೂರೈಸಲು ಯೋಜನೆ ರೂಪಿಸಲಾಗಿತ್ತು. ಆದರೆ, ದೇವರಾಯನದುರ್ಗದಲ್ಲಿ ಭೂ ಸ್ವಾಧೀನದ ವಿವಾದದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನ ಭೈರಗೊಂಡ್ಲು ಬಳಿ ಜಲಾಶಯ ನಿರ್ವಾಣಕ್ಕೆ ಮುಂದಾಗಿದ್ದು ಇದಕ್ಕೆ ಹೆಚ್ಚಿನ ಭೂ ಪರಿಹಾರ ಒದಗಿಸಬೇಕೆಂಬ ಹೋರಾಟ ಎದುರಾಗಿದೆ. ಹೆಚ್ಚುವರಿ ಪರಿಹಾರ ನೀಡಬೇಕೆಂಬ ಲೆಕ್ಕಾಚಾರದಲ್ಲಿ ಜಲಾಶಯದ ಸಾಮರ್ಥ್ಯವನ್ನು 5.78 ಟಿಎಂಸಿಯಿಂದ 2 ಟಿಎಂಸಿಗೆ ಇಳಿಸಿ, ನೇರವಾಗಿ ಗುರುತ್ವ, ತೆರೆದ ಕಾಲುವೆಯ ಮೂಲಕ ನೀರು ಪೂರೈಸುವ ಪ್ರಸ್ತಾವನೆಯನ್ನು ವಿಶ್ವೇಶ್ವರಯ್ಯ ಜಲ ನಿಗಮವು ಮಂಡಿಸಿದ್ದು, ಇದರಿಂದ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಪರಿಷ್ಕೃತ ಪ್ರಸ್ತಾವನೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

    ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಕೆ.ಮುನೇಗೌಡ, ಜಿ.ಕೆ.ವೆಂಕಟಶಿವರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಚೌಡರೆಡ್ಡಿ, ನಗರಸಭಾ ಸದಸ್ಯ ಆರ್.ಮಟಮಪ್ಪ, ಮುಖಂಡರಾದ ಕೆ.ಆರ್.ರೆಡ್ಡಿ, ಬನ್ನಿಕುಪ್ಪೆ ವೆಂಕಟೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts