More

    ಜೆಡಿಎಸ್‌ ಅಭ್ಯರ್ಥಿ ಹೈಜಾಕ್ ಮಾಡಲು ಕಾಂಗ್ರೆಸ್ ತಂತ್ರ?

    ಬೆಂಗಳೂರು: ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸೈಯದ್ ಯಶ್ರಫ್ ಅಲಿ ಖಾದ್ರಿಯನ್ನು ಕಣದಿಂದ ಹಿಂದೆ ಸರಿಸಲು ಕಾಂಗ್ರೆಸ್ ಎಲ್ಲ ತಂತ್ರಗಾರಿಕೆ ಮಾಡುತ್ತಿದೆ.

    ಮುಸ್ಲಿಂ ಮತಗಳು ಹೆಚ್ಚಾಗಿರುವ ಕಾರಣ ಅದೇ ಸಮುದಾಯದ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ಮುಸ್ಲಿಂ ಮತಗಳ ವಿಭಜನೆಗಾಗಿ ಜೆಡಿಎಸ್‌ ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕೆ ಎಂಬ ಚರ್ಚೆ ಗರಿಗೆದರಿದೆ. ಈ ಮಧ್ಯೆ ಇತ್ತೀಚೆಗೆ ಬಸವಕಲ್ಯಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮ್ಮದ್ ಖಾನ್ ಬಿಜೆಪಿಯಿಂದ ಹಣ ಪಡೆದು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಇದೀಗ ತಮ್ಮದೇ ಸಮುದಾಯದ ಜೆಡಿಎಸ್‌ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ‌. ಅದಕ್ಕಾಗಿ ಸ್ಥಳೀಯ ಮುಸ್ಲಿಂ ನಾಯಕರನ್ನು ಜಮೀರ್ ಬಳಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಏ.3 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಅಷ್ಟರೊಳಗೆ ನಾಮಪತ್ರ ವಾಪಸ್ ಪಡೆಯುವಂತೆ ಮಾಡುವುದು. ಇಲ್ಲದೇ ಇದ್ದಲ್ಲಿ ಕಣದಲ್ಲಿ ಉಳಿದರೂ ತಟಸ್ಥರಾಗುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಖುದ್ದು ಮಾಜಿ ಸಚಿವ ಜಮೀರ್ ಅಹಮ್ಮದ್ ಮೂಲಕ ಸೈಯದ್ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿವೆ.

    ಸ್ಥಳೀಯ ಮುಸ್ಲಿಂ ನಾಯಕರ ಜತೆ ಈ ಬಗ್ಗೆ ಜಮೀರ್ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅಭ್ಯರ್ಥಿ ಮನವೊಲಿಸಲು ಜಮೀರ್ ಕಸರತ್ತು ಕೂಡ ನಡೆಸಿದ್ದಾರೆ. ನಾಮಪತ್ರ ವಾಒಸ್ ಪಡೆಯದೇ ಹೋದರೆ ಉಪಚುನಾವಣೆಯಲ್ಲಿ ತಟಸ್ಥರಾಗುವಂತೆ ಮಾಡಿ ಕಾಂಗ್ರೆಸ್ ಗೆ ಮುಸ್ಲಿಂ ಮತಗಳನ್ನು ಸೆಳೆಯುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

    PHOTOS! 45ರ ಹರೆಯದಲ್ಲೂ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ “ಓ ನನ್ನ ನಲ್ಲೆ”!

    ರಾಜ್ಯ ಹೆದ್ದಾರಿ ಟೋಲ್ ದರ ಬದಲಾವಣೆ ಸದ್ಯಕ್ಕಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts