More

    ಮಗು ಬೇಕು ಎಂದು ಜೋಕ್ ಮಾಡಿದ ಜಾಹ್ನವಿ ಕಪೂರ್​!

    ಶ್ರೀದೇವಿ ಮಗಳು ಜಾಹ್ನವಿ ಕಪೂರ್​ ಇನ್​ಸ್ಟಾಗ್ರಾಂನಲ್ಲಿ ಯಾವಾಗಲೂ ತಮ್ಮ ಫೋಟೋಗಳು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಫೋಟೋಗಳಿಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ ಮತ್ತು ಪ್ರತಿ ಸಾವಿರಾರು ಲೈಕ್ಸ್​ ಬೀಳುತ್ತಿರುತ್ತವೆ.

    ಇದನ್ನೂ ಓದಿ: ಸುದೀಪ್​ ಯಾಕೆ ಒಪ್ಪಲಿಲ್ಲ ಎಂದು ಗೊತ್ತಿಲ್ಲ: ಸುಧಾಕರ್​

    ಮಗು ಬೇಕು ಎಂದು ಜೋಕ್ ಮಾಡಿದ ಜಾಹ್ನವಿ ಕಪೂರ್​!

    ಶುಕ್ರವಾರ ಸಹ ಜಾಹ್ನವಿ ತಮ್ಮದಂದು ಫೋಟೋ ಹಾಕಿಕೊಂಡಿದ್ದಾರೆ. ಹೀರ್ಸ್​ ಲುಕಿಂಗ್​ ಅಟ್​ ಯು ಕಿಡ್​ ಎಂಬ ಕ್ಯಾಪ್ಶನ್​ ಸಹ ಆ ಫೋಟೋಗೆ ಅವರು ಹಾಕಿಕೊಂಡಿದ್ದಾರೆ. ಈ ಫೋಟೋ ಸದ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಜನಪ್ರಿಯವಾಗಿದ್ದು, ಒಬ್ಬ ಅಭಿಮಾನಿಯಂತೂ 10ಕ್ಕೆ 11 ಮಾರ್ಕ್​ ಕೊಟ್ಟಿದ್ದಾರೆ. ಇನ್ನೂ ಹಲವರು ರೆಡ್​ ಹಾರ್ಟ್​ ​ಎಮೋಜಿಗಳನ್ನು ಹಾಕುವ ಮೂಲಕ ಜಾಹ್ನವಿ ಅವರ ಫೋಟೋ ಮೆಚ್ಚಿಕೊಂಡಿದ್ದಾರೆ.

    ಎಲ್ಲಕ್ಕಿಂತ ಮಜವೆಂದರೆ, ಒಬ್ಬರ ಕಮೆಂಟ್​ ಮತ್ತು ಜಾಹ್ನವಿ ಅದಕ್ಕೆ ನೀಡಿರುವ ಪ್ರತಿಕ್ರಿಯೆ. ಕಿಡ್​ ಎಂದು ಬರೆದಿರುವುದನ್ನು ನೋಡಿ, ಯಾರ ಮಗು, ನಿಮಗೆ ಮಗು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ, ಯೆಸ್​ ಎಂದು ಜೋಕ್​ ಮಾಡಿದ್ದಾರೆ ಜಾಹ್ನವಿ. ಆಕೆಯೇನೋ ತಮಾಷೆಗೆ, ಮಗು ಬೇಕು ಎಂದು ಹೇಳಿಕೊಂಡಿರಬಹುದು. ಆದರೆ, ಇಂಟರ್​ನೆಟ್​ನಲ್ಲಿ ಜಾಹ್ನವಿಗೆ ಮಗು ಬೇಕಂತೆ ಎಂದು ಸಾಕಷ್ಟು ಸುದ್ದಿಯಾಗಿದೆ.

    ಇದನ್ನೂ ಓದಿ: ‘ಕೆಲಸವಿಲ್ಲದೆ ಇರೋದು ಹಿಂಸೆ’: ಲಾಕ್​ಡೌನ್​ನಲ್ಲಿ ಸಂಜನಾ ಅರಿತ ಸತ್ಯ

    ಇನ್ನು ಇತ್ತೀಚೆಗೆ ಜಾಹ್ನವಿ ಕಪೂರ್​ ಅವರ ಮನೆಯ ಮೂವರು ಕೆಲಸದವರಿಗೆ ಕರೊನಾ ಪಾಸಿಟಿವ್​ ಪತ್ತೆಯಾಗಿತ್ತು. ಆ ನಂತರ, ಜಾಹ್ನವಿ ಕಪೂರ್​ ಕುಟುಂಬದ ಯಾವ ಸದಸ್ಯರಿಗೂ ಸಮಸ್ಯೆ ಇಲ್ಲ ಎಂದು ಹೇಳಲಾಗಿತ್ತು. ಮೇ 22ಕ್ಕೆ ಪಾಸಿಟಿವ್​ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಮನೆಯ ಮೂವರು ಕೆಲಸಗಾರರ ಕರೊನಾ ಪರೀಕ್ಷೆ ನೆಗೆಟಿವ್​ ಬಂದಿದ್ದು, ಸದ್ಯ ಜಾಹ್ನವಿ ಕಪೂರ್​ ಮತ್ತು ಆಕೆಯ ತಂದೆ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ನಿಟ್ಟುಸಿರು ಬಿಟ್ಟಿದ್ದಾರೆ.

    PHOTO GALLERY| ಬರ್ತಡೇ ಗರ್ಲ್​ ಭಾವನಾ ರಾವ್​ ಹಾಟ್​ ಫೋಟೋಗಳು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts