More

    ಆರತಕ್ಷತೆ ಚಿತ್ರದಿಂದಾಗಿ ಕೆಂಗಣ್ಣಿಗೆ ಗುರಿಯಾದ ಜಸ್‌ಪ್ರೀತ್ ಬುಮ್ರಾ!

    ಬೆಂಗಳೂರು: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ, ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಜತೆಗೆ ಕಳೆದ ಸೋಮವಾರ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದರ ಬೆನ್ನಲ್ಲೇ ಅವರಿಗೆ ಕ್ರಿಕೆಟ್ ವಲಯ ಮತ್ತು ಅಭಿಮಾನಿಗಳಿಂದ ಶುಭಾಶಯ, ಅಭಿನಂದನೆಗಳ ಸುರಿಮಳೆಯೇ ಆಗಿತ್ತು. ಇದಕ್ಕೆ ಪ್ರತಿಯಾಗಿ ಬುಮ್ರಾ, ತಮಗೆ ಶುಭಾಶಯ ತಿಳಿಸಿದವರಿಗೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಹೇಳಿದ್ದರು. ಜತೆಗೆ ವಿವಾಹ ಆರತಕ್ಷತೆ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ! ಅದಕ್ಕೆ ಕಾರಣವೇನೆಂದು ಗೊತ್ತೇ?

    2017ರ ದೀಪಾವಳಿ ಸಮಯದಲ್ಲಿ ಬುಮ್ರಾ ಟ್ವೀಟ್ ಒಂದನ್ನು ಮಾಡಿದ್ದರು. ಅದರಲ್ಲಿ, ‘ಮನೆಯಲ್ಲೇ ದೀಪಾವಳಿ ಆಚರಿಸುತ್ತಿರುವೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಪಟಾಕಿಗಳಿಗೆ ನೋ ಎನ್ನಿರಿ’ ಎಂದು ಬರೆದುಕೊಂಡಿದ್ದರು. ಟ್ವೀಟ್‌ನಲ್ಲಿ ‘ಸೇ ನೋ ಟು ಕ್ರಾೃಕರ್ಸ್‌’ ಎಂದು ಅವರು ಹ್ಯಾಷ್‌ಟ್ಯಾಗ್ ನೀಡಿದ್ದರು. ಆದರೆ ಶುಕ್ರವಾರ ಬುಮ್ರಾ ಹಂಚಿಕೊಂಡಿದ್ದ ಆರತಕ್ಷತೆ ಸಮಾರಂಭದ ಚಿತ್ರದಲ್ಲಿ ನವಜೋಡಿಯ ಹಿಂದಿರುವ ಮಂದಿ ಸುಡುಮದ್ದು ಹಿಡಿದು ನಿಂತಿರುವುದು ಕಾಣಿಸುತ್ತಿತ್ತು. ಬುಮ್ರಾ ಅವರ ಈ ದ್ವಂದ್ವನೀತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬುಮ್ರಾ ಭಾರಿ ಟ್ರೋಲ್‌ಗಳಿಗೂ ಒಳಗಾಗಿದ್ದಾರೆ.

    ಇದನ್ನೂ ಓದಿ: ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್‌ಗೆ ಮೊದಲ ಸೋಲು

    ‘ದೀಪಾವಳಿಯ ಸಮಯದಲ್ಲಿ ಪಟಾಕಿ ಸುಡಬೇಡಿ ಎಂದು ಬುದ್ದಿವಾದ ಹೇಳುವ ಬುಮ್ರಾ, ವಿವಾಹ ಆರತಕ್ಷತೆಯಲ್ಲಿ ಪಟಾಕಿ ಸಿಡಿಸುತ್ತಾರೆ. ಎಲ್ಲಿದೆ ಲಾಜಿಕ್?’ ಎಂದು ಹಲವು ಕ್ರಿಕೆಟ್ ಪ್ರೇಮಿಗಳು ಬುಮ್ರಾರನ್ನು ಪ್ರಶ್ನಿಸಿದ್ದಾರೆ. ‘ದೀಪಾವಳಿ ವೇಳೆ ಪಟಾಕಿ ಹಚ್ಚಬೇಡಿ ಎನ್ನುತ್ತಾರೆ ಬುಮ್ರಾ. ಆದರೆ ತಮ್ಮ ವಿವಾಹದಲ್ಲಿ ಪಟಾಕಿಯಿಂದಲೇ ಮಿಂಚುತ್ತಾರೆ’ ಎಂದೂ ಕಿಡಿಕಾರಿದ್ದಾರೆ. ‘ದೀಪಾವಳಿ ಸಮಯದಲ್ಲಿ ಬುಮ್ರಾಗೆ ಪಟಾಕಿ ಬೇಡ. ಆದರೆ ತಮ್ಮ ವೈಯಕ್ತಿಕ ಖುಷಿಗೆ ಪಟಾಕಿ ಬೇಕು. ಪಾಠ ಹೇಳುವುದು ಸುಲಭ. ಅದನ್ನು ಪಾಲಿಸುವುದು ಸುಲಭವಲ್ಲ. ಬುಮ್ರಾ ಏನಿದು ದ್ವಂದ್ವನೀತಿ?’ ಎಂದು ಇನ್ನೂ ಕೆಲವರು ಪ್ರಶ್ನಿಸಿದ್ದಾರೆ.

    ‘ದೀಪಾವಳಿ ಸಮಯದಲ್ಲಿ ಪಟಾಕಿ ಬೇಡ ಎನ್ನುವ ಬುಮ್ರಾಗೆ ಇದೀಗ ಈ ಚಿತ್ರವನ್ನು ಹಂಚಿಕೊಳ್ಳಲು ನಾಚಿಕೆಯಾಗುವುದಿಲ್ಲವೇ? ಎಂದೂ ಇನ್ನು ಕೆಲವರು ಕಿಡಿಕಾರಿದ್ದಾರೆ. ಬುಮ್ರಾ ಇನ್ನಾದರೂ ದೀಪಾವಳಿ ಸಮಯದಲ್ಲೂ ಪಟಾಕಿಗೆ ಯೆಸ್ ಎನ್ನಿ ಎಂದೂ ಇನ್ನು ಕೆಲ ಕ್ರಿಕೆಟ್ ಪ್ರೇಮಿಗಳು ಕೇಳಿಕೊಂಡಿದ್ದಾರೆ. ನಿಮ್ಮ ಮದುವೆ ಸಮಾರಂಭಕ್ಕಾಗಿ ಪಟಾಕಿಗಳನ್ನು ಕಾಯ್ದಿರಿಸಲು ದೀಪಾವಳಿ ವೇಳೆ ಪಟಾಕಿಗಳನ್ನು ಸಿಡಿಸಬೇಡಿ ಎಂದು ಹೇಳಿದ್ದಿರಾ ಎಂದೂ ಕಾಲೆಳೆದಿದ್ದಾರೆ. ನಿಮ್ಮ ಪರಿಸರ ಪ್ರೇಮಿ ಅಭಿಯಾನಗಳಿಗೆ ಹಿಂದುಗಳ ಹಬ್ಬಗಳೇ ಬೇಕೇ, ನಿಮ್ಮ ವೈಯಕ್ತಿಕ ಜೀವನದ ಹಬ್ಬ ಆಗುವುದಿಲ್ಲವೇ ಎಂದೂ ಗರಂ ಆಗಿ ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ.

    ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗಕ್ಕೆ ಕರ್ನಾಟಕದ ಹೊಸ ಕೊಡುಗೆ ಪ್ರಸಿದ್ಧಕೃಷ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts