More

    ನಾನು ಮತ್ತು ನನ್ನ ತಂದೆ ಶ್ರೀಮಂತರಲ್ಲ! ಜಾಹ್ನವಿ ಕಪೂರ್​ ಅಚ್ಚರಿಯ ಹೇಳಿಕೆ ಹಿಂದಿದೆ ಈ ಕಾರಣ

    ಮುಂಬೈ: ಬಾಲಿವುಡ್​ ದಿಗ್ಗಜ ನಟಿ ಶ್ರೀದೇವಿಯ ಮಗಳಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಾಹ್ನವಿ ಕಪೂರ್, ಸತತ ಕಂಟೆಂಟ್ ಚಿತ್ರಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಆದರೆ, ಒಂದೇ ಒಂದು ಕಮರ್ಸಿಯಲ್​ ಸಿನಿಮಾಗಳಲ್ಲಿ ಇದುವರೆಗೂ ಜಾಹ್ನವಿ ಯಶಸ್ಸು ಕಾಣಲಿಲ್ಲ. ಸ್ಟಾರ್ ಹೀರೋಯಿನ್ ಆಗುವ ಎಲ್ಲಾ ಗುಣಗಳಿದ್ದರೂ ಜಾಹ್ನವಿ ಇನ್ನೂ ಸ್ಟಾರ್ ಹೀರೋಯಿನ್​ಗಳ ಪಟ್ಟಿಗೆ ಬಂದಿಲ್ಲ.

    ಜಾಹ್ನವಿ ಶೀಘ್ರದಲ್ಲೇ ಮಿಲಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಇದು ಕೂಡ ಕಂಟೆಂಟ್ ಆಧಾರಿತ ಸಿನಿಮಾ. ಮಲಯಾಳಂನಲ್ಲಿ ಯಶಸ್ವಿಯಾದ ಹೆಲೆನ್ ಚಲನಚಿತ್ರವನ್ನು ಮಿಲಿ ಎಂಬ ಹೆಸರಿನೊಂದಿಗೆ ಬಾಲಿವುಡ್‌ನಲ್ಲಿ ರಿಮೇಕ್ ಮಾಡಲಾಗಿದೆ. ಜಾಹ್ನವಿ ಸದ್ಯ ಮಿಲಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ, ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಜಾಹ್ನವಿ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ.

    ಸಿನಿಮಾಗಳಲ್ಲಿ ನಟಿಸುವುದಕ್ಕಾಗಿ ಹಣ ನೀಡಲು ಸಾಧ್ಯವಿಲ್ಲ. ಪ್ರತಿಭೆಯ ಆಧಾರದ ಮೇಲೆ ನಾನು ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಜಾಹ್ನವಿ ಹೇಳಿದ್ದಾರೆ. ನನ್ನ ಕುಟುಂಬವನ್ನು ನೋಡಿ ನನಗೆ ಸಿನಿಮಾ ಅವಕಾಶಗಳನ್ನು ನೀಡುತ್ತಿಲ್ಲ. ಮೊದಲು ಒಂದೆರೆಡು ಚಿತ್ರಗಳಲ್ಲಿ ಆ ರೀತಿಯ ಅವಕಾಶ ನೀಡಿರಬಹುದು. ಎಲ್ಲ ಸಿನಿಮಾಗಳಲ್ಲಿ ಅದು ಸಾಧ್ಯವಿಲ್ಲ. ಹಣ ಕೊಟ್ಟು ಅವಕಾಶ ಪಡೆದುಕೊಳ್ಳುವಷ್ಟು ಶ್ರೀಮಂತ ಕುಟುಂಬ ನಮ್ಮದ್ದಲ್ಲ. ನನ್ನ ಪ್ರತಿಭೆಯ ಮೂಲಕ ನಾನು ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದಿದ್ದಾರೆ.

    ನನ್ನನ್ನು ಸ್ಟಾರ್ ಮಗಳೆಂದು ಕರೆದೊಯ್ದು ಅವಕಾಶ ನೀಡುವ ಮೂಲಕ ಯಾರೂ ಸೋಲಲು ಬಯಸುವುದಿಲ್ಲ. ನಾನು ಮತ್ತು ನನ್ನ ತಂದೆ ಕೂಡ ಅಂತಹ ನಷ್ಟಗಳನ್ನು ಬಯಸುವುದಿಲ್ಲ. ಆ ನಷ್ಟವನ್ನು ಭರಿಸುವಷ್ಟು ನಾವು ಶ್ರೀಮಂತರಲ್ಲ. ನನ್ನ ತಂದೆ ಮತ್ತು ನಾನು ಸಿನಿಮಾದಲ್ಲಿ ಹಣ ವ್ಯರ್ಥ ಮಾಡುವಷ್ಟು ಶ್ರೀಮಂತರಲ್ಲ. ನನ್ನ ಟ್ಯಾಲೆಂಟ್ ಮೇಲೆ ನಂಬಿಕೆ ಇಟ್ಟು ಸಿನಿಮಾ ಅವಕಾಶಗಳು ಬರುತ್ತಿವೆ ಎಂದು ಜಾಹ್ನವಿ ಹೇಳಿದರು. ಬಾಲಿವುಡ್​ನಲ್ಲಿನ ಸ್ವಜನಪಕ್ಷಪಾತದ ಬಗ್ಗೆ ಮಾತನಾಡುವಾಗ ಜಾಹ್ನವಿ ಈ ಉತ್ತರವನ್ನು ನೀಡಿದರು.

    ಅಂದಹಾಗೆ ಜಾಹ್ನವಿ ಕಪೂರ್​ ಅವರ ಮಿಲಿ ಸಿನಿಮಾ ನವೆಂಬರ್​ 4ರಂದು ತೆರೆ ಕಾಣಲಿದೆ. (ಏಜೆನ್ಸೀಸ್​)

    ತೋಟದಲ್ಲಿ ಕೆಲ್ಸ ಮಾಡಲು ಹೋಗಿದ್ದ ಮಹಿಳೆಯನ್ನು ಜೀವಂತ ನುಂಗಿದ ಹೆಬ್ಬಾವು! ಭಯಾನಕ ಫೋಟೋಗಳು ವೈರಲ್​

    ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: ಚಾರ್ಜ್​ಶೀಟ್​ನಲ್ಲಿ ಕೀಚಕ ಕಾಂತರಾಜ್​ನ ಕರಾಳ ಇತಿಹಾಸ ಬಯಲು​

    ಅಪ್ರಾಪ್ತೆಯನ್ನು ‘ಐಟಂ’ ಎಂದು ಕರೆದ ಯುವಕನಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts