More

    ದುಡ್ಡು ಮಾಡಲು ಬಿಜೆಪಿಯೊಂದಿಗೆ ಜೆಡಿಎಸ್​ ಮೈತ್ರಿ

    ಕೋಲಾರ: ಬಿಜೆಪಿಯದ್ದು ಭ್ರಷ್ಟ ಹಾಗೂ ಕೋಮುವಾದಿ ಸರ್ಕಾರವಾಗಿದ್ದು, ವೋಟಿಗಾಗಿ ದೇಶ ಒಡೆಯಲು ಮುಂದಾಗಿದ್ದಾರೆ. ಜೆಡಿಎಸ್​ ಕೆಟ್ಟ ಮನಸ್ಥಿತಿ ಇರುವ ಪಕ್ಷ. ತನ್ನ ಅಸ್ತಿತ್ವಕ್ಕಾಗಿ ಹಾಗೂ ದುಡ್ಡು ಮಾಡಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅರೋಪಿಸಿದರು.

    ಕೋಲಾರ ಕ್ಷೇತ್ರದ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ನಂದಿನಿ ಪ್ಯಾಲೇಸ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ದೇಶದ ಭದ್ರತೆಗಾಗಿ, ಜನರ ನೆಮ್ಮದಿಗಾಗಿ ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕು. ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

    ಮಹಾನುಭವ ಸಂಸದ ಎಸ್​.ಮುನಿಸ್ವಾಮಿ ಐದು ವರ್ಷ ಜಾತಿ ರಾಜಕಾರಣ ಮಾಡಿದರು. ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ತಂದುಕೊಡದ ಸಂಸದರಿದ್ದರೆ ಅದು ಮುನಿಸ್ವಾಮಿ ಮಾತ್ರ. ಯಾವುದೇ ಸಭೆಗೆ ಹೋದರೂ ಅವರು ಜಗಳ ಮಾಡುತ್ತಿದ್ದರೂ ಮುನಿಸ್ವಾಮಿ ಇದ್ದ ಕಾರಣ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ 10 ವರ್ಷ ಹಿಂದೆ ಹೋಗಿದೆ. ಗೌತಮ್​ ಗೆದ್ದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.

    ಅಭ್ಯರ್ಥಿಗೆ ಕೆ.ಎಚ್​.ಮುನಿಯಪ್ಪ ಆಶೀರ್ವಾದ ಮಾಡಿದ್ದಾರೆ. ಅವರು ತಮ್ಮ ಕುಟುಂಬಕ್ಕೆ ಟಿಕೆಟ್​ ಕೇಳಿದ್ದರು. ಟಿಕೆಟ್​ ಸಿಗದ ಕಾರಣ ಈಗ ಗೌತಮ್​ ಬೆಂಬಲಿಸುತ್ತಿದ್ದಾರೆ ಎಂದರು.
    ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್​ ಅಹ್ಮದ್​ ಮಾತನಾಡಿ, ಕಾಂಗ್ರೆಸ್​ ಅಭ್ಯರ್ಥಿಯಾಗಿ ಕೆ.ವಿ.ಗೌತಮ್​ ಅವರು ಏ.4 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳಿಬೇಕಿದೆ ಎಂದರು.
    ಬಿಜೆಪಿ ಸೇರಿದರೆ ಕ್ಲೀನ್​ ಚಿಟ್​ ಕೊಡುತ್ತಾರೆ. ಇಲ್ಲದಿದ್ದರೆ ಐ.ಟಿ, ಇ.ಡಿ ಎಂದು ಬೆದರಿಕೆ ಹಾಕುತ್ತಾರೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್​ ಗೆಲ್ಲಲಿದೆ. ಕೋಲಾರದಲ್ಲಿ ಗೌತಮ್​ ಅವರನ್ನು ಗೆಲ್ಲಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆ.ಎಚ್​.ಮುನಿಯಪ್ಪ ಪ್ರಚಾರಕ್ಕೆ ಬರುತ್ತಾರೆ ಎಂದರು.
    ಶಾಸಕ ಕೊತ್ತೂರು ಮಂಜುನಾಥ್​ ಮಾತನಾಡಿ, ಬಿಜೆಪಿಯವರು ದೇವರನ್ನು ಏಕೆ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆಯೋ ಗೊತ್ತಿಲ್ಲ. ಜೈ ಶ್ರೀರಾಮ್​ ಎನ್ನುತ್ತಾರೆ. ಖಾತೆಗೆ 15 ಲ ರೂ. ಹಾಕುತ್ತೇವೆ ಎನ್ನುತ್ತಾರೆ. ಜತೆಗೆ ಇ.ಡಿ, ಐ.ಟಿಯನ್ನೂ ಹಿಂದೆ ಕಳುಹಿಸುತ್ತಾರೆ. ಇನ್ನು ಜೆಡಿಎಸ್​ ದಿವಾಳಿ ಆಗಿದೆ. ಅದಕ್ಕೆ ಅವರಿಗೆ ಬಿಜೆಪಿಯವರು ಮೂರುನಾಮ ಹಾಕಿದ್ದಾರೆ. ಹಾಸನ, ಮಂಡ್ಯ ಹಾಗೂ ಕೋಲಾರ ಸೀಟು ಬಿಟ್ಟುಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
    ಕಾಂಗ್ರೆಸ್​ ಅಭ್ಯರ್ಥಿ ಕೆ.ವಿ.ಗೌತಮ್​ ಮಾತನಾಡಿ, ಕೇಂದ್ರದಿಂದ ಯಾವುದಾದರೂ ಯೋಜನೆ ಸಿಕ್ಕಿದೆಯೇ. ಬಿಜೆಪಿ ಶ್ರೀಮಂತರ ಪ. ಕಾಂಗ್ರೆಸ್​ ಬಡವರ ಪ. ನಮ್ಮ ಗ್ಯಾರಂಟಿಗಳೇ ಸಾ. ಈ ಯೋಜನೆಗಳಿಂದ ಬಡವರಿಗೆ ಸಹಾಯವಾಗಲಿದೆ. ನಾನು ಗೆದ್ದರೆ ಪ್ರಜಾಪ್ರಭುತ್ವ ಗೆಲ್ಲಲಿದೆ ಎಂದರು.
    ಕಾಂಗ್ರೆಸ್​ ಜಿಲ್ಲಾಧ್ಯ ಸಿ.ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​, ಕೆ.ಜಯದೇವ್​, ಮುಖಂಡರಾದ ಆದಿನಾರಾಯಣ್​ ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts