More

    ಶ್ರೀಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ

    ಚಿಕ್ಕಮಗಳೂರು: ಸಂತ ಸೇವಾಲಾಲರು ಭಾರತೀಯ ಸಾಮಾಜಿಕ ಧಾರ್ಮಿಕ ಸುಧಾಕರು ಮಾತ್ರರಲ್ಲದೆ ಅತ್ಯುತ್ತಮ ಸಂಗೀತಗಾರ, ಧೈರ್ಯಶಾಲಿ ಯೋಧ, ಮೂಢನಂಬಿಕೆಯ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಾಗಿದ್ದರು ಎಂದು ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಭಿಪ್ರಾಯಪಟ್ಟರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಬಂಜಾರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಸಹಾತುಶಾಹಿ ಬ್ರಿಟೀಷ್ ಆಡಳಿತಗಾರರೇ ಸೇವಾಲಾಲರ ಕಥೆಗಳನ್ನು ಸಾಕಷ್ಟು ಕಡೆ ಉಲ್ಲೇಖಿಸಿದ್ದಾರೆ. ಇದು ಸೇವಾಲಾಲರ ಮೌಲ್ಯಾದರ್ಶಗಳು ಎಷ್ಟಿದ್ದವು ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
    ಅಸಮಾನತೆಯ ವಿರುದ್ಧ ಹೋರಾಡಿದ್ದ ಸೇವಾಲಾಲರು ಬಂಜಾರ ಸಮುದಾಯದ ಆಧ್ಯಾತ್ಮಿಕ ಗುರುವಾಗಿ ಹೊರಹೊಮ್ಮಿದ್ದರು. ಇಂಥ ಮಹಾನ್ ದಾರ್ಶನಿಕರನ್ನು ನಾವು ಕೇವಲ ಒಂದೇ ಸಮಾಜಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಎಲ್ಲ ದಾರ್ಶನಿಕರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆನೀಡಿದರು.
    ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾನ ನೀಡಿದ ಫ್ರೌಡಶಾಲೆ ಶಿಕ್ಷಕಿ ರೂಪಾನಾಯ್ಕ್ ಮಾತನಾಡಿ, ಬಂಜಾರ ಸಮಾಜ ದುಶ್ಚಟಗಳಿಗೆ ಬಲಿಯಾಗುತ್ತಿದ್ದ ಸಂದರ್ಭದಲ್ಲಿ ಇಡೀ ಸಮಾಜವನ್ನೇ ಬಡಿದೆಬ್ಬಿಸಿ ಸರಿದಾರಿಗೆ ತರುವ ಕೆಲಸ ಮಾಡಿದ್ದರು. ಸಮಾಜದ ಪ್ರತಿಯೊಬ್ಬರೂ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿದ್ದಲ್ಲದೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದರು. ಜೊತೆಗೆ ಮೌಢ್ಯಕ್ಕೆ ಸಿಲುಕದೆ ಪ್ರಕೃತಿಯನ್ನು ದೇವರಂತೆ ಪೂಜಿಸಬೇಕು ಎಂಬ ವಿಶ್ವಮಾನವತೆಯ ಸಂದೇಶ ಇಂದಿಗೂ ಮಾದರಿಯಾಗಿದೆ ಎಂದು ಹೇಳಿದರು.
    ಬಂಜಾರ ಸಮಾಜ ಆರಂಭದಿAದಲೂ ತನ್ನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಾಗೂ ವೇಷಭೂಷಣಗಳಿಂದ ಗುರುತಿಸಿಕೊಂಡು ಬಂದಿದೆ. ಇಂದಿಗೂ ಬಂಜಾರ ಸಮಾಜ ನಮ್ಮ ಪೂರ್ವಜರ ಎಲ್ಲ ಆಚರಣೆಗಳನ್ನು ಮುಂದುವರಿಸಿಕೊAಡು ಹೋಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
    ಕಾರ್ಯಕ್ರಮ ಉದ್ಘಾಟಿಸಿದ ಗ್ರೇಡ್ ೨ ತಹಸೀಲ್ದಾರ್ ರಾಮ್ ರಾವ್ ದೇಸಾಯಿ ಮಾತನಾಡಿ, ಸಮಾಜ ಸುಧಾರಕ ಸಂತ ಸೇವಾಲಲರು ಸಮಾಜ ಒಳಿತಿಗಾಗಿ ತಮ್ಮದೇ ಕೊಡುಗೆ ನೀಡಿದ್ದಾರೆ. ಮೂಢನಂಬಿಕೆ, ಅಜ್ಞಾನ ದೂರವಾಗಿಸಿ, ದುರ್ಬಲರ ರಕ್ಷಣೆ ಮಾಡಿದ್ದಾರೆ ಎಂದರು.
    ಕಾರ್ಯಕ್ರಮದಲ್ಲಿ ಎಸಿ ಕಚೇರಿ ಗ್ರೇಡ್೨ ತಹಸೀಲ್ದಾರ್ ಶಾರದಾ, ತಾಲೂಕು ಬಂಜಾರ ಸಂಘದ ಅಧ್ಯಕ್ಷ ಗಂಗಾಧರ ನಾಯ್ಕ, ಗೌರವಾಧ್ಯಕ್ಷ ರಾಮಾನಾಯ್ಕ, ನಗರಸಭೆ ಸದಸ್ಯೆ ಲಲಿತಾ ರವಿ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ರಮೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts