More

    ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ; ಕಣ್ಮನ ಸೆಳೆಯುತ್ತಿದೆ ಮದಲಿಂಗನ ಕಣಿವೆ

    ಚಿಕ್ಕನಾಯಕನಹಳ್ಳಿ : ತಾಲೂಕಿನ ಮದಲಿಂಗನ ಕಣಿವೆ ಪ್ರವಾಸಿ ತಾಣವಾಗಿ ಕಣ್ಮನ ಸೆಳೆಯುತ್ತಿದೆ, ಜಿಲ್ಲೆಯಲ್ಲಿರುವ ಇಂತಹ ಪ್ರವಾಸಿತಾಣಗಳನ್ನು ಗುರುತಿಸಿ ಅವುಗಳನ್ನೆಲ್ಲಾ ಪ್ರವಾಸೋದ್ಯಮ ವ್ಯಾಪ್ತಿಗೆ ತರಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ವಾಧುಸ್ವಾಮಿ ಭರವಸೆ ನೀಡಿದರು.

    ಚಿಕ್ಕನಾಯಕನಹಳ್ಳಿ ತಾಲೂಕು ಮದಲಿಂಗನ ಕಣಿವೆ ತಿ.ನಂ.ಶ್ರೀ.ಸಸ್ಯಕ್ಷೇತ್ರದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಪ್ರವಾಸೋದ್ಯಮ ದಿನ’ದ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದ ಅವರು, ಸಸ್ಯ ಕ್ಷೇತ್ರಕ್ಕೆ ಸಾಹಿತಿಯ ಹೆಸರಿಟ್ಟಿರುವುದು ಒಂದು ವಿಶೇಷ ಎನಿಸಿದೆ, ಮದಲಿಂಗನ ಕಣಿವೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಿದೆ ಎಂದರು.

    ಮದಲಿಂಗನ ಕಣಿವೆಯಂತಹ ನಿಸರ್ಗದತ್ತ ಪ್ರವಾಸಿ ತಾಣ ಪರಿಚಯಿಸುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆ ಮಾಡಬೇಕಿತ್ತು. ಆದರೆ, ಈ ಸುಂದರ ಪ್ರದೇಶಗಳು ಗಣಿಗಾರಿಕೆಗೆ ಸ್ವರ್ಗವಾದವೇ ಹೊರತು ಪ್ರವಾಸೋದ್ಯಮಕ್ಕೆ ಸ್ವರ್ಗವಾಗಲಿಲ್ಲ, ಭವಿಷ್ಯದಲ್ಲಿಯಾದರೂ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.

    ಹಸಿರೇ ತುಂಬಿದ್ದ ಪ್ರದೇಶದಲ್ಲಿ ಗಣಿ ನಿಕ್ಷೇಪ ತೆಗೆದ ಪರಿಣಾಮ ಬೆಟ್ಟಗುಡ್ಡಗಳು ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿವೆ, ಹಸಿರು ಸಿರಿಗೆ ಕೆಂಪು ಬಣ್ಣ ಮಿಶ್ರಣವಾಗಿ ಪ್ರಕೃತಿಯ ರಸದೌತಣದ ಸವಿಯೇ ಇಲ್ಲದಂತಾಗಿ, ಚಿಕ್ಕನಾಯಕನಹಳ್ಳಿಯವರೆಗೂ ಸುವಾಸನೆ ತರುತ್ತಿದ್ದ ಮದಲಿಂಗನ ಕಣಿವೆ ಪ್ರದೇಶಗಳ ಶ್ರೇಷ್ಟ ಜಾತಿಯ ಜಾಲಗಿರಿ ಹೂ ಕೂಡ ಕಣ್ಮರೆಯಾಗಿದೆ ಎಂದು ಬೇಸರಿಸಿದರು.
    ವಾಸ್ತಿ ತಮ್ಮ ಕೃತಿಯಲ್ಲಿ ಮದಲಿಂಗನ ಕಣಿವೆಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ, ಶಾಲೆಗಳಲ್ಲಿ ಮದಲಿಂಗನಕಣಿವೆ ಬಗ್ಗೆ ಪಠ್ಯವಿತ್ತು. ಅದನ್ನು ನಾವೆಲ್ಲಾ ಓದಿದ್ದೇವೆ. ವಾಸ್ತಿವೆಂಕಟೇಶ್ ಅಯ್ಯಂಗಾರ್ ಅವರು ಕಣಿವೆಯ ಸೌಂದರ್ಯವನ್ನು ಕಣಿವೆಯ ಸೌಂದರ್ಯಕ್ಕಿಂತಲೂ ರಮಣೀಯವಾಗಿ ಕೃತಿಯಲ್ಲಿ ವರ್ಣಿಸಿದ್ದಾರೆ ಎಂದರು.

    ಜಿಲ್ಲೆಯ ರಮಣೀಯ ತಾಣಗಳನ್ನು ಪರಿಚಯಿಸಿ ಪರಿಸರ ಪ್ರೇಮಿಗಳ ಸಂಚಾರ ಮತ್ತು ಅಧ್ಯಯನಕ್ಕೆ ಅನುವು ವಾಡಿಕೊಡಬೇಕು, ತುಮಕೂರು ಸುತ್ತಲಿನ ಪ್ರದೇಶಗಳ ಜಿಲ್ಲೆಯ ಎಲ್ಲಾ ಭಾಗಗಳಿಗೂ ಪ್ರಾಶಸ್ತ್ಯ ನೀಡಿ ಪ್ರವಾಸಿತಾಣಗಳ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ತರಲು ಆದ್ಯತೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.
    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ವಾತನಾಡಿ, ಯುವಪೀಳಿಗೆಯಲ್ಲಿ ದೈಹಿಕ ಚಟುವಟಿಕೆಗಳೇ ಕಡಿಮೆಯಾಗಿದ್ದು, ಆಧುನಿಕತೆಯ ಸೋಗಿನಲ್ಲಿ ಜೀವನ ಶೈಲಿಯೂ ಬದಲಾಗಿದೆ. ಪ್ರಕೃತಿದತ್ತವಾಗಿ ಕಾಣಸಿಗುವ ಎಲ್ಲ ಬಗೆಯ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುವಂತಹ ಹೃದಯ ವೈಶಾಲ್ಯತೆ ಬೆೆಳೆಸಿಕೊಳ್ಳಬೇಕು ಎಂದರು.

    ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತಿಪಟೂರು ಉಪವಿಭಾಗಾಧಿಕಾರಿ ದಿಗ್ವಿಜಯ್‌ಸಿಂಗ್, ಡಿವೈಎಸ್‌ಪಿ ಚಂದನ್, ತಹಸೀಲ್ದಾರ್ ತೇಜಸ್ವಿನಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಗೌರಿ ವಿ.ಭಟ್ಟ, ಹೊನ್ನೆಭಾಗಿ ಗ್ರಾಪಂ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯೆ ಭಾರತಿ ಇದ್ದರು.

    ಮದಲಿಂಗ ಕಣಿವೆ ಏರಿದ ಡಿಸಿ ವೈ.ಎಸ್.ಪಾಟೀಲ : ಪ್ರವಾಸೋದ್ಯಮದ ದಿನದ ಅಂಗವಾಗಿ ಮದಲಿಂಗನಕಣಿವೆಯಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಚಾರಣದಲ್ಲಿ ಸ್ವತಃ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಭಾಗವಹಿಸುವ ಮೂಲಕ ಗಮನ ಸೆಳೆದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುವಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೇರಿ ವಿವಿಧ ಅಧಿಕಾರಿಗಳೂ ಸಾರ್ವಜನಿಕರ ಜತೆ ಮದಲಿಂಗನ ಕಣಿವೆಯ ರಮಣೀಯ ಸೌಂದರ್ಯ ಸವಿದರು. ಸೋಮವಾರ ಬೆಳಗ್ಗೆ 8.30ಕ್ಕೆ ಆರಂಭವಾಗಿದ್ದ ಟ್ರೆಕ್ಕಿಂಗ್‌ನಲ್ಲಿ ವೈ.ಎಸ್.ಪಾಟೀಲ ಯುವಕರಿಗೆ ಸ್ಫೂರ್ತಿಯಾಗುವಂತೆ ಮದಲಿಂಗನ ಕಣಿವೆ ಏರಿ ಬೆಟ್ಟದ ತುದಿ ತಲುಪಿ ಪ್ರಕೃತಿಯ ಸೊಬಗು ಸವಿದರು.

    ಮದಲಿಂಗನ ಕಣಿವೆ ಸಮೀಪದಲ್ಲಿಯೇ ತೀ.ನಂ.ಶ್ರೀಕಂಠಯ್ಯ ಅವರ ಊರಾದ ತೀರ್ಥಪುರ ಇದೆ, ಮದಲಿಂಗನ ಕಣಿವೆಯ ಸಸ್ಯೋದ್ಯಾನಕ್ಕೆ ತೀನಂಶ್ರೀ ಹೆಸರನ್ನು ಇಡಲಾಗಿದೆ. ಬಹುದೊಡ್ಡ ವಿದ್ವಾಂಸ ತೀನಂಶ್ರೀ ಹೆಸರನ್ನು ಜನರು ಈ ಭಾಗದಿಂದ ಸಾಗುವಾಗ ಸ್ಮರಣೆ ವಾಡಲಿ ಎಂಬ ಉದ್ದೇಶದಿಂದ ಸಸ್ಯಕಾಶಿಗೆ ಅವರ ಹೆಸರಿಡಲಾಗಿದೆ.
    ಜೆ.ಸಿ.ಮಾಧುಸ್ವಾಮಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts