More

    ಬಿಜೆಪಿ ಜತೆಗಿನ ಜೆಡಿಎಸ್​ ಮೈತ್ರಿ ದೇವೇಗೌಡರಿಗೆ ನೋವು ತಂದಿದೆಯೇ? ಮಾಜಿ ಶಾಸಕ ಅನ್ನದಾನಿ ಹೇಳಿದ್ದಿಷ್ಟು…

    ಮಂಡ್ಯ: ಬಿಜೆಪಿ ಜತೆಗಿನ ಜೆಡಿಎಸ್​ ಮೈತ್ರಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗೆ ನೋವು ತರಿಸಿದೆ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಮಾಜಿ ಜೆಡಿಎಸ್ ಶಾಸಕ ಅನ್ನದಾನಿ ತಿರುಗೇಟು ನೀಡಿದ್ದಾರೆ.

    ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅನ್ನದಾನಿ, 2006ರಲ್ಲಿ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿದವರ್ಯಾರು? ಆ ದಿ ಬಿಜೆಪಿ ಜತೆಗೆ ಹೋಗುವುದು ಬೇಡ ಅಂತ ಯಾಕೆ ಹೇಳಲಿಲ್ಲ? ಎಂದು ಪ್ರಶ್ನೆ ಮಾಡಿದರು.

    ಅಂದು ಬಿಜೆಪಿ ಜತೆಗೆ ಸರ್ಕಾರ ರಚಿಸುವುದಕ್ಕೆ ದೇವೇಗೌಡ್ರು ವಿರೋಧ ಮಾಡಿದ್ದರು. ಅಂದಿನ ಸರ್ಕಾರದಲ್ಲಿ ಚಲುವರಾಯಸ್ವಾಮಿ ಮಂತ್ರಿಯಾಗಿದ್ದರು. ಬಿಜೆಪಿ ಜೊತೆಗೆ ಹೋದರೆ ದೇವೇಗೌಡರಿಗೆ ನೋವಾಗುತ್ತೆ ಅಂತ ಆ ದಿನ ಯಾಕೆ ಹೇಳಲಿಲ್ಲ? ಅಂದು ಬಿಜೆಪಿ ಜೊತೆಗೆ ಹೋಗೋದಕ್ಕೆ ಕಾರಣ ಯಾರೆಂದು ಚಲುವರಾಯಸ್ವಾಮಿ ಹೇಳಲಿ ಎಂದು ಸವಾಲು ಹಾಕಿದರು.

    ಜೆಡಿಎಸ್ ಮತ್ತು ಬಿಜೆಪಿಗೆ ಹೀನಾಯ ಸ್ಥಿತಿ ಬಂದಿದೆ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, 2018ರಲ್ಲಿ ಜೆಡಿಎಸ್ ಮನೆ ಬಾಗಿಲಿಗೆ ಕಾಂಗ್ರೆಸ್ ನಾಯಕರು ಬಂದಿದ್ದರು. ಆಗ ಕಾಂಗ್ರೆಸ್​ಗೆ ಹೀನಾಯ ಸ್ಥಿತಿ ಇತ್ತಾ ಎಂದು ಪ್ರಶ್ನೆ ಮಾಡಿದ ಅನ್ನದಾನಿ, ಜೆಡಿಎಸ್ ಪಕ್ಷ ಧೂಳಿನಿಂದ ಎದ್ದು ಬರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ತೋರಿಸುತ್ತೇವೆ ಎಂದು ಹೇಳಿದರು.

    ಹೋರಾಟದ ಬಗ್ಗೆ ಮಹತ್ವದ ಸಭೆ
    ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮತ್ತು ನೀರು ಬಿಡುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಹೇಳಿಕೆ ನೀಡದ ಹಿನ್ನೆಲೆಯಲ್ಲಿ ರೈತ ಹಿತರಕ್ಷಣಾ ಸಮಿತಿಯಿಂದ ಹೋರಾಟದ ಬಗ್ಗೆ ಇಂದು ಮಹತ್ವದ ಸಭೆ ನಡೆಸಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸಭೆ ನಡೆದಿದೆ. ಕಳೆದ 58 ದಿನಗಳಿಂದ ಪ್ರತಿಮೆ ಬಳಿಯೇ ರೈತರು ಧರಣಿ ನಡೆಸುತ್ತಿದ್ದು, ನಿನ್ನೆಯಷ್ಟೇ ಧರಣಿ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದ್ದಾರೆ. ರೈತರ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಹಾಗೂ ಮಾಜಿ ಶಾಸಕ ಕೆ.ಅನ್ನದಾನಿ ಭಾಗಿಯಾದರು.

    ಇಸ್ರೇಲ್​-ಹಮಾಸ್​ ಯುದ್ಧವನ್ನೇ ಬಂಡವಾಳ ಮಾಡಿಕೊಂಡ ಕಿಮ್​ ಜಾಂಗ್​ ಉನ್​ನಿಂದ ಮಾರಕ ನಡೆ!

    ಸಂಕ್ರಾಂತಿ ಹಬ್ಬಕ್ಕೆ ಹಲವು ಸಿನಿಮಾ ರಿಲೀಸ್​; ಮಹೇಶ್​ ಬಾಬು ಚಿತ್ರಕ್ಕೆ ಎದುರಾಗಲಿದೆ ಭಾರೀ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts