More

    2020ರಲ್ಲಿ ವಿರಾಟ್ ಕೊಹ್ಲಿಗಿಂತ ಬುಮ್ರಾಗೆ ಜಾಸ್ತಿ ಸಂಬಳ!

    ಬೆಂಗಳೂರು: ಮೂರು ಕ್ರಿಕೆಟ್ ಪ್ರಕಾರದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಎನಿಸಿರುವ ಜಸ್‌ಪ್ರೀತ್ ಬುಮ್ರಾ 2020ರ ಕ್ಯಾಲೆಂಡರ್ ವರ್ಷದಲ್ಲಿ ಬಿಸಿಸಿಐನಿಂದ ಗರಿಷ್ಠ ಸಂಬಳ ಪಡೆದ ಕ್ರಿಕೆಟಿಗ ಎನಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನೂ ಬುಮ್ರಾ ಮೀರಿಸಿರುವುದು ವಿಶೇಷವಾಗಿದೆ.

    ಜಾಹೀರಾತುಗಳಿಂದ ಗಳಿಸಿದ ಸಂಭಾವನೆಗಳನ್ನು ಲೆಕ್ಕ ಹಾಕಿದರೆ ಒಟ್ಟು ಆದಾಯದಲ್ಲಿ ವಿರಾಟ್ ಕೊಹ್ಲಿ ಅವರೇ ಶ್ರೀಮಂತರಾಗಿದ್ದಾರೆ. ಆದರೆ ಬರೀ ಕ್ರಿಕೆಟ್ ಆಟಕ್ಕಾಗಿ ಬಿಸಿಸಿಐನಿಂದ ಗಳಿಸಿದ ಸಂಭಾವನೆಯ ವಿಚಾರದಲ್ಲಿ ಕೊಹ್ಲಿಗಿಂತ ಬುಮ್ರಾ ಹೆಚ್ಚು ಸಂಪಾದನೆ ಮಾಡಿದ್ದಾರೆ.

    ಇದನ್ನೂ ಓದಿ: ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ಬುಮ್ರಾ 2020ರಲ್ಲಿ 4 ಟೆಸ್ಟ್, 9 ಏಕದಿನ ಮತ್ತು 8 ಟಿ20 ಪಂದ್ಯ ಆಡಿದ್ದು, ಒಟ್ಟು 1.38 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಪಿತೃತ್ವ ರಜೆಯಿಂದಾಗಿ ಆಸೀಸ್ ಪ್ರವಾಸದ ಟೆಸ್ಟ್ ತಪ್ಪಿಸಿಕೊಂಡಿರುವ ಕಾರಣದಿಂದಾಗಿ ಕೊಹ್ಲಿ ಹಿನ್ನಡೆ ಎದುರಿಸಿದ್ದು, 2020ರಲ್ಲಿ 3 ಟೆಸ್ಟ್, 9 ಏಕದಿನ ಮತ್ತು 10 ಟಿ20 ಪಂದ್ಯ ಆಡಿ ಒಟ್ಟು 1.29 ಕೋಟಿ ರೂ. ಸಂಭಾವನೆ ಗಳಿಸಿದ್ದಾರೆ.

    ಬಿಸಿಸಿಐ ಕ್ರಿಕೆಟಿಗರಿಗೆ ಪ್ರತಿ ಟೆಸ್ಟ್‌ಗೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20ಗೆ 3 ಲಕ್ಷ ರೂ. ಸಂಭಾವನೆ ನೀಡುತ್ತದೆ. ಈ ಆಧಾರದಲ್ಲಿ ಕ್ರಿಕೆಟಿಗರ ಸಂಪಾದನೆ ಲೆಕ್ಕಹಾಕಲಾಗಿದೆ. ಇನ್ನು ಐಸಿಸಿಯ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಕೊಹ್ಲಿ-ಬುಮ್ರಾ ಇಬ್ಬರೂ ಎ ಪ್ಲಸ್ ಶ್ರೇಣಿಯಲ್ಲಿದ್ದು, ತಲಾ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

    ಇದನ್ನೂ ಓದಿ: ಐಸಿಸಿಯಿಂದ ಟಿಕ್‌ಟಾಕ್ ಪ್ರಶಸ್ತಿ ಗೆದ್ದ ವಾರ್ನರ್! ಚಾಹಲ್‌ಗೂ ಪಾಲು ಕೊಡ್ತಾರಂತೆ!

    ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 2020ರಲ್ಲಿ 2 ಟೆಸ್ಟ್, 9 ಏಕದಿನ ಮತ್ತು 4 ಟಿ20 ಪಂದ್ಯ ಆಡಿ ಒಟ್ಟು 96 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಎ ಶ್ರೇಣಿಯಲ್ಲಿರುವ ಜಡೇಜಾ, 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

    ರೋಹಿತ್ ಶರ್ಮ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯ ಎ ಪ್ಲಸ್ ಶ್ರೇಣಿಯಲ್ಲಿರುವ ಮತ್ತೋರ್ವ ಆಟಗಾರರಾಗಿದ್ದಾರೆ. ಆದರೆ ಗಾಯದಿಂದಾಗಿ ಅವರು ಈ ವರ್ಷ ಹೆಚ್ಚಿನ ಪಂದ್ಯ ಆಡಿಲ್ಲ. 3 ಏಕದಿನ ಮತ್ತು 4 ಟಿ20 ಪಂದ್ಯಗಳನ್ನಷ್ಟೇ ಆಡಿರುವ ರೋಹಿತ್, 7 ಕೋಟಿ ರೂ. ವಾರ್ಷಿಕ ಗುತ್ತಿಗೆ ಜತೆಗೆ 30 ಲಕ್ಷ ರೂ. ಪಂದ್ಯ ಸಂಭಾವನೆಯನ್ನಷ್ಟೇ ಪಡೆದಿದ್ದಾರೆ.

    ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ಕೆಎಲ್ ರಾಹುಲ್‌ಗೆ 5ನೇ ಸ್ಥಾನ
    2020ರಲ್ಲಿ ಬಿಸಿಸಿಐನಿಂದ ಗರಿಷ್ಠ ಸಂಭಾವನೆ ಪಡೆದ ಕ್ರಿಕೆಟಿಗರಲ್ಲಿ ಕನ್ನಡಿಗ ಕೆಎಲ್ ರಾಹುಲ್ 5ನೇ ಸ್ಥಾನದಲ್ಲಿದ್ದಾರೆ. ಯಾವುದೇ ಟೆಸ್ಟ್ ಆಡದಿದ್ದರೂ, ಸೀಮಿತ ಓವರ್ ತಂಡದ ಉಪನಾಯಕರಾಗಿ ಬಡ್ತಿ ಪಡೆದು 9 ಏಕದಿನ ಮತ್ತು 11 ಟಿ20 ಪಂದ್ಯ ಆಡಿರುವ ರಾಹುಲ್, ಒಟ್ಟು 87 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ಜತೆಗೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಎ ಶ್ರೇಣಿಯಲ್ಲಿರುವ ಅವರು 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. 3 ಟೆಸ್ಟ್, 6 ಏಕದಿನ, 4 ಟಿ20 ಪಂದ್ಯ ಆಡಿರುವ ವೇಗಿ ಮೊಹಮದ್ ಶಮಿ ಒಟ್ಟು 93 ಲಕ್ಷ ರೂ. ಸಂಭಾವನೆ ಪಡೆದು 4ನೇ ಸ್ಥಾನದಲ್ಲಿದ್ದಾರೆ. ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಅವರೂ ಎ ಶ್ರೇಣಿಯಲ್ಲಿದ್ದಾರೆ. 3 ಕೋಟಿ ರೂ. ಸಂಭಾವನೆಯ ಬಿ ಶ್ರೇಣಿಯಲ್ಲಿರುವ ಮಯಾಂಕ್ ಅಗರ್ವಾಲ್, 4 ಟೆಸ್ಟ್, 5 ಏಕದಿನ ಆಡಿ 90 ಲಕ್ಷ ರೂ. ಗಳಿಸಿದ್ದಾರೆ.

    ಟಾಪ್ 5 ಸಂಭಾವನೆ:
    1. ಜಸ್‌ಪ್ರೀತ್ ಬುಮ್ರಾ (4 ಟೆಸ್ಟ್, 9 ಏಕದಿನ, 8 ಟಿ20): 1.38+7 ಕೋಟಿ ರೂ.
    2. ವಿರಾಟ್ ಕೊಹ್ಲಿ (3 ಟೆಸ್ಟ್, 9 ಏಕದಿನ, 10 ಟಿ20): 1.29+7 ಕೋಟಿ ರೂ.
    3. ರವೀಂದ್ರ ಜಡೇಜಾ (2 ಟೆಸ್ಟ್, 9 ಏಕದಿನ, 4 ಟಿ20): 96 ಲಕ್ಷ+5 ಕೋಟಿ ರೂ.
    4. ಮೊಹಮದ್ ಶಮಿ (3 ಟೆಸ್ಟ್, 6 ಏಕದಿನ, 4 ಟಿ20): 93 ಲಕ್ಷ+5 ಕೋಟಿ ರೂ.
    5. ಕೆಎಲ್ ರಾಹುಲ್ (9 ಏಕದಿನ, 11 ಟಿ20): 87 ಲಕ್ಷ +5 ಕೋಟಿ ರೂ.

    PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    ಸಮಗ್ರ ನೋಟ 2020| ಕ್ರೀಡೆಗೂ ಕರೊನಾ ಕಾರ್ಮೋಡ

    ಸಿಡ್ನಿ ಟೆಸ್ಟ್‌ಗೆ ರೋಹಿತ್ ಬಲ ತುಂಬುವ ನಿರೀಕ್ಷೆ; ಮಯಾಂಕ್, ವಿಹಾರಿಗೆ ಕೊಕ್ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts