More

    ವಾಹನಗಳ ಮೇಲೆ ನಿಗಾವಹಿಸಿ; ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ

    ಗಂಗಾವತಿ: ಪ್ರತಿಯೊಂದು ವಾಹನ ಮೇಲೆ ನಿಗಾವಹಿಸಬೇಕಿದ್ದು, ಅಧಿಕಾರಿಗಳು ಮಾದರಿ ನೀತಿ ಸಂಹಿತೆಯಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚನೆ ನೀಡಿದರು.


    ತಾಲೂಕಿನ ಜಂಗಮರಕಲ್ಗುಡಿಯಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ಗೆ ಶನಿವಾರ ಭೇಟಿ ನೀಡಿ ಮಾತನಾಡಿದರು. ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿ ಕೂಲಂಕಷವಾಗಿ ವಾಹನಗಳ ತಪಾಸಣೆ ನಡೆಸಬೇಕು. ಚೆಕ್‌ಪೋಸ್ಟ್‌ನಲ್ಲಿ ಕುಡಿವ ನೀರು, ಬೆಳಕಿನ ವ್ಯವಸ್ಥೆ ಸೇರಿ ಇತರ ಸೌಲಭ್ಯ ಕಲ್ಪಿಸಲಾಗಿದೆ. ಗಂಗಾವತಿ-ಕಾರಟಗಿ ಸಂಪರ್ಕದ ಎಲ್ಲ ವಾಹನಗಳ ಮೇಲೂ ನಿಗಾವಹಿಸಬೇಕು. ಅನುಮಾನಾಸ್ಪದ ವಾಹನಗಳ ಬಗ್ಗೆ ಮಾಹಿತಿ ದೊರೆತರೆ ಕೂಡಲೇ ತಪಾಸಣೆ ಮಾಡಬೇಕು. ನೀತಿ ಸಂಹಿತಿ ಉಲ್ಲಂಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.


    ತಾಪಂ ಇಒ ಮಹಾಂತಗೌಡ ಪಾಟೀಲ್, ಪಿಡಿಒ ರಾಮುನಾಯ್ಕ, ಪ್ರಭುರಾಜ್ ಪಾಟೀಲ್, ತೋಟಗಾರಿಕೆ ಇಲಾಖೆ ಎಡಿ ರೇವಣಪ್ಪ, ಚುನಾವಣೆ ಸಿಬ್ಬಂದಿ ಅಮರೇಶ, ದೇವೇಂದ್ರ, ತಾಪಂ ಸಹಾಯಕರಾದ ಭೀಮಣ್ಣ, ಶರಣಬಸಪ್ಪ, ಬಸವರಾಜ ಜಟಗಿ, ಬಾಳಪ್ಪ ತಾಳಕೇರಿ, ಮಲ್ಲಿಕಾರ್ಜುನ ಇತರರಿದ್ದರು.
    ಮಾಹಿತಿ ಪಡೆದ ಎಸಿ: ನೀತಿ ಸಂಹಿತೆ ಪಾಲನೆ ಹಿನ್ನೆಲೆಯಲ್ಲಿ ಗಂಗಾವತಿ ನಗರಸಭೆ ಸಭಾಂಗಣದಲ್ಲಿ ವಿವಿಧ ಧರ್ಮಗಳ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು. ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ಚುನಾವಣೆ ಅಧಿಕಾರಿ ಹಾಗೂ ಎಸಿ ಬಸವಣ್ಣಪ್ಪ ಕಲ್ಲಶೆಟ್ಟಿ ಮಾಹಿತಿ ನೀಡಿದರಲ್ಲದೆ, ದೂರುಗಳಿದ್ದರೆ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ, ಇಲ್ಲವೇ ಸಿ-ವಿಜಿಲ್ ಆ್ಯಪ್‌ಗೆ ದಾಖಲೆ ಅಪಲೋಡ್ ಮಾಡುವಂತೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts