More

    ದಾಖಲೆಯ 39 ಚಿತ್ರಗಳಲ್ಲಿ ಡಾ. ರಾಜ್​ಗೆ ನಾಯಕಿಯಾಗಿದ್ದರು ಜಯಂತಿ!

    ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಆನ್​ಸ್ಕ್ರೀನ್​ ಜೋಡಿಗಳಲ್ಲಿ ಡಾ. ರಾಜಕುಮಾರ್​ ಮತ್ತು ಜಯಂತಿ ಅವರ ಜೋಡಿ ಸಹ ಒಂದು. ಈ ಜೋಡಿಯು ದಾಖಲೆಯ 39 ಚಿತ್ರಗಳಲ್ಲಿ ಜತೆಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದೆ. ಡಾ. ರಾಜಕುಮಾರ್ ಮತ್ತು ಜಯಂತಿ ಅವರನ್ನು ಬಿಟ್ಟರೆ, ಬೇರ್ಯಾವ ನಟ-ನಟಿಯು ಜೋಡಿಯಾಗಿ ಇಷ್ಟೊಂದು ಸಂಖ್ಯೆಯಲ್ಲಿ ನಟಿಸಿದ ಉದಾಹರಣೆ ಇಲ್ಲ.

    ಇದನ್ನೂ ಓದಿ: ದುಂಡಗೆ, ದಪ್ಪಗಿದ್ದ ಕಮಲಾಗೆ ಸಹಪಾಠಿಗಳು ಕೊಟ್ಟ ಕೀಟಲೆ ಅಷ್ಟಿಷ್ಟಲ್ಲ! ಅದೇ ಬಾಲೆ ಜಯಂತಿ ಆದ ಇಂಟ್ರೆಸ್ಟಿಂಗ್​ ಸ್ಟೋರಿ ಇದು

    1964ರಲ್ಲಿ ಬಿಡುಗಡೆಯಾದ ‘ಚಂದವಳ್ಳಿಯ ತೋಟ’ ಚಿತ್ರದಿಂದ ಪ್ರಾರಂಭವಾಗಿ, ನಂತರದ ವರ್ಷಗಳಲ್ಲಿ ‘ಮುರಿಯದ ಮನೆ’, ‘ಲಗ್ನಪತ್ರಿಕೆ’, ‘ಮಂತ್ರಾಲಯ ಮಹಾತ್ಮೆ’, ‘ಜೇಡರ ಬಲೆ’, ‘ಶ್ರೀಕೃಷ್ಣದೇವರಾಯ’, ‘ಕಸ್ತೂರಿ ನಿವಾಸ’, ‘ಚಕ್ರತೀರ್ಥ’, ‘ಕುಲಗೌರವ’, ‘ವಾತ್ಸಲ್ಯ’, ‘ಬೆಟ್ಟದ ಹುಲಿ’ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದರು.

    ಇದನ್ನೂ ಓದಿ: ಜಯಂತಿ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ

    ಇಬ್ಬರೂ ಕಡೆಯದಾಗಿ ಒಟ್ಟಿಗೆ ನಟಿಸಿದ ಚಿತ್ರವೆಂದರೆ, ಅದು ‘ಬಹದ್ದೂರ್ ಗಂಡು’. ಆ ನಂತರ ಡಾ. ರಾಜಕುಮಾರ್ ಅಭಿನಯದ ಚಿತ್ರದಲ್ಲಿ ಜಯಂತಿ ಅವರು ನಟಿಸಲಿಲ್ಲ. ವಿಶೇಷವೆಂದರೆ, ಹಲವು ವರ್ಷಗಳ ನಂತರ ಅವರಿಗೆ ರಾಜ್ಯ ಸರ್ಕಾರವು ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

    ‘ಅಭಿನಯ ಶಾರದೆ’ ನಿಧನಕ್ಕೆ ಸ್ಯಾಂಡಲ್​ವುಡ್​ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts