More

    ಅಧಿಕೃತವಾಗಿ ರಾಜಕೀಯಕ್ಕೆ ಇಳಿದ ಜನಾರ್ದನ ರೆಡ್ಡಿ ಪತ್ನಿ; ಪಕ್ಷದ ಅಧಿಕೃತ ಬಾವುಟ ಹೀಗಿದೆ ನೋಡಿ..!

    ಬಳ್ಳಾರಿ: ಹೊಸ ಪಕ್ಷವನ್ನು ಸೇರಿಸಲು ಮುಂದಾಗಿದ್ದ ಜನಾರ್ದನ ರೆಡ್ಡಿ ದೇಶಾದ್ಯಂತ ಸುದ್ದಿಗೆ ಕಾರಣವಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಚುನಾವಣೆ ಇನ್ನೇನು ಬಾಗಿಲ ಬಳಿ ಇದೆ ಎನ್ನುವಾಗ ಹೊಸ ಪಕ್ಷ ರಚಿಸಿ ಎಲ್ಲರಿಗೂ ಶಾಕ್​ ನೀಡಿದ್ದರು.​

    ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಗೆ ಪ್ರವೇಶ ನಿಷೇಧ ಆಗಿರುವ ಕಾರಣ ಅಲ್ಲಿ ಅವರ ಪತ್ನಿ ಅಧಿಕೃತವಾಗಿ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದೀಗ ಗೋ ಪೂಜೆ ಮೂಲಕ ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ, ತಮ್ಮ ಮೊದಲ ಸಾರ್ವಜನಿಕ ಸಭೆಗೆ ಹೊರಟಿದ್ದಾರೆ.

    ಬಳ್ಳಾರಿಯ ತಮ್ಮ ನಿವಾಸದಲ್ಲಿ ಗೋ ಪೂಜೆ ಮಾಡಿ ಉಡಿ ತುಂಬಿಸಿ ಅರುಣಾ ಜನಾರ್ದನ ರೆಡ್ಡಿ, ಬಳ್ಳಾರಿಯ ಬೆಣಕಲ್ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೊರಟಿದ್ದಾರೆ.

    ಬೆಣಕಲ್​ನಲ್ಲಿ ಉಡಿ ತುಂಬುವ ಹಾಗೂ ಸಾರ್ವಜನಿಕ ಸಭೆ ಆಯೋಜನೆ ಮಾಡಲಾಗಿದ್ದು ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಅರುಣಾ ಜನಾರ್ದನ ರೆಡ್ಡಿ ಭಾಗಿಯಾಗಲಿದ್ದಾರೆ. ಬೆಣಕಲ್ ಗ್ರಾಮದಲ್ಲಿ ಕುರುಬರ ಮನೆಯಲ್ಲಿ ಉಡಿ ತುಂಬೋ ಕಾರ್ಯಕ್ರಮ ನಡೆಯಲಿದ್ದು ದುರ್ಗಮ್ಮ, ಬೀರಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ರೆಡ್ಡಿ ಪತ್ನಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂಬಿಕೆಗಳ ಪ್ರಕಾರ ಕುರುಬರ ಮನೆಯಲ್ಲಿ ಉಡಿತುಂಬಿಸಿಕೊಂಡ್ರೇ ಯಶಸ್ಸು ಸಿಗುತ್ತದೆ ಎನ್ನಲಾಗುತ್ತದೆ.

    ಇವರು ಗೋ ಪೂಜೆ ಮಾಡೋ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದ್ದು ಹೊಸ ವರ್ಷದ ದಿನವೇ ಹೊಸ ಪಕ್ಷದ ಮೂಲಕ ಜನಾರ್ದನ ರೆಡ್ಡಿ, ತಮ್ಮ ಹೊಸ ರಾಜಕೀಯದ ಆಟಕ್ಕೆ ಚಾಲನೆ ನೀಡಿದ್ದಾರೆ.

    ಹೇಗಿದೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಬಾವುಟ?
    ಈ ಕಾರ್ಯಕ್ರಮದ ಭಾಗವಾಗಿ ಅರುಣಾ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಬಾವುಟ ಅನಾವರಣ ಮಾಡಿದ್ದಾರೆ. ಜನಾರ್ದನ ರೆಡ್ಡಿಗೆ ಬಳ್ಳಾರಿ ಎಂಟ್ರಿ ನಿಷೇಧ ಇರುವುದರಿಂದ ಅವರ ಪತ್ನಿ ಅಖಾಡಕ್ಕೆ ಇಳಿದಿದ್ದಾರೆ. ಇದೇ ಮೊದಲ ಬಾರಿಗೆ ಬಾವುಟ ಅನಾವರಣ ಮಾಡಿ, ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಹಿಂದೆ ಕ್ರಿಸ್ ಮಸ್ ದಿನ ಜನಾರ್ದನ ರೆಡ್ಡಿ ಪಕ್ಷ ಘೋಷಣೆ ಮಾಡಿದ್ದರು. ಇಂದು ಹೊಸ ವರ್ಷದ ದಿನ ಅವರ ಪತ್ನಿ ಪಕ್ಷದ ಬಾವುಟ ಅನಾವರಣ ಮಾಡಿದ್ದಾರೆ. ಪಕ್ಷ ಘೋಷಣೆ ಮಾಡಿದ ಒಂದೇ ವಾರಕ್ಕೆ ಅಧಿಕೃತ ಬಾವುಟವನ್ನೂ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಥವಾ ಕೆಆರ್​ಪಿಪಿ ಮುಂದಿನ ದಿನಗಳಲ್ಲಿ ಯಾವ ರೀತಿಯ ನಡೆ ಇಡಲಿದೆ? ಚುನಾವಣೆ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವುದು ನಿಜಕ್ಕೂ ಕುತೂಹಲದ ಸಂಗತಿ.

    ಅಧಿಕೃತವಾಗಿ ರಾಜಕೀಯಕ್ಕೆ ಇಳಿದ ಜನಾರ್ದನ ರೆಡ್ಡಿ ಪತ್ನಿ; ಪಕ್ಷದ ಅಧಿಕೃತ ಬಾವುಟ ಹೀಗಿದೆ ನೋಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts