More

    ಜನ್ನಿಕ್ ಸಿನ್ನರ್‌ಗೆ ಚೊಚ್ಚಲ ಗ್ರಾಂಡ್ ಸ್ಲಾಂ: ಆಸ್ಟ್ರೇಲಿಯನ್ ಓಪನ್ ಗೆದ್ದ ಇಟಲಿ ಆಟಗಾರ

    ಮೆಲ್ಬೋರ್ನ್: ಮೊದಲೆರಡು ಸೆಟ್‌ಗಳ ಹಿನ್ನಡೆಯನ್ನು ಹಿಮ್ಮೆಟ್ಟಿಸಿದ ಇಟಲಿಯ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದರು. 22 ವರ್ಷದ ಜನ್ನಿಕ್ ಸಿನ್ನರ್‌ಗೆ ಇದು ಚೊಚ್ಚಲ ಗ್ರಾಂಡ್ ಸ್ಲಾಂ ಟ್ರೋಫಿ ಆಗಿದ್ದು, ಈ ಸಾಧನೆ ಮಾಡಿದ 3ನೇ ಇಟಲಿ ಆಟಗಾರ ಎನಿಸಿದರು. ಭಾನುವಾರ ನಡೆದ ೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಜನ್ನಿಕ್ ಸಿನ್ನರ್ 3-6, 3-6, 6-4, 6-4, 6-3 ಸೆಟ್‌ಗಳಿಂದ ರಷ್ಯಾದ ಡೇನಿಯಲ್ ಮೆಡ್ವೆಡೇವ್ ವಿರುದ್ಧ ಗೆಲುವು ದಾಖಲಿಸಿದರು. ಸೆಮಿೈನಲ್‌ನಲ್ಲಿ 24 ಗ್ರಾಂಡ್ ಸ್ಲಾಂ ವಿಜೇತ ಹಾಗೂ 10 ಬಾರಿಯ ಚಾಂಪಿಯನ್ ನೊವಾಕ್ ಜೋಕೊವಿಕ್ ಪ್ರಾಬಲ್ಯಕ್ಕೆ ಮೆಲ್ಬೋರ್ನ್ ಪಾರ್ಕ್‌ನಲ್ಲಿ ತೆರೆ ಎಳೆಯುವ ಮೂಲಕ ಜನ್ನಿಕ್ ಸಿನ್ನರ್ ೈನಲ್‌ಗೆ ಲಗ್ಗೆಯಿಟ್ಟಿದ್ದರು.

    ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂನ ೈನಲ್‌ನಲ್ಲಿ ಕಣಕ್ಕಿಳಿದಿದ್ದ ಸಿನ್ನರ್, 2021ರ ಯುಎಸ್ ಚಾಂಪಿಯನ್ ಮೆಡ್ವೆಡೇವ್ ಎದುರು ಮೊದಲೆರಡು ಸೆಟ್‌ಗಳ ಹಿನ್ನಡೆ ಅನುಭವಿಸಿದರು. ನಂತರ 3, 4ನೇ ಸೆಟ್ ವಶಪಡಿಸಿಕೊಂಡ ಸಿನ್ನರ್ ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು. ಐದನೇ ಸೆಟ್ ಒಲಿಸಿಕೊಂಡ ಸಿನ್ನರ್ ಹೊಸ ಚಾಂಪಿಯನ್ ಆಗಿ ಉದಯಿಸಿದರು. 3ನೇ ಶ್ರೇಯಾಂಕಿತ ಮೆಡ್ವೆಡೇವ್ 2ನೇ ಬಾರಿ ೈನಲ್‌ನಲ್ಲಿ ಮುನ್ನಡೆ ನಡುವೆಯೂ ಸೋಲುಂಡರು. ಇದಕ್ಕೂ ಮುನ್ನ 2022ರಲ್ಲಿ ರಾೆಲ್ ನಡಾಲ್ ಎದುರು ಮುನ್ನಡೆ ನಂತರ ಮುಗ್ಗರಿಸಿದ್ದರು. ಮೆಡ್ವೆಡೇವ್ ಆಸ್ಟ್ರೇಲಿಯನ್ ಅಂಗಣದಲ್ಲಿ ಮೂರನೇ ಬಾರಿಗೆ ರನ್ನರ್ ಅಪ್ ಆದರು.

    17: ಚಾಂಪಿಯನ್ ಜನ್ನಿಕ್ ಸಿನ್ನರ್ 17.21 ಕೋಟಿ ರೂ. ಬಹುಮಾನ ಒಲಿಸಿಕೊಂಡರೆ, ಮೆಡ್ವೆಡೇವ್ 9.42 ಕೋಟಿ ರೂ.ಗೆ ತೃಪ್ತಿಪಟ್ಟರು.

    3. ಜನ್ನಿಕ್ ಸಿನ್ನರ್ ಪುರುಷರ ಸಿಂಗಲ್ಸ್‌ನಲ್ಲಿ ಗ್ರಾಂಡ್ ಸ್ಲಾಂ ಗೆದ್ದ ಇಟಲಿಯ 3ನೇ ಹಾಗೂ ಆಸ್ಟ್ರೇಲಿಯನ್ ಓಪನ್ ಗೆದ್ದ ಮೊದಲ ಆಟಗಾರ.

    1. ಜನ್ನಿಕ್ ಸಿನ್ನರ್ 2014ರ ಬಳಿಕ ಜೋಕೊವಿಕ್, ರೋಜರ್ ೆಡರರ್ ಹಾಗೂ ರಾೆಲ್ ನಡಾಲ್ ಹೊರತುಪಡಿಸಿ ಆಸ್ಟ್ರೇಲಿಯನ್ ಗ್ರಾಂಡ್ ಸ್ಲಾಂ ಗೆದ್ದ ಮೊದಲ ಆಟಗಾರ. 2014ರಲ್ಲಿ ಸ್ಟಾನ್ ವಾವ್ರಿಂಕಾ ನೂತನ ಚಾಂಪಿಯನ್ ಆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts