More

    ಕೃಷಿ ಇಲಾಖೆ ಜತೆ ರೇಷ್ಮೆ ವಿಲೀನಕ್ಕೆ ಚಿಂತನೆ ; ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ; ಅನಗತ್ಯ ಖರ್ಚಿಗೆ ಕಡಿವಾಣ ಹಾಕುವ ಉದ್ದೇಶ

    ತುಮಕೂರು : ಇಲಾಖೆಗಳ ವಿಲೀನ ಪ್ರಕ್ರಿಯೆಯಲ್ಲಿ ರೇಷ್ಮೆ ಕೃಷಿಯನ್ನು ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಜಿಲ್ಲಾಡಳಿತದಿಂದ 75ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರೇಷ್ಮೆ ಬೆಳೆಗಾರರ ಕಾರ್ಯಾಗಾರ ಮತ್ತು ಸವಲತ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೇಷ್ಮೆ ಕೂಡ ಕೃಷಿ ಇಲಾಖೆ ವ್ಯಾಪ್ತಿಯ ಮೂಲ ಅಂಶವಾಗಿದೆ, ರೇಷ್ಮೆ ಕೃಷಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ರೇಷ್ಮೆ ಕೃಷಿಯನ್ನು ಪ್ರತ್ಯೇಕವಾಗಿ ಭಾಗ ಮಾಡಿಕೊಂಡಿದ್ದು, ಅನಗತ್ಯವಾದ ಖರ್ಚು ಕಡಿಮೆ ವಾಡುವ ಹಿತದೃಷ್ಟಿಯಿಂದ ರೇಷ್ಮೆ ಕೃಷಿಯನ್ನೂ ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚು ಚರ್ಚೆ ನಡೆಯಲಿದೆ ಎಂದರು.

    ರೇಷ್ಮೆ ಬೆಳೆಯುವುದು ಮೊದಲಿನಷ್ಟು ಜಟಿಲವಾಗಿಲ್ಲ, ವೈಜ್ಞಾನಿಕ ಸಂಶೋಧನೆಯಿಂದ ಬಹಳ ಸರಳೀಕರಣ ಮಾಡಲಾಗಿದ್ದು, ರೈತರು ರೇಷ್ಮೆ ಕೃಷಿ ಅವಲಂಬಿಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದರು.

    ರೇಷ್ಮೆ ಕೃಷಿ ಈಗ ಯಾರು ಬೇಕಾದರೂ ಬೆಳೆಯಬಹುದಾದ ಲಾಭದಾಯಕ ಉದ್ಯಮವಾಗಿದೆ. ರೇಷ್ಮೆ ಬೆಳೆಗಾರರಿಗೆ ಆಧುನಿಕ ತಂತ್ರಜ್ಞಾನ ಸುಲಭವಾಗಿ ಸಿಗುತ್ತಿದ್ದು, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರೊಂದಿಗೆ ರೇಷ್ಮೆ ಕೃಷಿಯಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

    ಜಿಲ್ಲೆಯಲ್ಲಿ ವೈ.ಕೆ.ರಾಮಯ್ಯ ಅವರು ರೇಷ್ಮೆ ಬೆಳೆಗೆ ನೀಡಿರುವ ಕೊಡುಗೆಯನ್ನು ನಾವು ಸ್ಮರಿಸಬೇಕು. ಜಿಲ್ಲೆಯಲ್ಲಿ ಜಪಾನ್ ಯೋಜನೆಯೊಂದಿಗೆ ರೇಷ್ಮೆ ಬೆಳೆಗೆ ಒತ್ತು ಕೊಟ್ಟಿದ್ದೆವು. ಮೈಸೂರು ತಳಿಗೆ ಕುಣಿಗಲ್ ತಾಲೂಕು ತವರು. ಆದರೆ, ಅದನ್ನು ಈಗ ರಾಮನಗರ ಜಿಲ್ಲೆಗೆ ಕೊಟ್ಟಿದ್ದೇವೆ, ಜಿಲ್ಲೆಯ ತಳಿಯನ್ನು ಉಳಿಸಬೇಕಿದೆ ಎಂದರು.

    ರೇಷ್ಮೆ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಆಗದೇ ಇರುವುದರಿಂದ ರೈತರು ರೇಷ್ಮೆಯಿಂದ ಹಿಂದೆ ಸರಿದರು, ರೇಷ್ಮೆ ಬೆಳೆಗೆ ಮಡಿವಂತಿಕೆ ತಂದಿದ್ದರಿಂದ ರೈತರು ಹೊರಗುಳಿದರು. ಆದರೆ, ರೇಷ್ಮೆ ವಾರುಕಟ್ಟೆ ಮೇಲೆ ಹಿಡಿತ ಸಾಧ್ಯವಾಗುತ್ತಿದೆ. ಶುಚಿತ್ವ ಕಾಪಾಡಬೇಕೆಂಬ ನಿಟ್ಟಿನಲ್ಲಿ ರೇಷ್ಮೆ ಬೆಳೆಗೆ ಮಡಿವಂತಿಕೆ ತರಲಾಗಿತ್ತು ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ ಎಂದರು.

    ವಿಜ್ಞಾನಿಗಳಾದ ಡಾ.ತಿವ್ಮಾರೆಡ್ಡಿ, ವಿ.ಜಿ.ಮರಿಭಾಶೆಟ್ಟಿ ಹಾಗೂ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ವೈ.ಟಿ.ತಿಮ್ಮಯ್ಯ ಕಾರ್ಯಾಗಾರ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಇದ್ದರು.

    ್ಯಾಷನ್‌ನಿಂದ ಟೊಳ್ಳಾದ ಬದುಕು : ್ಯಾಷನ್‌ನಿಂದ ಬದುಕು ಟೊಳ್ಳಾಗಿದೆ, ಕೃಷಿ ಕಾಯಕದ ಮೇಲಿನ ಆಸಕ್ತಿ ಕಡಿಮೆಯಾಗಿದೆ. ಫ್ಯಾಷನ್ ಬದುಕಿನಿಂದ ಹೊರಬಂದು, ಯಾರಿಗೂ ಅಡಿಯಾಳಾಗದೆ ಸ್ವಾಭಿವಾನದಿಂದ ಬದುಕಬೇಕು. ಯಾವುದೇ ಕಾಯಕವೂ ಕೆಳಮಟ್ಟದ್ದು ಎಂಬ ಭಾವನೆ ತಾಳಬಾರದು. ಶ್ರಮದಲ್ಲಿ ಬದುಕಬೇಕು ಎಂದು ತಿಳಿಸಿದರಲ್ಲದೆ ಕೃಷಿಯನ್ನೇ ಲಾಭದಾಯಕವೆಂದು ಕೃಷಿ ಕಾಯಕಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಕೃಷಿ ಜತೆಗೆ ಕೃಷಿಗೆ ಪೂರಕವಾದ ಉಪಕಸುಬು ಅಳವಡಿಸಿಕೊಳ್ಳಬೇಕು. ಉಪಕಸುಬಿನಲ್ಲಿ ಬಂದ ಆದಾಯ ದಿನನಿತ್ಯದ ಬದುಕಿಗೆ ಆಸರೆಯಾಗಲಿದೆ ಎಂದು ಹೇಳಿದರು. ಸ್ವಾಭಿಮಾನದ ಬದುಕಿನ ಹೆಜ್ಜೆಗಿಂತ ಮತ್ತೊಂದಿಲ್ಲ. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಹೊಸ ಆವಿಷ್ಕಾರಗಳನ್ನು ರೂಢಿಗತ ವಾಡಿಕೊಳ್ಳಬೇಕು. ಕಾಲಕ್ಕೆ ಅನುಗುಣವಾಗಿ ಉತ್ಪಾದನೆ ವಾಡುವುದನ್ನು ಕಲಿತುಕೊಳ್ಳಬೇಕು. ಕೃಷಿ ಬದುಕು ಭಾರ, ಸಾಲವಾಗಬಾರದು. ಉಪಕಸುಬನ್ನು ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು.

    ಮೂವರಿಗೆ ಪ್ರಶಸ್ತಿ ಪ್ರದಾನ : ಪ್ರಗತಿಪರ ರೈತರಾದ ಅಜ್ಜಪ್ಪನಹಳ್ಳಿ ವೀರಭದ್ರಯ್ಯ ಅವರಿಗೆ ರಾಜ್ಯಮಟ್ಟದ ಮೊದಲ ರಾಜ್ಯ ಪ್ರಶಸ್ತಿ ಪ್ರಶಂಸನಾ ಪತ್ರ ಹಾಗೂ ಜಿಲ್ಲಾಮಟ್ಟದ ಮೊದಲ ಪ್ರಶಸ್ತಿಯನ್ನು ಅಮ್ಮನಗಳ್ಳಿ ನಿರಂಜನ್, ಎರಡನೇ ಪ್ರಶಸ್ತಿಯನ್ನು ಹೊನ್ನಗೊಂಡನಹಳ್ಳಿ ಶಿವಕುವಾರ್ ಹಾಗೂ ಹುಳ್ಳೆನಹಳ್ಳಿಯ ಚಿಕ್ಕಗಂಗಮ್ಮ ಅವರಿಗೆ ಮೂರನೇ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ಅವಲಂಬಿಸಲು ಆದ್ಯತೆ ನೀಡಲಾಗಿದೆ. ರೇಷ್ಮೆ ಬೆಳೆ ನಾಟಿಯಿಂದ ಹಿಡಿದು ಮುಂದಿನ ಮೂರು ವರ್ಷಗಳ ಕಾಲ ನಿರ್ವಹಣೆ ವಾಡಲು ನರೇಗಾ ಯೋಜನೆಯಡಿ ಸಹಾಯ ಕಲ್ಪಿಸಲಾಗುವುದು.
    ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts