More

    ಕಾಂಗ್ರೆಸ್ ಜತೆ ಮೈತ್ರಿಗೆ ಜನತಾ ಪಕ್ಷ ಸಿದ್ಧ * ಬಿ.ಟಿ.ಲಲಿತಾನಾಯಕ

    ಹಾವೇರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಲೇಬೇಕು ಎಂಬ ಉದ್ದೇಶದಿಂದ ಜನತಾ ಪಕ್ಷ ಸೇರಿದಂತೆ ಹಲವು ಪಕ್ಷಗಳು ಸೇರಿ ಈ ಬಾರಿ ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧ ಎಂದು ಜನತಾ ಪಕ್ಷದ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ ಘೋಷಿಸಿದರು. ನಗರದ ಪಿಬಿ ರಸ್ತೆಯ ಮೆಣಸಿನಕಾಯಿ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಜನತಾ ಪಕ್ಷದ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇಂಡಿಯನ್ ಮೂಮೆಂಟ್ ಪಾರ್ಟಿ, ಎಐಎಂಐಎಂ ಸೇರಿದಂತೆ ಐದಾರು ಸಣ್ಣ ಪಕ್ಷಗಳು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಈ ಬಾರಿ ಅಧಿಕಾರಕ್ಕೆ ಬರಲು ತೀರ್ಮಾನಿಸಲಾಗಿದೆ ಎಂದರು.
    ಹಾವೇರಿ ತಾಲೂಕಿನಲ್ಲಿ ವರದಾ ಹಾಗೂ ತುಂಗಭದ್ರಾ ನದಿ ಹರಿದಿದ್ದರೂ ತಾಲೂಕಿನ ಜನತೆಗೆ ಸರಿಯಾಗಿ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರು ಕೊಡಲು ಬಿಜೆಪಿಯವರಿಗೆ ಆಗಿಲ್ಲ. ಇದೇ ಜಿಲ್ಲೆಯವರರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಈ ಬಗ್ಗೆ ಗಮನ ಹರಿಸಿಲ್ಲ. ಕೈಗಾರಿಕಾ ವಲಯ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಆಗಿಲ್ಲ ಎಂದು ಆರೋಪಿಸಿದರು.
    ಹಾವೇರಿ ರೈಲು ನಿಲ್ದಾಣದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಹೆಸರಲ್ಲಿ ಕರ್ಕಶ ಧ್ವನಿಯಲ್ಲಿ ಜಾಹೀರಾತು ಪ್ರಕಟವಾಗುತ್ತಿತ್ತು. ರೈಲಿನ ಮೇಲೂ ಮೋದಿ ಚಿತ್ರ ಅಂಟಿಸಲಾಗಿತ್ತು. ನಿಜವಾಗಿಯೂ ಜನಪರ ಕೆಲಸ ಮಾಡಿದ್ದರೆ, ಈ ರೀತಿ ಅಡ್ಡದಾರಿ ಹಿಡಿದು ಪ್ರಚಾರ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಟೀಕಿಸಿದರು.
    ಈ ವೇಳೆ ಪಕ್ಷದ ಬಿಹಾರದ ರಾಜ್ಯಾಧ್ಯಕ್ಷ ವಿನೋದಕುಮಾರ ಸಿನ್ಹಾ, ಜಿಲ್ಲಾಧ್ಯಕ್ಷ ಕೆ.ಸಿ.ಗುಡಗೇರಿ, ಶಿವಕುಮಾರ ತಳವಾರ, ಜಯಶ್ರೀ ಚಿಕ್ಕಮಠ, ಪ್ರದೀಪ ಹೆಗಡೆ, ಈರಣ್ಣ ಬಾಳಿಕಾಯಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts