More

    ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರ:ಶಾಸಕ ಶರಣಗೌಡ ಹೇಳಿಕೆ ಸ್ಫೋಟ ಆಗುವಂತಹದ್ದಲ್ಲ: ಕುಮಾರಸ್ವಾಮಿ

    ಬೆಂಗಳೂರು: ನಮ್ಮನೆ ಹುಡುಗ, ಹಿಂದಿನ ಕೆಲ ಘಟನೆಗಳಿಂದ ಹೇಳಿಕೊಂಡಿದ್ದಾರೆ.ಸರಿಪಡಿಸೋಣ ಎಂದು ಬಿಜೆಪಿ ಜತೆ ಮೈತ್ರಿ ವಿಚಾರದಲ್ಲಿ ಶಾಸಕ ಶರಣಗೌಡ ಕಂದಕೂರು ಅಸಮಾಧಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಈ ಪ್ರತಿಕ್ರಿಯೆ ನೀಡಿದರು.

    ಶರಣಗೌಡ ಹೇಳಿಕೆ ಸ್ಫೋಟ ಆಗುವಂತದ್ದು ಏನಲ್ಲ.ಅವರ ಭಾವನೆ ಸರಿಪಡಿಸೋಣ. ನಮಗೆ ಹಿಂದೆ ಅನ್ಯಾಯ ಆಗಿದೆ ಎಂಬುದು ಮನಸ್ಸಿನಲ್ಲಿಟ್ಟುಕೊಂಡು ಹೇಳಿದ್ದಾರೆ.

    ಯಾರು ಯಾರ ಜತೆ ಕೂತು ಮಾತಾಡಿದ್ದಾರೆ..? ಅದು ದೊಡ್ಡವಿಷಯವಲ್ಲ, ನಮ್ಮ ಮಕ್ಕಳ ಅವರು ಸರಿಪಡಿಸುತ್ತೇವೆ ಎಂದರು.
    ಸುಮಲತಾ ಅಂಬರೀಶ್ ಅತಂತ್ರ ಸ್ಥಿತಿ ವಿಚಾರ ಕುರಿತ ಪ್ರಶ್ನೆಗೆ, ಸೀಟು ಹಂಚಿಕೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಇದೆಲ್ಲವೂ ಪ್ರಾಥಮಿಕ ಹಂತದ ಚರ್ಚೆ. ಅವರು ಅತಂತ್ರ ಆದರೂ, ಇವರು ಅತಂತ್ರ ಆದರೂ ಎಂದು ಊಹೆ ಮಾಡಿಕೊಂಡರೇ ಹೇಗೆ..? ಚರ್ಚೆಯೇ ಆಗಿಲ್ಲ ಎಂದು ಹೇಳಿದರು. ನನ್ನ ರಾಜ್ಯದ ಜನರ ಸಮಸ್ಯೆ ಚರ್ಚೆ ಆಗಬೇಕು. ರೈತರು ಸಂಕಷ್ಟದಲ್ಲಿದ್ದಾರೆ, ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ರೈತರ ಬಗ್ಗೆ ನನಗೆ ಚಿಂತನೆಯಿದೆ ಇದೆಲ್ಲವೂ ಚರ್ಚೆ ಆಗಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts